Breaking News

ಸತೀಶ ಜಾರಕಿಹೊಳಿ ಟೈಗರ್ ಗ್ಯಾಂಗ್ ಬಗ್ಗೆ ಹೇಳಿದ್ದೇನು….

Spread the love

ಗೋಕಾಕ:  ನಗರದಲ್ಲಿ  ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಟೈಗರ್ ಗ್ಯಾಂಗ್ ನ್ನು  ತಡವಾದರು ಕೂಡ ಪೊಲೀಸರು ಬಂಧಿಸಿದ್ದು, ಇದೊಂದು ಒಳ್ಳೆಯ ಬೆಳವಣಿಗೆ.  ನಿಷ್ಪಕ್ಷಪಾತ ತನಿಖೆಯಿಂದ ಮತ್ತಷ್ಟು ಮಾಹಿತಿ  ಹೊರ ಬರಲಿ ಎಂದು ಕೆಪಿಸಿಸಿ  ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಹೇಳಿದ್ದಾರೆ.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

 

ಟೈಗರ್ ಗ್ಯಾಂಗ್ ಬಂಧನ ವಿಚಾರವಾಗಿ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ  ಪ್ರತಿಕ್ರಿಯಿಸಿದ ಅವರು,   ಈ ಹಿಂದೆಯೇ ಪೊಲೀಸರು ಕ್ರಮ ತಗೆದುಕೊಳ್ಳಬೇಕಿತ್ತು .  ಗ್ಯಾಂಗ್ ನಿಂದಾಗಿ ಅಥವಾ ಮತ್ಯಾವ ಗುಂಪುಗಳಿಂದ  ಜನರಿಗೆ ಮತ್ತು  ಯಾವುದೇ ಸೆಕ್ಟರ್ ಗಳಿಗೆ ತೊಂದರೆಯಾಗಬಾರದು.   ಇದೇ ರೀತಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು. ಟೈಗರ್  ಗ್ಯಾಂಗ್ ಅಲ್ಲದೇ ಈ ರೀತಿ ಯಾವುದೇ ಗ್ಯಾಂಗ್ ಸಕ್ರಿಯವಾಗದಂತೆ ಶಾಶ್ವತ ನಿರ್ಣಾಮ ಮಾಡಬೇಕು ಎಂದು ಸಲಹೆ ನೀಡಿದರು.

ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ವಿಚಾರವಾಗಿ  ಮಾತನಾಡಿ, ಕಳೆದ 40 ವರ್ಷಗಳಿಂದ ಶೇ. 7.5 ರಷ್ಟು ಮೀಸಲಾತಿ ದೊರೆಯಬೇಕು ಎಂಬ ನಿಟ್ಟಿನಲ್ಲಿ   ಹೋರಾಟ ಮಾಡುತ್ತಿದ್ದೇವೆ.   ನಿನ್ನೆ ರಾಜನಹಳ್ಳಿಯಲ್ಲಿ  ಎಲ್ಲ ಶಾಸಕರು ಸೇರಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಈ ಯೋಜನೆ ಜಾರಿಯಾಗಬೇಕು ಎಂದು ಒಮ್ಮತದ ನಿರ್ಧಾರ ಕೈಗೊಂಡಿದ್ದು,  ಸಿಎಂ ಭೇಟಿ ಮಾಡಲು  ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಐಶಾರಾಮಿ ಜೀವನ ನಡೆಸಲು, ಹೆಸರು ಮಾಡಲು  ಕೊಲೆ, ದರೋಡೆ  ಮಾಡಿಕೊಂಡು ಜನರನ್ನು ಭಯಗೊಳಿಸುತ್ತಿದ್ದ ಟೈಗರ್ ಗ್ಯಾಂಗ್ ನ್ನು  ಇತ್ತೀಚಿಗೆ ಗೋಕಾಕ್ ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ