Breaking News

ಕಾಗವಾಡ ಶಾಸಕ ರಾಜು ಕಾಗೆ ಇವರಿಂದ 3.55 ಕೋಟಿ ರೂಪಾಯಿಗಳ ರಸ್ತೆ ಕಾಮಗಾರಿಗೆ ಪೂಜೆ

Spread the love

ರಾಜ್ಯದ ಮುಖ್ಯಮಂತ್ರಿಗಳು ಪ್ರತಿಯೊಂದು ಗ್ರಾಮದಲ್ಲಿ ಉತ್ತಮ ರಸ್ತೆ, ಶಾಲೆಗಳ ಕೊಠಡಿಗಳು ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಹೆಚ್ಚಿನ ಒತ್ತು ನೀಡಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುತ್ತಿದ್ದಾರೆ. 50 ಕೋಟಿ ರೂಪಾಯಿ ಯೋಜನೆ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದ್ದೇನೆ ಎಂದು ಶಾಸಕ ರಾಜು ಕಾಗೆ ಹೇಳಿದರು.

ಬುಧವಾರ ರಂದು ಮಂಗಸೂಳಿ-ಫರಿದಖಾನವಾಡಿ ಗ್ರಾಮ ಮಧ್ಯದ ರಸ್ತೆ ಅಭಿವೃದ್ಧಿಗೊಳಿಸಲು 3 ಕೋಟಿ ರೂಪಾಯಿ ಯೋಜನೆಗೆ ಹಾಗೂ ಶೇಡಬಾಳ ನಗರ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 11, 12, 14 ಹಾಗೂ 16ರಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಫೇಸ್-4 ಅನುದಾನದಲ್ಲಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮಂಗಸೂಳಿ ಗ್ರಾಮದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ ಪೂಜಾ ವಿಧಿ ನೆರವೇರಿಸಿದರು. ಅವರೊಂದಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್.ಮಗದುಮ, ಗುತ್ತಿಗೆದಾರ ಬಸವರಾಜ ಪಾಟೀಲ, ದಲಿತ ಮುಖಂಡ ಸಂಜಯ ತಳವಲಕರ, ಮಹಾದೇವ ಕಟಿಗೇರಿ, ಮುಕುಂದ ಪೂಜಾರಿ, ವೀರಭದ್ರ ಕಟಿಗೇರಿ, ಪ್ರಭು ಪೂಜಾರಿ, ದಿಲೀಪ ಮಗದುಮ, ಮಿಲಿಂದ ವರಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶೇಡಬಾಳ ಪಟ್ಟಣದ ಕಾರ್ಯಕ್ರಮದಲ್ಲಿ ನಗರ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ, ಮುಖ್ಯಾಧಿಕಾರಿ ಕೆ.ಕೆ.ಗಾವಡೆ, ಅಭಿಯಂತರ ತಿರುಪತಿ ರಾಥೋಡ್, ಗುತ್ತಿಗೆದಾರ ಬಸವರಾಜ ಮಗದುಮ, ಸನ್ಮತಿ ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಭರತೇಶ ನಾಂದ್ರೆ, ನೇಮಗೌಡ ಘೆನಾಪ್ಪಗೂಳ, ಪ್ರಕಾಶ ಮಾಳಿ, ಅಜಿತ ರಂಜೂಣಿಗೆ, ಪ್ರಮೋದ್ ಖೋತ, ಶೀತಲ ಹೇರಲೆಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಉದ್ಯೋಗ ಭರ್ತಿಯಾಗದ್ದಕ್ಕೆ ಬಿಜೆಪಿ ಕಾರಣ – ನಾವು 40 ಸಾವಿರ ನೇಮಕಾತಿ ಮಾಡಿದ್ದೇವೆ: ಸಿಎಂ

Spread the loveಬೆಂಗಳೂರು: ಬಿಜೆಪಿ ಸರ್ಕಾರದ  ಅವಧಿಯಲ್ಲಿ ನೇಮಕ ನಡೆಯದ ಕಾರಣ ನಾವು ಅಧಿಕಾರಕ್ಕೆ ಬರುವಾಗಲೇ 2.64 ಲಕ್ಷ ಉದ್ಯೋಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ