ರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ
ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಂದಿಕುರಳಿ ಗ್ರಾಮ ಹದ್ದಿ ಜಮೀನದಲ್ಲಿ ಸುಮಾರು 7.82ಲಕ್ಷ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳವಾರ ಬೆಳಗ್ಗೆ ತಾಲೂಕಿನ ನಂದಿಕುರಳಿ ಗ್ರಾಮ ಹದ್ದಿ ಜಮೀನ ರಿ.ಸ ನಂ. 303/5 ನೇದ್ದರಲ್ಲಿ ರಾಯಪ್ಪ ಸತ್ಯಪ್ಪ ತೋಳಿ ಸಾ: ಕಂಚಕರವಾಡಿ ಇವನು ತನ್ನ ಪಾಲಿನಿಂದ ಮಾಡಿದ ಜಮೀನದಲ್ಲಿ ಕಬ್ಬಿನ ಬೆಳೆಯಲ್ಲಿ ಅನಧೀಕೃತವಾಗಿ ಗಾಂಜಾಗೆ ಹೋಲುವ ಮಾದಕ ಪದಾರ್ಥದ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿರುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ, ಮಾನ್ಯ ಹೆಚ್ಚುವರಿ ಎಸ್ ಪಿ ಸಾಹೇಬರು ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿಎಸ್ ಪಿ ಸಾಹೇಬರ ನೇತೃತ್ವದಲ್ಲಿ ರಾಯಬಾಗ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಕೂಡಿ ಕಾರ್ಯಾಚರಣೆ ಮಾಡಿ ಆರೋಪಿತನ ತಾಬಾದಿಂದ ಒಣ ಗಾಂಜಾ ಮಾಲನ್ನು ವಶಪಡಿಸಿಕೊಂಡು, ಕಂಚಕರವಾಡಿಯ ಆರೋಪಿ ರಾಯಪ್ಪ ಸತ್ಯಪ್ಪ ತೋಳೆ ಇವನಿಗೆ ದಸ್ತಗೀರ ಮಾಡಿ ಬಂಧಿಸಿದ್ದಾರೆ.
ಈ ಪ್ರಕರಣದ ತನಿಖಾಧಿಕಾರಿಗಳನ್ನು ಮತ್ತು ತನಿಖಾ ತಂಡವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಮಾನ್ಯ ಭೀಮಾಶಂಕರ ಗುಳೇದ ಐಪಿಎಸ್. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್ ಬಿ ಬಸರಗಿ ಮತ್ತು ಶೃತಿ ಹಾಗೂ ಅಥಣಿ ಉಪ ವಿಭಾಗ ಡಿ.ಎಸ್.ಪಿ ಪ್ರಶಾಂತ ಮುನ್ನೋಳ್ಳಿರವರು ಪ್ರಶಂಶಿಸಿರುತ್ತಾರೆ