ಮಡಿಕೇರಿ: ಬೆಂಗಳೂರಿನ ಬಹುತೇಕ ಕಾಲೇಜುಗಳು, ಗೂಡಂಗಡಿ ಸೇರಿದಂತೆ ಎಲ್ಲೆಡೆ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಪೊಲೀಸರು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹಿರಿಯ ಚಿತ್ರನಟ ಜೈ ಜಗದೀಶ್ ಪ್ರಶ್ನಿಸಿದ್ದಾರೆ.
ಸ್ಯಾಂಡಲ್‍ವುಡ್‍ಗೆ ಡ್ರಗ್ ನಂಟಿನ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಎನ್ನುವುದು ಎಲ್ಲೆಡೆ ಇದ್ದರೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರ ದೊಡ್ಡ ಸುದ್ದಿಯಾಗಿದೆ. ಮಾಧ್ಯಮಗಳು ಕೊರೊನಾ ಹಾಗೂ ಡ್ರಗ್ಸ್ ವಿಚಾರಗಳಿಗಷ್ಟೇ ಏಕೆ ಪ್ರಾಮುಖ್ಯತೆ ನೀಡುತ್ತಿವೆ ತಿಳಿಯುತ್ತಿಲ್ಲ. ಇದುವರೆಗೆ ಕನ್ನಡ ಚಿತ್ರರಂಗದಲ್ಲೇ ಇಂತಹ ಸಂಗತಿಗಳು ಪ್ರಸ್ತುತದಲ್ಲಿ ಮುನ್ನಲೆಗೆ ಬರುತ್ತಿವೆ. ಉದಯೋನ್ಮುಖ ನಟಿಯಯರಾದ ಸಂಜನಾ ಹಾಗೂ ರಾಗಿಣಿ ಇಬ್ಬರೂ ಇದರಲ್ಲಿ ಸಿಲುಕಿಕೊಂಡು ಜಾಮೀನಿಗಾಗಿ ಒದ್ದಾಡುತ್ತಿದ್ದಾರೆ ಎಂದರು.
ಉತ್ತರ ಭಾರತದಿಂದ ಬಂದಂತಹ ಇಬ್ಬರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಆದಷ್ಟು ಕಾನೂನು ರೀತಿಯಲ್ಲಿ ಶೀಘ್ರವಾಗಿ ತನಿಖೆ ನಡೆಸಬೇಕು. ಬಂಧಿತರಿಗೆ ಜಾಮೀನು ಸಿಗಬೇಕು. ದೋಷದಿಂದ ಮುಕ್ತರಾಗಬೇಕು ಎಂದು ಇದೇ ವೇಳೆ ಹಿರಿಯ ನಟ ಒತ್ತಾಯಿಸಿದರು.
ಡ್ರಗ್ಸ್ ದೇಶದಾದ್ಯಂತ ವ್ಯಾಪಿಸಿದೆ. ರಾಜ ಮಹಾರಾಜರ ಕಾಲದಿಂದಲೂ ಡ್ರಗ್ಸ್ ಬಳಸುತ್ತಿದ್ದರು. ಇಂದು ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಏಕೆ ಮೌನವಹಿಸಿದೆ. ದೇಶಕ್ಕೆ ಡ್ರಗ್ ಹೇಗೆ ಬಂತು?. ಪೆಡ್ಲರ್‍ಗಳು ಹೇಗೆ ಹುಟ್ಟಿಕೊಂಡರು ಎಂದು ಅವರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.
Laxmi News 24×7