Breaking News

ಉದ್ಯೋಗಾಂಕ್ಷಿಗಳು ಬಿಜೆಪಿ ಮಾತು ಕೇಳಿ FIR ಹಾಕಿಸಿಕೊಳ್ಳಬೇಡಿ: ಪ್ರದೀಪ್ ಈಶ್ವರ್

Spread the love

ಬೆಂಗಳೂರು: ಉದ್ಯೋಗಾಂಕ್ಷಿಗಳು  ಬಿಜೆಪಿ ಅವರ ಮಾತು ಕೇಳಿ ಎಫ್‌ಐಆರ್  ಹಾಕಿಸಿಕೊಂಡು ಕೋರ್ಟ್‌ಗೆ ಅಲೆದಾಟ ಮಾಡಬೇಡಿ ಎಂದು ಉದ್ಯೋಗಾಂಕ್ಷಿಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್  ಕಿವಿಮಾತು ಹೇಳಿದ್ದಾರೆ.

ಧಾರವಾಡದಲ್ಲಿ ಮಂಗಳವಾರ ಉದ್ಯೋಗಾಂಕ್ಷಿಗಳ ಪ್ರತಿಭಟನೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಯುವಕರು ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ್ರು. ಕರ್ನಾಟಕದ ಯುವಕರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ಪರವಾಗಿ ನಮ್ಮ ಸರ್ಕಾರ ಇದೆ. ನಿಮ್ಮ ಭವಿಷ್ಯ ನಮಗೆ ಮುಖ್ಯ. ಇದಕ್ಕಾಗಿಯೇ ವಯಸ್ಸಿನ ಮಿತಿ ಜಾಸ್ತಿ ಮಾಡಿದ್ದೆವು. ಕಾನೂನಿನಲ್ಲಿ ಕೆಲವು ಪ್ರೊಸೀಜರ್ ಮಾಡಿ ತೀರ್ಮಾನ ಮಾಡಬೇಕಾಗುತ್ತದೆ. ಆದಷ್ಟು ಬೇಗ ನೇಮಕಾತಿ ಮಾಡುತ್ತೇವೆ ಅಂತ ಸಿಎಂ ಅವರು ಭರವಸೆ ಕೊಟ್ಟಿದ್ದಾರೆ. ಗೃಹ ಸಚಿವರೂ ಹೇಳಿದ್ದಾರೆ ಎಂದರು.

ನಿಮ್ಮ ಜೊತೆ ನಾವು ಇದ್ದೇವೆ. ಹೋರಾಟ ಮಾಡೋದು ತಪ್ಪು ಅಂತ ಹೇಳೋದಿಲ್ಲ. ಶಾಂತಿಯುತ ಹೋರಾಟ ಮಾಡಿ. ಅಗ್ರೇಸಿವ್ ಆಗಿ ಎಫ್‌ಐಆರ್ ದಾಖಲು ಮಾಡೋ ಹಂತಕ್ಕೆ ಹೋಗಬೇಡಿ. ಎಫ್‌ಐಆರ್ ಆದ್ರೆ ನಾಳೆ ಕೆಲಸಕ್ಕೆ ತೊಂದರೆ ಆಗುತ್ತದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಿ. ಕೆಲಸ ಆಗೋ ಟೈಂನಲ್ಲಿ ಎಫ್‌ಐಆರ್ ಹಾಕಿಸಿಕೊಂಡು ಕೋರ್ಟ್ಗೆ ಸುತ್ತಬೇಡಿ. ಶಾಂತಿಯುತ ಪ್ರತಿಭಟನೆ ಮಾಡಿ. ನಿಮ್ಮ ಜೊತೆ ನಾವು ಇದ್ದೇವೆ ಎಂದು ಹೇಳಿದರು.

ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಇದು ನೆನಪಿಗೆ ಬರಲಿಲ್ಲ. ಬೆಲ್ಲದ್ ಅವರು ಪ್ರತಿಭಟನೆಗೆ ಹೋಗುತ್ತಾರೆ. ಬೆಲ್ಲದ್ ಅವರೇ ನಿಮ್ಮ ಸರ್ಕಾರ ಇದ್ದಾಗ ಯಾಕೆ ನೇಮಕಾತಿ ಮಾಡಿಕೊಂಡಿಲ್ಲ? ಯಡಿಯೂರಪ್ಪ, ಬೊಮ್ಮಾಯಿ ಇದ್ದಾಗ ಯಾಕೆ ನೇಮಕಾತಿ ಮಾಡಿಲ್ಲ. ಅಶೋಕಣ್ಣ ಒಬೆರಾಯನ ಕಾಲದಲ್ಲಿ ನೇಮಕಾತಿ ಮಾಡಿರೋದು ಮಾತಾಡಬೇಡಿ. 3-4 ವರ್ಷ ಇದ್ದಾಗ ಯಾಕೆ ನೇಮಕಾತಿ ಮಾಡಿಲ್ಲ. ನಾವು ಬಂದು 2.5 ವರ್ಷ ಆಯಿತು. ಬಿಜೆಪಿ ಅಧಿಕಾರದಲ್ಲಿ ಯಾಕೆ ಮಾಡಲಿಲ್ಲ? ಯುವಕರಿಗೆ ಕೇಳ್ತೀನಿ ಇದರಲ್ಲಿ ರಾಜಕೀಯ ತರಬೇಡಿ. ವಿರೋಧ ಪಕ್ಷದವರ ನಿಮ್ಮನ್ನ ಎತ್ತಿಕಟ್ಟೋ ಕೆಲಸ ಮಾಡುತ್ತಾರೆ. ನಿಮಗೆ ಸಮಸ್ಯೆ ಆದ್ರೆ ಅಶೋಕ್, ಬೆಲ್ಲದ್ ಯಾರೂ ಬರಲ್ಲ. ಯುವಕರನ್ನ ಉದ್ವೇಗ ಮಾಡೋಕೆ ಬಿಜೆಪಿ ಹೇಳ್ತಾ ಇದ್ದಾರೆ. ಯುವಕರು ಅವರ ಮಾತು ನಂಬಬೇಡಿ ಎಂದರು.

ನಾವು ಹೊಸ ನೇಮಕ ಮಾಡಲ್ಲ ಅಂತ ಅಲ್ಲ. ಎಫ್‌ಡಿಗೆ ನೇಮಕಾತಿಗೆ ಕಳಿಸಿದ್ದೇವೆ. ಯುವಕರು ಡೆಡ್‌ಲೈನ್ ಕೊಟ್ಟ ಕೂಡಲೇ ನೇಮಕಾತಿ ಮಾಡೋಕೆ ಸಾಧ್ಯವಿಲ್ಲ. ನಮ್ಮ ಸರ್ಕಾರದ ಮೇಲೆ ನಂಬಿಕೆ ಇಡಿ. ನಿಮ್ಮ ಪರವಾಗಿ ನಾವು ಇದ್ದೇವೆ. ನಾನು ಮನವಿ ಸಲ್ಲಿಸಿ ಪ್ರಕಿಯೆ ಸ್ಪೀಡ್ ಮಾಡಿಸುತ್ತೇವೆ. ನಾನು ಸಿಎಂ ಅವರಿಗೆ ಮನವಿ ಮಾಡಿ ಪ್ರಕ್ರಿಯೆ ಸ್ಪೀಡ್ ಮಾಡಿಸುತ್ತೇನೆ. ಸರ್ಕಾರ ಯುವಕರ ಪರ ಇದ್ದೇವೆ. ಆದಷ್ಟು ಬೇಗ ನೋಟಿಫಿಕೇಶನ್ ಆಗುತ್ತದೆ ಎಂದು ಭರವಸೆ ಕೊಟ್ಟರು.


Spread the love

About Laxminews 24x7

Check Also

ಮನೆ ತೆರವಿಗೆ ಮುಂದಾದ ತಹಶೀಲ್ದಾರ್ – ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನ

Spread the loveಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಮನೆ ತೆರವು ಮಾಡಲು ಮುಂದಾಗಿದ್ದಕ್ಕೆ ವ್ಯಕ್ತಿಯೋರ್ವ ತಹಶೀಲ್ದಾರ್  ಹೆಸರು ಉಲ್ಲೇಖಿಸಿ ಡೆತ್ ನೋಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ