ನವದೆಹಲಿ, ಡಿ.10- ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿದ್ದ ಜೆಟ್ ಏರ್‌ವೇಸ್ ಮುಂದಿನ ವರ್ಷ 2021ರ ಬೇಸಿಗೆ ವೇಳೆಗೆ ಮತ್ತೆ ತನ್ನ ಹಾರಾಟವನ್ನು ಆರಂಭಿಸಲಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಯಚರಣೆಯನ್ನು ಆರಂಭಿಸುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಟ್ ಏರ್‌ವೇಸ್ ಮಾಲೀಕತ್ವ ವಹಿಸಿಕೊಂಡಿರುವ ಜಲನ್‍ಕಾಲ್‍ರಾಕ್ ಒಕ್ಕೂಟ (ಎನ್‍ಎಲ್‍ಸಿಟಿ) ಘೋಷಿಸಿದೆ.
ಕಳೆದು ಹೋಗಿರುವ ನಮ್ಮ ಐತಿಹಾಸಿಕ ಸ್ಥಾನವನ್ನು ಮರುಪಡೆಯಲು ಮತ್ತು ವಿಮಾನಯಾನ ಉದ್ಯಮಕ್ಕೆ ಹೊಸ ಮಾನದಂಡಗಳನ್ನು ಸ್ಥಾಪಿಸಿ ಅತ್ಯುತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹಿಂದಿಗಿಂತಲೂ ಹೆಚ್ಚಿನ ಕಾರ್ಯಶ್ರದ್ಧೆ ಹಾಗೂ ಉತ್ಸಾಹ ಹೊಂದಿರುವುದಾಗಿ ಸಂಸ್ಥೆ ತಿಳಿಸಿದೆ.ಭಾರತದ ಪ್ರಮುಖ ನಗರಗಳಿಗೆ ವಿಮಾನ ಸೇವೆಯನ್ನು ಆರಂಭಿಸುವ ದೂರದೃಷ್ಟಿಯನ್ನು ಕೂಡ ಹೊಂದಲಾಗಿದೆ. ಇದಲ್ಲದೆ ಪ್ರಸ್ತುತ ಕೋವಿಡ್ ಲಸಿಕೆಯನ್ನು ಸಾಗಾಣೆ ಮಾಡುವ ಕುರಿತು ಭಾರತ ಸರ್ಕಾರ ಸರಕು ಸಾಗಾಣೆ ವಿಮಾನಗಳ ಬಳಕೆಗೆ ಗಮನ ಹರಿಸಿದ್ದು, ಇದಕ್ಕೆ ಜೆಟ್ ಏರ್‌ವೇಸ್ ಸಿದ್ದವಿದೆ ಎಂದು ಒಕ್ಕೂಟದ ಆಡಳಿತ ಮಂಡಳಿ ಸದಸ್ಯ ಮನೋಜ್ ನರೇಂದ್ರನ್ ಮದನಾನಿ ತಿಳಿಸಿದ್ದಾರೆ.
Laxmi News 24×7