ಭಾರತದಲ್ಲಿ ಪ್ರಪ್ರಥಮವಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕವನ್ನು ಆರಂಭಿಸಲಾಯಿತು
ಕುಂದಾನಗರಿಯ ಬೆಳೆಗಾವಿಯಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕವನ್ನು ಆರಂಭಿಸಲಾಯಿತು , ಅಶೋಕ ನಗರದಲ್ಲಿರುವ ಫ್ಲವರ್ ಮಾರ್ಕೆಟ್ ನಲ್ಲಿ ಹಸಿರು ನ್ಯಾಯಪೀಠದ ಸುಭಾಷ ಅಡಿ ಚಾಲನೆ ನೀಡಿದರು.
ದೇಶದಲ್ಲಿ ಮೊದಲ ಬಾರಿಗೆ ಪ್ರಪ್ರಥಮವಾಗಿ ಬೆಳಗಾವಿಯ ಆರೋಗ್ಯ ಇಲಾಖೆಯಿಂದ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕವನ್ನು ಸ್ಥಾಪಿಸಿರುವುದು ಖುಷಿಯ ವಿಚಾರ ಬೆಳೆಗಾವಿಯ ಪಾಲಿಕೆಯಿಂದ ಈ ಘಟಕ ಸ್ಥಾಪಿಸಿರುವುದಕ್ಕೆ ರಾಜಶೇಖರ್ ಡೋಣಿ ಸಂತಸ ವ್ಯಕ್ತಪಡಿಸಿದರು ,
ಬೆಳೆಗಾವಿಯಲ್ಲಿ ಹೂವಿನ ತ್ಯಾಜ್ಯದಿಂದ ಅಗರಬತ್ತಿ ಘಟಕ ಸ್ಥಾಪಿಸಿರುವುದು ಮಹಾಪೌರರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹನುಮಂತ ಕಂಗೊಳ್ಳಿ ಹೇಳಿದರು .
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಮೇಯರ್ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಹನುಮಂತ ಕೊಂಗಾಲಿ ಇತರರಿದ್ದರು