Breaking News

ಧಾರವಾಡ ಉಸ್ತುವಾರಿ ಸಚಿವರೇ ಹೇಳಿದ್ರೂ ನಿಲ್ಲದ ಖಾಕಿ ಒಳಜಗಳ!

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ರೂ ಉನ್ನತ ಖಾಕಿ ಅಧಿಕಾರಿಗಳ ನಡುವಣ ಒಳಜಗಳ ನಿಲ್ಲುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವೆ ಒಳಜಗಳ ಮುಂದುವರಿದಿದೆ.

ಮತ್ತೆ ಡಿಸಿಪಿಗೆ ನೋಟಿಸ್ ನೀಡಿದ ಕಮಿಷನರ್ ದಿಲೀಪ್!
 ಭ್ರಷ್ಟಾಚಾರ ಆರೋಪ ಮಾಡಿ ಯುಟರ್ನ್ ತೆಗೆದುಕೊಂಡಿದ್ಯಾಕೆ?

ನೀವು ಮತ್ತೋರ್ವ ಡಿಸಿಪಿ ವಿರುದ್ಧವೂ ಆರೋಪ ಮಾಡಿದ್ದೀರಿ. ಇನ್ನೂ ಕೆಲವು ಅಧಿಕಾರಿಗಳ ವಿರುದ್ಧವೂ ಆರೋಪಿಸಿ ಸುಮ್ಮನಿದ್ದೀರಿ. ಹಾಗಾಗಿ, ಆ ಬಗ್ಗೆ ವರದಿ ನೀಡುವಂತೆ ನಿಮಗೆ ಹೇಳಿದ್ದೆ. ನೀವ್ಯಾಕೆ ಯುಟರ್ನ್ ತೆಗೆದುಕೊಂಡಿದ್ದೀರಿ ಎಂದು ಡಿಸಿಪಿ ಕೃಷ್ಣಕಾಂತ್‌ಗೆ ಕಮಿಷನರ್ ದಿಲೀಪ್ ಇದೀಗ ನೋಟಿಸ್ (ಮೆಮೋ) ನೀಡಿದ್ದಾರೆ.

ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋಹಾಗೆ.. ಈ ಇಬ್ಬರು ಉನ್ನತ ಐಪಿಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಪೊಲೀಸರು ಸುಸ್ತೋ ಸುಸ್ತು ಹೊಡೆದಿದ್ದಾರೆ. ಇಷ್ಟೆಲ್ಲಾ ಒಳಜಗಳಗಳ‌ ಮಧ್ಯೆ ಸಾರ್ವಜನಿಕರ ಗೋಳು ಕೇಳೋರು ಯಾರು? ಜೊತೆಗೆ, ಈಗಿನ ನೋಟಿಸ್​ ನೋಡಿದರೆ ಅವಳಿ ನಗರದ ಖಾಕಿ ಪಡೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆಯಾ ಎಂಬ ಅನುಮಾನ ಹೋಗಿ, ನಿಜಾನಾ ಅನ್ನುವತ್ತ ಸಾಗಿದೆ.


Spread the love

About Laxminews 24x7

Check Also

ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

Spread the love ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ