ಹುಬ್ಬಳ್ಳಿ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇನ್ಮುಂದೆ ಹಾವೇರಿ ನಿಲ್ದಾಣದಲ್ಲಿಯೂ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 20661/20662 ಕೆಎಸ್ಆರ್ ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲನ್ನು ಹಾವೇರಿಯ ಶ್ರೀ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಎರಡು ನಿಮಿಷಗಳ ನಿಲುಗಡೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 11ರಿಂದ ಧಾರವಾಡದಿಂದ ಬೆಂಗಳೂರಿಗೆ ತೆರಳುವ ರೈಲು ಸಂಖ್ಯೆ 20662 ಹಾಗೂ ಏಪ್ರಿಲ್ 12ರಿಂದ ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸುವ ರೈಲು ಸಂಖ್ಯೆ 20661 ನಿಲುಗಡೆಯಾಗುವ ಮೂಲಕ ಇದು ಜಾರಿಗೆ ಬರಲಿದೆ.
ನಿಟ್ಟೂರಿನಲ್ಲಿ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್ ಒಂದು ನಿಮಿಷ ನಿಲುಗಡೆ: ಜೊತೆಗೆ, ರೈಲು ಸಂಖ್ಯೆ 16239/16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್ ರೈಲುಗಳಿಗೆ ನಿಟ್ಟೂರು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಒಂದು ನಿಮಿಷದ ನಿಲುಗಡೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 10ರಿಂದ ರೈಲು ಸಂಖ್ಯೆ 16240 ಯಶವಂತಪುರದಿಂದ ಚಿಕ್ಕಮಗಳೂರಿಗೆ ಬರುವಾಗ ಹಾಗೂ ಏಪ್ರಿಲ್ 11ರಿಂದ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರಕ್ಕೆ ತೆರಳುವ ಸಂದರ್ಭದಿಂದ ಆರಂಭ ಆಗಲಿದೆ.
ನಿಟ್ಟೂರಿನಲ್ಲಿ ರೈಲುಗಳ ಆಗಮನ ಹಾಗೂ ನಿರ್ಗಮನ ಸಮಯ ಈ ಕೆಳಗಿನಂತಿದೆ.
- ಯಶವಂತಪುರದಿಂದ ಚಿಕ್ಕಮಗಳೂರಿಗೆ ತೆರಳುವ ರೈಲು ಸಂಖ್ಯೆ 16240 ನಿಟ್ಟೂರು ನಿಲ್ದಾಣಕ್ಕೆ ಸಂಜೆ 4:57ಕ್ಕೆ ಆಗಮಿಸಿ, 4:58ಕ್ಕೆ ಹೊರಡಲಿದೆ.
- ಚಿಕ್ಕಮಗಳೂರಿನಿಂದ ಯಶವಂತಪುರಕ್ಕೆ ತೆರಳುವ ರೈಲು ಸಂಖ್ಯೆ 16239 ನಿಟ್ಟೂರು ನಿಲ್ದಾಣಕ್ಕೆ ಬೆಳಗ್ಗೆ 11:22ಕ್ಕೆ ಆಗಮಿಸಿ, 11:23ಕ್ಕೆ ಹೊರಡಲಿದೆ.