Breaking News

ರಾಜ್ಯದಲ್ಲಿ ಐದು ಜನಕ್ಕೆ ಹರಡಿದೆ ಓಮಿಕ್ರಾನ್: ಬಿಬಿಎಂಪಿ ಸ್ಪಷ್ಟನೆ

Spread the love

ಬೆಂಗಳೂರು ಡಿಸೆಂಬರ್ 2: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಎರಡಲ್ಲ ಐದು ಜನಕ್ಕೆ ಹರಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಗೆ ಓಮಿಕ್ರಾನ್ ಬಿಗ್ ಶಾಕ್ ಕೊಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ವೈರಸ್ ಸೋಂಕಿತ ಐದು ಪ್ರಕರಣಗಳು ದಾಖಲಾಗಿವೆ ಎಂದು ಗೌರವ್ ಗುಪ್ತ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮೂಲಕವೇ ಭಾರತದಲ್ಲಿ ಮೊದಲ ಬಾರಿಗೆ ಐದು ಓಮಿಕ್ರಾನ್ ಕೇಸ್ ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 46 ವರ್ಷದ ವ್ಯಕ್ತಿಯಲ್ಲಿ ಮತ್ತು 66 ವರ್ಷದ ವೃದ್ಧನಿಗೆ ಓಮಿಕ್ರಾನ್ ವೈರಸ್ ದೃಢಪಟ್ಟಿದೆ. ಬಿಬಿಎಂಪಿ ಮಾಹಿತಿ ಪ್ರಕಾರ ಒಟ್ಟು ಐದು ಸೋಂಕಿತರ ಸ್ಥಿತಿ ಸ್ಥಿರವಾಗಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, “ರಾಜ್ಯದಲ್ಲಿ ಐದು ಜನರಿಗೆ ಓಮಿಕ್ರಾನ್ ವೈರಸ್ ತಗುಲಿರುವುದು ದೃಢಪಟ್ಟಿದೆ. 46 ವರ್ಷದ ಸೋಂಕಿತ ವ್ಯಕ್ತಿ ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿರುತ್ತಾರೆ. ಮೂರು ದಿನ ಮಾತ್ರ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ನಂತರ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ಬಂದಿದೆ. ಈ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಪರೀಕ್ಷೆ ಬಳಿಕ ಇವರು ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದಾರೆ. ನಂತರ ಅವರು ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಇವರ ಕಂಪನಿ ಬೋರ್ಡ್ ಮೀಟಿಂಗ್‌ನಲ್ಲಿ ಆರು ಜನ ಭಾಗಿಯಾಗಿದ್ದರು. ಹೋಮ್ ಕ್ವಾರಂಟೈನ್ ಆಗದೇ ಮೀಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಪ್ರಥಮ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಶೀಲನೆ ನಡೆಸಲಾಗಿದ್ದು ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದೆ” ಎಂದರು.

ಟ್ರಾವೆಲ್ ಹಿಸ್ಟ್ರಿ ಇಲ್ಲ:

ಇನ್ನೂ 66 ವರ್ಷದ ಸೋಂಕಿತ ಎರಡನೇ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನವೆಂಬರ್ 22 ರಂದು ಎರಡನೇ ವ್ಯಕ್ತಿಗೆ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಪಾಸಿಟಿವ್ ಬಂದಿದೆ. ನವೆಂಬರ್ 24ರಂದು ಓಮಿಕ್ರಾನ್ ಸೋಂಕು ದೃಢಪಟ್ಟಿದೆ. 13 ಪ್ರಥಮ 2೦5 ದ್ವೀತಿಯ ಸಂಪರ್ಕದಲ್ಲಿದ್ದರು. ಇವರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಒಟ್ಟು ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಗುಪ್ತಾ ಹೇಳಿದರು.

ಈ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, “ಜೀವಕ್ಕೆ ಅಪಾಯ ಇದಿಯೋ ಇಲ್ವೋ ಅನ್ನೋದನ್ನ ನೋಡಲಾಗುತ್ತದೆ. ಈವರೆಗೆ ಸೋಂಕಿತರಲ್ಲಿ ಜೀವಕ್ಕೆ ಅಪಾಯವಿರುವುದು ಕಂಡು ಬಂದಿಲ್ಲ. ಹೀಗಾಗಿ ಆಂತಕ ಬೇಡ. ಜಾಗೃತರಾಗಿವಾಗಿರಿ. ವೇಗವಾಗಿ ಇದು ಹರಡುತ್ತದೆ ಆದರೆ ಅಪಾಯವಿಲ್ಲ” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಯದೇವ ಆಸ್ಪತ್ರೆಯ ಮುಖ್ಯಸ್ಥ, ಡಾ. ಸಿ.ಎನ್ ಮಂಜುನಾಥ್, “ಹಳೆ ವೈರಸ್ ಹೇಗಿದೆ ಅದೇ ತರ ಓಮಿಕ್ರಾನ್. ಭಯಬೀಳುವಂತದ್ದು ಅಗತ್ಯತೆ ಇಲ್ಲ. ಹಳೆಯ ಡೆಲ್ಟಾದಂತೆ ಇದು ಕೂಡ. ಆದರೆ ವೇಗವಾಗಿ ಹರಡುವ ಸಾಧ್ಯತೆ ಇದೆ. ಇದನ್ನು ನಿರ್ಲಕ್ಷ್ಯ ಮಾಡೋದು ಬೇಡ. ಇದು ಹೊಸ ತಳಿ ಇರೋದ್ರಿಂದ ಇದರ ಬಗ್ಗೆ ತಿಳಿಯೋದಕ್ಕೆ ಸಮಯ ಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮ ಕೂಡ ತೆಗೆದುಕೊಳ್ಳಬೇಕು. ಒಂದು ದಿನ ಜ್ವರ ಬಂದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಬೇರೆಯವರಿಗೆ ಹರಡುವುದು ತಪ್ಪುತ್ತದೆ” ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಟೆಸ್ಟ್ ಮಾಡಿದಾಗ ಹೈ ವೈರಲ್ ಲೋಡ್ ಬಂದರೆ ಅವರು ಕ್ವಾರಂಟೈನ್ ಹಾಗೂ ಚಿಕಿತ್ಸೆ ಕಡ್ಡಾಯ ಮಾಡಲಾಗುತ್ತದೆ. ಆರ್‌ಟಿಪಿಸಿಆರ್ ಮಾಹಿತಿ ಮಿಸ್ ಆಗೋ ಚಾನ್ಸ್ ಇದ್ದರೂ ಶೇಕಡಾ 90 ರಷ್ಟು ಮಾಹಿತಿ ಸರಿಯಾಗಿರುತ್ತದೆ ಎಂದು ಅವರು ಹೇಳಿದರು.

ಕರ್ನಾಟಕ ಜಿನೋಮಿಕ್ಸ್ ಸರ್ವೇಲಿಂಕ್ ಸದಸ್ಯ, ಡಾ.ವಿಶಾಲ್‌ ರಾವ್, ” ಡೆಲ್ಟಾ ತೀವ್ರತೆಯಲ್ಲಿ ಓಮಿಕ್ರಾನ ಕಂಡುಬಂದಿದೆ. ಆದರೆ ಇದು ನಮ್ಮ ಶಶೀರವನ್ನು ವೇಗವಾಗಿ ಪ್ರವೇಶ ಮಾಡುವ ಪ್ರಯಾಗಗಳನ್ನು ಮಾಡುತ್ತದೆ. ಹೀಗಾಗಿ ವೇಗವಾಗಿ ಹರಡುತ್ತದೆ. ಹೀಗಾಗಿ ವಿಶ್ವಸಂಸ್ಥೆ ಕಾಳಜಿ ವಹಿಸುವಂತೆ ಹೇಳಿದೆ. ಆದರೆ ಜನರು ಆತಂಕಪಡುವಂತದಿಲ್ಲ. ಜನ ಜಾಗೃತರಾಗಿರಬೇಕು. ಮಾಸ್ಕ್‌, ಲಸಿಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಒಂದು ದೇಶದಿಂದ ಹರಡುವಾಗ ಅದರ ತೀವ್ರತೆ ಕಡಿಮೆ ಆಗಬಹುದು. ಆದರೇ ಇದು ನಿಜ ಎಂದು ಹೇಳಲು ಆಗುವುದಿಲ್ಲ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಮಾಹಿತಿ ಲಭ್ಯವಾಗುತ್ತದೆ. ಆದರೆ ಜನರು ನಿರ್ಲಕ್ಷ್ಯ ತೋರದೆ ಜಾಗೃತಿ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳಬೇಕು. ಎರಡನೇ ಲಸಿಕೆ ಪಡೆದುಕೊಂಡಿಲ್ಲವಾದರೆ ತೆಗೆದುಕೊಳ್ಳಲು ಸಲಹೆ ನೀಡಿದರು


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ