Breaking News

ಬಾಕ್ಸಿಂಗ್ಸ್​ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ನಿಖತ್ ಜರೀನ್.. ಡ್ರೆಸ್ಸೇಜ್ ಇಂಡಿವಿಜುವಲ್​ನಲ್ಲಿ ಪದಕ ನಿರೀಕ್ಷೆ

Spread the love

ಹ್ಯಾಂಗ್‌ಝೌ (ಚೀನಾ): ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಚೊರೊಂಗ್ ಬಾಕ್ ವಿರುದ್ಧ 5-0 ಅಂತರದಿಂದ ಜಯಗಳಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಮಹಿಳೆಯರ 50 ಕೆಜಿ ವರ್ಗದ 16 ರ ಸುತ್ತಿನಲ್ಲಿ ನಿಖತ್ ತನ್ನ ಕೊರಿಯಾದ ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸಿದರು. ಅಂತಿಮವಾಗಿ ಅವರು 5-0 ಪಾಯಿಂಟ್‌ಗಳಿಂದ ಪಂದ್ಯವನ್ನು ಗೆದ್ದರು.

ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 57-63.5 ಸುತ್ತಿನ 16 ಪಂದ್ಯಗಳಲ್ಲಿ, ಶಿವ ಥಾಪಾ ಕಿರ್ಗಿಸ್ತಾನ್‌ನ ಅಸ್ಕತ್ ಕುಲ್ತಾವ್ ವಿರುದ್ಧ 0-5 ರಿಂದ ಸೋಲನುಭವಿಸಿದರು.ಪುರುಷರ 92 ಕೆಜಿ ವಿಭಾಗದಲ್ಲಿ ಸಂಜೀತ್ ತನ್ನ ಸುತ್ತಿನ 16 ಪಂದ್ಯವನ್ನು ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಉಜ್ಬೇಕಿಸ್ತಾನ್‌ನ ಲಾಜಿಜ್‌ಬೆಕ್ ಮುಲ್ಲೊಜೊನೊವ್ ವಿರುದ್ಧ ಸೋತರು. ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡದಲ್ಲಿ ಅತ್ಯಂತ ಅನುಭವಿ ಬಾಕ್ಸರ್ ಆಗಿದ್ದ ಶಿವ ಥಾಪಾ ಅವರ ಸೋಲು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇದಕ್ಕೂ ಮುನ್ನ ನಿಖತ್ ವಿಶ್ವ ಚಾಂಪಿಯನ್‌ಶಿಪ್ 2023 ರ ಬೆಳ್ಳಿ ಪದಕ ವಿಜೇತ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ವಿರುದ್ಧ 5-0 ಗೆಲುವಿನೊಂದಿಗೆ 16 ರ ಸುತ್ತಿಗೆ ಪ್ರವೇಶಿಸಿದ್ದರು.

ಬಾಕ್ಸಿಂಗ್ ಸ್ಪರ್ಧೆಗಳ ಅಂತಿಮ ಸುತ್ತುಗಳು ಅಕ್ಟೋಬರ್ 5 ರಿಂದ ನಡೆಯಲಿದೆ. ಏಷ್ಯನ್ ಗೇಮ್ಸ್ 2023 ರಲ್ಲಿ ಮಹಿಳಾ ಬಾಕ್ಸಿಂಗ್ ತಂಡ: ನಿಖತ್ ಜರೀನ್ (50 ಕೆಜಿ), ಪ್ರೀತಿ ಪವಾರ್ (54 ಕೆಜಿ), ಪರ್ವೀನ್ ಹೂಡಾ (57 ಕೆಜಿ), ಜೈಸ್ಮಿನ್ ಲಂಬೋರಿಯಾ (60 ಕೆಜಿ), ಅರುಂಧತಿ ಚೌಧರಿ (66 ಕೆಜಿ), ಲೊವ್ಲಿನಾ ಬೊರ್ಗೊಹೈನ್ (75 ಕೆಜಿ)

ಏಷ್ಯನ್ ಗೇಮ್ಸ್ ಬಾಕ್ಸಿಂಗ್ ಪುರುಷರ ತಂಡ 2023: ದೀಪಕ್ ಭೋರಿಯಾ (51 ಕೆಜಿ), ಸಚಿನ್ ಸಿವಾಚ್ (57 ಕೆಜಿ), ಶಿವ ಥಾಪಾ (63.5 ಕೆಜಿ), ನಿಶಾಂತ್ ದೇವ್ (71 ಕೆಜಿ), ಲಕ್ಷ್ಯ ಚಹರ್ (80 ಕೆಜಿ), ಸಂಜೀತ್ (92 ಕೆಜಿ), ನರೇಂದರ್ ಬರ್ವಾಲ್ (+92 ಕೆಜಿ).

ಕುದುರೆ ಸವಾರಿಯಲ್ಲಿ ಇನ್ನೊಂದು ಪದಕ ನಿರೀಕ್ಷೆ: ಈಗಾಗಲೇ ಚಿನ್ನದ ಪದಕ ಗೆದ್ದು ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿರುವ ಭಾರತೀಯ ರೈಡರ್‌ಗಳಾದ ಹಿರ್ಡೇ ಚೆಡ್ಡಾ ಮತ್ತು ಅನುಷ್ ಅಗರ್ವಾಲಾ ಮತ್ತೊಂದು ಪದಕದ ನಿರೀಕ್ಷೆಯಲ್ಲಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಡ್ರೆಸ್ಸೇಜ್ ಇಂಡಿವಿಜುವಲ್ ಇಂಟರ್ಮೀಡಿಯೇಟ್ I ಫ್ರೀಸ್ಟೈಲ್‌ನ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಚಿನ್ನ ಅಥವಾ ಬೆಳ್ಳಿ ಪದಕದ ನಿರೀಕ್ಷೆ ಇದೆ.

ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಯಲ್ಲಿ ಭಾರತ ಮಂಗಳವಾರ ಸುದೀಪ್ತಿ ಹಜೇಲಾ, ದಿವ್ಯಕೃತಿ ಸಿಂಗ್, ಹೃದಯ್ ಛೇಡಾ ಮತ್ತು ಅನುಷ್ ಅಗರ್ವಾಲಾ 40 ವರ್ಷಗಳ ನಂತರ ಪ್ರಶಸ್ತಿ ಗೆದ್ದು ದಾಖಲೆ ಮಾಡಿದ್ದರು. ಸುಮಾರು 10 ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಏಷ್ಯಾದಾದ್ಯಂತದ ಹಲವಾರು ಅಥ್ಲೀಟ್‌ಗಳು ಭಾಗವಹಿಸಿದ್ದಾರೆ. ಅಗರ್ವಾಲಾ, ಛೇಡಾ, ದಿವ್ಯಕೃತಿ ಮತ್ತು ಹಜೇಲಾ ಅವರ ಭಾರತೀಯ ಕ್ವಾರ್ಟೆಟ್‌ಗಳು ಪ್ರಬಲ ಹೋರಾಟ ತೋರಿದರು.

ಅನುಷ್ ಅಗರ್ವಾಲಾ ಮತ್ತು ಅವರ ಕುದುರೆ ಇಟ್ರೊದಲ್ಲಿ 71.088 ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದರೆ, ಹೃದಯ್ ಛೇಡಾ – ಎಮರಾಲ್ಡ್​ನಲ್ಲಿ 69.941, ದಿವ್ಯಾಕೃತಿ ಸಿಂಗ್-ಅಡ್ರಿನಾಲಿನ್ ಫಿರ್ದೋಡ್​ನಲ್ಲಿ 68.176 ಮತ್ತು ಸುದೀಪ್ತಿ ಹಜೇಲಾ- ಚಿನ್ಸ್ಕಿನಲ್ಲಿ 66.706 ಅಂಕ ಗಳಿಸಿದರು. ಆತಿಥೇಯ ರಾಷ್ಟ್ರ ಚೀನಾ 204.882 ಅಂಕ ಗಳಿಸಿ ಬೆಳ್ಳಿ ಗೆದ್ದರೆ, ಹಾಂಕಾಂಗ್ 204.852 ಅಂಕದಿಂದ ಕಂಚಿಗೆ ತೃಪ್ತಿ ಪಟ್ಟಿತ್ತು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ