Breaking News

ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

Spread the love

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಬಿಗ್ ಶಾಕಿಂಗ್ ನ್ಯೂಸ್ ಒಂದು ಇದೀಗ ಹೊರಬಿದ್ದಿದೆ.

ಡ್ರಗ್ಸ್ ಕೇಸ್ ಬೆನ್ನು ಹತ್ತಿರೋ ಪೊಲೀಸರಿಗೆ ಸಿನಿಲೋಕದ ಡ್ರಗ್ಸ್ ಕೇಸ್‍ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನಟಿ ರಾಗಿಣಿ, ಸಂಜನಾ ಮೊಬೈಲ್‍ನಲ್ಲಿ ಸ್ಫೋಟಕ ಸಾಕ್ಷ್ಯ ದೊರೆತಿದೆ. ಅದೇನೆಂದರೆ ಡ್ರಗ್ಸ್ ಕೇಸ್‍ನಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಸೆಕ್ಸ್ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಬಂಧಿತ ಆರೋಪಿಗಳ ಮೊಬೈಲ್‍ನಲ್ಲಿ ಸೆಕ್ಸ್ ದಂಧೆ ಸಾಕ್ಷ್ಯ ದೊರಕಿದ್ಯಂತೆ. ಸೆಕ್ಸ್ ದಂಧೆಗಾಗಿಯೇ ಆರೋಪಿಗಳು ವಾಟ್ಸಾಪ್ ಗ್ರೂಪ್ ಮಾಡ್ಕೊಂಡಿದ್ದರು. ಆದರೆ ಡ್ರಗ್ಸ್ ಕೇಸ್ ಬಯಲಾಗ್ತಿದ್ದಂತೆ ವಾಟ್ಸಾಪ್ ಗ್ರೂಪ್‍ನ್ನೇ ಡಿಲೀಟ್ ಮಾಡಿದ್ದರು. ಬಂಧಿತ ನಟಿಯರ ಮೊಬೈಲ್‍ನಲ್ಲಿಯೂ ಸಾಕ್ಷ್ಯ ಸಿಕ್ಕಿರುವ ಬಗ್ಗೆ ಸಿಸಿಬಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನಿನ್ನೆಯಷ್ಟೇ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದರು.


Spread the love

About Laxminews 24x7

Check Also

ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿಯಾಗಿ ಹೋರಾಟಕ್ಕೆ ಬೆಂಬಲ ಕೋರಿದ ಉದ್ಯೋಗಾಂಕ್ಷಿಗಳು

Spread the loveಬೆಂಗಳೂರು: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಮಂಗಳವಾರ (ಫೆ.24) ಪ್ರತಿಭಟನೆ ಮಾಡಿದ ಬೆನ್ನಲ್ಲೇ ಬುಧವಾರ (ಫೆ.25) ಮಾಜಿ ಪ್ರಧಾನಿ ದೇವೇಗೌಡರಿಗೆ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ