ಲಕ್ನೋ: ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಪ್ರತಾಪಗಢದ ಲಾಲ್‍ಗಂಜ್ ವ್ಯಾಪ್ತಿಯ ಬೆಲ್ಹಾ ಗ್ರಾಮದ ಐಟಿಐ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧೀರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ಧೀರೇಂದ್ರ ಪ್ರತಾಪಘಢನಲ್ಲಿ ಐಟಿಐ ಓದುತ್ತಿದ್ದನು. ರಜೆ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಆಗಮಿಸಿದ್ದನು. ಮನೆಗೆ ಬಂದವನು ಎರಡನೇ ಮಹಡಿಯಲ್ಲಿರುವ ಕೋಣೆ ಸೇರಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ ತಾಯಿ ಊಟಕ್ಕೆ ಕರೆದಾಗಲೂ ಕೋಣೆಯಿಂದ ಉತ್ತರ ಬಂದಿಲ್ಲ. ಬಾಗಿಲು ತಟ್ಟಿದ್ರೂ ಮಗ ಉತ್ತರಿಸಿದರಿಂದ ಆತಂಕಗೊಂಡ ತಾಯಿ ಬೆಳಕಿನ ಕಿಂಡಿಯಲ್ಲಿ ಇಣುಕಿದಾಗ ಮಗನ ಶವ ನೇತಾಡುತ್ತಿರುವ ಭಯಾನಕ ದೃಶ್ಯ ಕಂಡಿದೆ.

ತಾಯಿಯ ಕಿರುಚಾಟ ಕೇಳಿ ಆಗಮಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧೀರೇಂದ್ರ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ತನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಂದು ಬರೆದಿದ್ದಾನೆ. ಹಾಗೆ ತಂದೆ-ತಾಯಿಗೂ ಕ್ಷಮೆ ಕೇಳಿದ್ದಾನೆ.
Laxmi News 24×7