Breaking News

K.R.S. ಬೃಂದಾವನದಲ್ಲಿ ಚಿರತೆ

Spread the love

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಬೃಂದಾವನದಲ್ಲಿ ಭಾನುವಾರ ಸಂಜೆ ಚಿರತೆ ಕಾಣಿಸಿಕೊಂಡ ಕಾರಣ ಪ್ರವಾಸಿಗರು ಕೆಲಕಾಲ ಭಯಭೀತರಾದರು.

ಸಂಜೆ 6 ಗಂಟೆ ಸಮಯದಲ್ಲಿ ಬೃಂದಾವನ ಉದ್ಯಾನದಲ್ಲಿ ಸಾವಿರಾರು ಪ್ರವಾಸಿಗರು ಇದ್ದರು.

 

ಸಂಜೆ 6 ಗಂಟೆ ಸಮಯದಲ್ಲಿ ಬೃಂದಾವನ ಉದ್ಯಾನದಲ್ಲಿ ಸಾವಿರಾರು ಪ್ರವಾಸಿಗರು ಇದ್ದರು. ಮೀನುಗಾರಿಕಾ ಇಲಾಖೆಯ ಅಕ್ವೇರಿಯಂ ಬಳಿಯ ರಾಯಲ್ ಆರ್ಕಿಡ್ ಹೋಟೆಲ್ ಕಡೆ ಚಿರತೆ ಹೋಗುತ್ತಿರುವುದು ಭದ್ರತಾ ಸಿಬ್ಬಂಂದಿಯ ಕಣ್ಣಿಗೆ ಬಿದ್ದಿದೆ.

ತಕ್ಷಣ ಜಾಗೃತರಾದ ಭದ್ರತಾ ಸಿಬ್ಬಂದಿ ಪ್ರವಾಸಿಗರನ್ನು ಬೃಂದಾವನದಿಂದ‌ ಹೊರಗೆ ಕಳುಹಿಸಿದ್ದಾರೆ.

ಸದ್ಯ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು‌ ನಿರ್ಬಂಧಿಸಲಾಗಿದೆ.

15 ದಿನಗಳ ಅಂತರದಲ್ಲಿ ಕೆ ಆರ್ ಎಸ್ ಬೃಂದಾವನದಲ್ಲಿ ಮೂರು‌ ಬಾರಿ ಚಿರತೆ ಕಾಣಿಸಿಕೊಂಡಿದೆ. ಎರಡು ಕಡೆ ಬೋನು ಇರಿಸಿದ್ದರೂ ಅದು ಬೋನಿಗೆ ಬೀಳುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಓಡಿದ ಪ್ರವಾಸಿಗರು: ಚಿರತೆ ಇರುವುದು ಗೊತ್ತಾದ ಹಿನ್ನೆಲೆಯಲ್ಲಿ ಕೆಲ ಪ್ರವಾಸಿಗರು ಭಯದಿಂದ ಬೃಂದಾವನದಿಂದ ಹೊರಗೆ ಓಡಿ ಹೋಗಿದ್ದಾರೆ. ಮಕ್ಕಳು, ಮಹಿಳೆಯರು ಚೀರುತ್ತಾ ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಧಿಕಾರಿಗಳ ವಿರುದ್ಧ ಆಕ್ರೋಶ; 15 ದಿನಗಳ ಹಿಂದೆಯೇ ಬೃಂದಾವನದಲ್ಲಿ ಚಿರತೆ ಇರುವುದು ಗೊತ್ತಿದ್ದರೂ ಬೃಂದಾವನ ಬಂದ್ ಮಾಡದಿರುವುದಕ್ಕೆ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾಗಿದೆ.

‘ಹೊರಜಿಲ್ಲೆ, ಹೊರರಾಜ್ಯಗಳ ಲಕ್ಷಾಂತರ ಪ್ರವಾಸಿಗರು ಕೆಆರ್ ಎಸ್ ಗೆ ಭೇಟಿ ನೀಡುತ್ತಾರೆ. ಹಿಂದೆಯೇ ಚಿರತೆ ಕಾಣಿಸಿಕೊಂಡಿದ್ದರೂ ಅದನ್ನು ಮುಚ್ಚಿಟ್ಟು ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ’ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.


Spread the love

About Laxminews 24x7

Check Also

10 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಿ ಕೊಡಲಾಗುವುದು ಎಂದು ಪುಸಲಾಯಿಸಿ 5 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿ

Spread the love ಮಂಡ್ಯ :- 5 ಲಕ್ಷ ರೂಪಾಯಿ ಹಣಕೊಟ್ಟರೆ 10 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಿ ಕೊಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ