ಕೋಲ್ಕತ್ತಾ: ಪಬ್ ಜಿ ಮೊಬೈಲ್ ಗೇಮ್ ಬ್ಯಾನ್ ಆದ ಬಳಿಕ ಬೇಸರಗೊಂಡ 21 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನಡೆದಿದೆ.
ಐಟಿಐ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರೀತಮ್ ಹಲ್ದರ್ ಆತ್ಮಹತ್ಯೆಗೆ ಶರಣಾದ ವಿದ್ಯರ್ಥಿ ಎಂದು ಗುರುತಿಸಲಾಗಿದೆ.
ಚಕ್‌ದಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಬಾ ಲಾಲ್‌ಪುರ್ ಪ್ರದೇಶದಲ್ಲಿರುವ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗ್ಗಿನ ಉಪಹಾರ ಸ್ವೀಕರಿಸಿದ ಬಳಿಕ ಆತ ಕೊಠಡಿಗೆ ತೆರಳಿದ್ದ . ‘ಮಧ್ಯಾಹ್ನದ ಊಟಕ್ಕೆಂದು ಕರೆಯಲು ತೆರಳಿದಾಗ ಆತನ ಕೊಠಡಿ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಪದೇಪದೇ ಕರೆದರೂ ಬಾಗಿಲು ತೆರೆಯದಿರುವುದರಿಂದ ನೆರೆ ಮನೆಯವರನ್ನು ಕರೆದೆ. ಅವರು ಬಾಗಿಲು ಒಡೆದು ಕೊಠಡಿ ಪ್ರವೇಶಿಸಿದಾಗ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಾಣಿಸಿತು’ ರಾತ್ರಿ ಪಬ್ಜಿ ಆಡುತ್ತಿದ್ದ. ಆಯಪ್ ನಿಷೇಧದ ಬಳಿಕ ಆಡಲು ಸಾಧ್ಯವಾಗದಿರುವುದರಿಂದ ಹತಾಶನಾಗಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರತ್ನಾ ಹೇಳಿದ್ದಾರೆ.
ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಜಿ, ಪಬ್ಜಿ ಮೊಬೈಲ್ ಲೈಟ್ ಸೇರಿ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನಿಷೇಧಿಸಿತ್ತು.