Breaking News

ಕಾವೇರಿಗಾಗಿ ನಾಳೆ ರಾಜ್ಯ ಬಂದ್.. ದಕ್ಷಿಣ ಕನ್ನಡದಲ್ಲಿ ಇಲ್ಲ ಬೆಂಬಲ

Spread the love

ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ವಿಚಾರದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸಿ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಆದರೆ, ಕರ್ನಾಟಕ ಬಂದ್​ಗೆ ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಕಾವೇರಿ ಹೋರಾಟದ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸರ್ಕಾರದ ಮನವಿಗೂ ಮಣಿಯದೇ ಕನ್ನಡ ಪರ ಮತ್ತು ರೈತ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಬಂದ್ ನಿರ್ಧರವನ್ನು ಕೈಬಿಡಲು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಇದಕ್ಕೆ ಕನ್ನಡಪರ ಮತ್ತು ರೈತ ಪರ ಸಂಘಟನೆಗಳು ಒಪ್ಪದೇ ಬಂದ್ ಮಾಡಲು ನಿರ್ಧರಿಸಿವೆ.

ಆದರೆ, ಈ ನಿರ್ಧಾರಕ್ಕೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಂಘಟನೆಗಳು ಕರ್ನಾಟಕ ರಾಜ್ಯ ಬಂದ್​ಗೆ ಬೆಂಬಲ ಸೂಚಿಸಿಲ್ಲ. ದಕ್ಷಿಣ ಕನ್ನಡದಲ್ಲಿ ಬ್ಯಾಂಕ್, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ನಿರಾತಂಕವಾಗಿ ನಡೆಯಲಿವೆ. ಇನ್ನು ಬಂದ್ ಯಶಸ್ವಿಯಾಗಬೇಕಾದರೆ, ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳ ಪ್ರಾಬಲ್ಯವಿದೆ. ಖಾಸಗಿ ಬಸ್​ಗಳು ಬಂದ್ ನಡೆಸುವ ಸಾಧ್ಯತೆ ತೀರಾ ಕಡಿಮೆ. ಇನ್ನು ಸರ್ಕಾರಿ ಬಸ್​ಗಳು ಇಲ್ಲಿ ನಿರಾತಂಕವಾಗಿ ಸಂಚರಿಸಲಿವೆ.


Spread the love

About Laxminews 24x7

Check Also

ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ

Spread the loveದೆಹಲಿ: ಪ್ರಸ್ತುತವಾಗಿ ನಾವು ವಕ್ಫ್ ವಿರುದ್ಧ ಮಾಡಿದ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ, ಮುಂದಿನ ಸಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ