Breaking News

ಹುಬ್ಬಳ್ಳಿಯಲ್ಲಿ ಮದುವೆಗೆ ಮುಂಚೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ

Spread the love

ಹುಬ್ಬಳ್ಳಿ: ಯುವತಿಯೊಬ್ಬಳು ಮದುವೆಗೆ ಮುಂಚೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಸಂತೋಷ ನಗರದಲ್ಲಿ ಘಟನೆ ನಡೆದಿದ್ದು, ಇಷ್ಟೆಲ್ಲಕ್ಕೂ ಭಾವಿ ಪತಿರಾಯನ(fiancé) ಕಿರುಕುಳವೇ (Torture) ಕಾರಣ ಎಂದು ಮೃತ ಯುವತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಎಂಗೇಜ್ಮೆಂಟ್ (Engagement) ಆದಾಗಿನಿಂದಲೂ ಯುವತಿಗೆ ಭಾವಿ ಪತಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದ್ರಿಂದ ಮನನೊಂದು ಹುಬ್ಬಳ್ಳಿಯ ಸಂತೋಶ ನಗರದ ಪವಿತ್ರಾ (25) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ದಾಖಲಾಗಿದೆ.

ಭಾವಿಪತಿ ಅನುಮಾನಕ್ಕೆ ಬಲಿ

ಸೆ.1 ರಂದು ಹಾವೇರಿಯ ಅಭಿನಂದನ್ ಜೊತೆ ನಿಶ್ಚಿತಾರ್ಥ ನಡೆದಿತ್ತು. ಶೀಘ್ರವೇ ಮದುವೆಯನ್ನೂ ಮಾಡಲು ಎರಡೂ ಕಡೆಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಭಾವಿ ಪತ್ನಿಯ ಮೇಲೆ ಅಭಿನಂದನ್ ಸಂಶಯ ಪಡುತ್ತಿದ್ದ ಎನ್ನಲಾಗಿದೆ. ಕಳೆದ ವಾರ ದಾಂಡೇಲಿಯಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಬಂದ ನಂತರ ವಿಪರೀತ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಇಂದು ಮನೆಯಲ್ಲೇ ಪವಿತ್ರಾ ನೇಣಿಗೆ ಶರಣಾಗಿದ್ದಾಳೆ. ಪವಿತ್ರಾಳ ಸಾವಿಗೆ ಭಾವಿ ಪತಿ ಅಭಿನಂದನ್ ಕಾರಣವೆಂದು ಆತನ ವಿರುದ್ಧ ದೂರು ದಾಖಲಿಸಿರೋ ಕುಟುಂಬದ ಸದಸ್ಯರು, ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಅಶೋಕ್ ನಗರ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಹಳೆ ಕಟ್ಟಡದಲ್ಲಿ ಲಾಕರ್ ಪತ್ತೆಯಾಗಿದೆ ಎಂಬ ಸುದ್ದು ಕಾಡ್ಗಿಚ್ಚಿನಂತೆ ಹಬ್ಬಿ, ಹಲವಾರು ಊಹಾಪೋಹಗಳಿಗೆ ನಾಂದಿಹಾಡಿತ್ತು. ತಿಜೋರಿಯಲ್ಲಿ ಚಿನ್ನಾಭರಣ ಇದೆ ಇತ್ಯಾದಿಯಾಗಿ ಸುದ್ದಿ ಹಬ್ಬಿಸಿದ್ದ ಕೆಲವರು, ತಿಜೋರಿಯನ್ನು ಸದ್ದಿಲ್ಲದೆ ಎತ್ತಿ ಹಾಕೋ ಕೆಲಸ ನಡೆಸಿದ್ದಾರೆ ಎಂಬ ಆರೋಪಗಳನ್ನೂ ಮಾಡಿದ್ದರು. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಲಾಕರ್ ನ್ನು ಕೊನೆಗೂ ಓಪನ್ ಮಾಡಲಾಗಿದ್ದು, ಹಳೆಯ ಕಾಲದ ಒಂದು ನಾಣ್ಯ ಹಾಗೂ ಕೆಲ ಕಾಗದ ಪತ್ರ ಮಾತ್ರ ತಿಜೋರಿಯಲ್ಲಿ ಪತ್ತೆಯಾಗಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರೋ ಚಿಟಗುಪ್ಪಿ ಆಸ್ಪತ್ರೆ, 127 ವರ್ಷಗಳ ಇತಿಹಾಸ ಹೊಂದಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ 100 ಬೆಡ್ ಗಳ ಆಸ್ಪತ್ರೆಯಾಗಿ ಮೇಲ್ದರ್ಜೇಗಿರಿಸೋ ಕಾರ್ಯ ಆರಂಭಿಸಲಾಗಿದೆ. ಹಳೆಯ ಕಟ್ಟಡ ತೆರವಿನ ವೇಳೆ ಲಾಕರ್ ಸಿಕ್ಕಿತ್ತು. ಹಳೆಯ ಕಟ್ಟಡದಲ್ಲಿ ಲಾಕರ್ ಸಿಕ್ಕಿದ್ದರಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಕೆಲವೊಬ್ಬರು ಚಿನ್ನಾಭರಣ ಇತ್ಯಾದಿ ಇರಬಹುದೆಂದು ಲೆಕ್ಕಾಚಾರ ಹಾಕಿದ್ದರು. ಪಾಲಿಕೆ ಆರೋಗ್ಯಾಧಿಕಾರಿ ಡಾ.ಶ್ರೀಧರ್ ದಂಡಪ್ಪನವರ ಸಮ್ಮುಖದಲ್ಲಿ ಲಾಕರ್ ತೆಗೆಯಲಾಗಿದೆ. ಹಳೆಯ ಕಾಲದ ಒಂದು ನಾಣ್ಯ, ಪಾಸ್ ಬುಕ್ ಹಾಗೂ ಕೆಲ ಕಾಗದ ಪತ್ರ ಪತ್ತೆಯಾಗಿವೆ. ಲಾಕರ್ ತೆಗೆಯೋ ವೇಳೆ ಪೊಲೀಸ್ ಅಧಿಕಾರಿ ಅಶೋಕ್ ಮತ್ತಿತರರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ