Breaking News

ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್ ವಿರುದ್ಧ ಅತ್ಯಾಚಾರ ಆರೋಪ! ?

Spread the love

ಮುಂಬೈ: ತಮ್ಮ ಉದ್ಯಮ ಪಾಲುದಾರರು ಹಾಗೂ ಇತರ ಗಣ್ಯ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಲು ತನ್ನ ಪತಿ ತನ್ನನ್ನು ಒತ್ತಾಯಿಸಿದ್ದರು ಎಂದು ಶಂಕಿತ ಗ್ಯಾಂಗ್ ಸ್ಟರ್ ಹಾಗೂ ದಾವೂದ್ ಇಬ್ರಾಹಿಂ ಆಪ್ತ ರಿಯಾಝ್ ಭಾಟಿ ಅವರ ಪತ್ನಿ ರೆಹನುಮಾ ಭಾಟಿ ಆರೋಪಿಸಿದ್ದಾರೆಂದು ಉಲ್ಲೇಖಿಸಿ The Print ವರದಿ ಮಾಡಿದೆ.

 

ಮುಂಬೈ ಪೊಲೀಸರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಕೆ ಅತ್ಯಾಚಾರದ ಆರೋಪ ಹೊರಿಸಿದವರಲ್ಲಿ ಕ್ರಿಕೆಟಿಗರಾದ ಮುನಾಫ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ, ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಹಾಗೂ ಪೃಥ್ವಿರಾಜ್ ಕೊಠಾರಿ ಸೇರಿದ್ದಾರೆ.

ರೆಹನುಮಾ 24 ಸೆಪ್ಟೆಂಬರ್ 2021 ರ ತನ್ನ ಅರ್ಜಿಯಲ್ಲಿ ಪಾಂಡ್ಯ, ಪಟೇಲ್, ಶುಕ್ಲಾ ಮತ್ತು ಕೊಠಾರಿ ಅವರ ಯಾವುದೇ ವಿಳಾಸಗಳನ್ನು ನೀಡಿಲ್ಲ ಅಥವಾ ಆಪಾದಿತ ಘಟನೆಗಳು ಸಂಭವಿಸಿದ ನಿರ್ದಿಷ್ಟ ದಿನಾಂಕಗಳು ಅಥವಾ ಸ್ಥಳಗಳನ್ನು ಉಲ್ಲೇಖಿಸಿಲ್ಲ ಎಂದು ThePrint ವರದಿ ಮಾಡಿದೆ.

ರೆಹನುಮಾ ಅವರು ಪಾಂಡ್ಯ ಹಾಗೂ ಪಟೇಲ್ ಅವರನ್ನು ಕ್ರಿಕೆಟಿಗರು ಎಂದು ಗುರುತಿಸಿದರೆ, ಶುಕ್ಲಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷರು ಎಂದು ಹೇಳಿದ್ದಾರೆ. ಆಕೆಯ ಅರ್ಜಿಯಲ್ಲಿ ಕೊಠಾರಿಯ ಬಗ್ಗೆ ಯಾವುದೇ ವಿವರಣೆಯನ್ನು ಉಲ್ಲೇಖಿಸಿಲ್ಲ ಎಂದು ThePrint ವರದಿ ಮಾಡಿದೆ

ನಾನು ಎಫ್‌ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅದು ಸಾಧ್ಯವಾಗಿಲ್ಲ. ನನ್ನ ಅರ್ಜಿಯನ್ನು ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದೆ. ನಾನು ವಿವಿಧ ಹಂತದ ಪೊಲೀಸ್ ಅಧಿಕಾರಿಗಳನ್ನು ಹಲವು ಬಾರಿ ಅನುಸರಿಸಿದ್ದೇನೆ. ಅವರು ಒಂದಿಷ್ಟು ಹಣ ಕೊಡಿ ಎಂದು ಹೇಳಿದ್ದರು. ಆದರೆ ನಾನೇಕೆ ಭ್ರಷ್ಟಾಚಾರವನ್ನು ಹರಡಲಿ? ನಾನು ಸರಿಯಾಗಿದ್ದೇನೆ. ಅವರೇ ಅಪರಾಧಿಗಳು ಎಂದು ರೆಹನುಮಾ ಹೇಳಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ