Breaking News

ಹೈಪರ್​ಸಾನಿಕ್ ಮಿಸೈಲ್ ಕ್ಲಬ್​ ಸೇರಿತು ಭಾರತ

Spread the love

ನವದೆಹಲಿ: ಒಡಿಶಾದ ಬಾಲಸೋರ್​ನ ಎಪಿಜೆ ಅಬ್ದುಲ್ ಕಲಾಂ ಟೆಸ್ಟಿಂಗ್ ರೇಂಜ್​ನಲ್ಲಿ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಭಾರತ ಇಂದು ಹೈಪರ್​ ಸಾನಿಕ್ ಮಿಸೈಲ್ ಕ್ಲಬ್​ ಸೇರ್ಪಡೆಯಾಗಿದೆ. ಈ ಕ್ಷಿಪಣಿಯ ಶಬ್ದದ ವೇಗಕ್ಕಿಂತಲೂ ಆರು ಪಟ್ಟು ವೇಗದಲ್ಲಿ ಸಾಗುತ್ತದೆ. ಇಂತಹ ಮಿಸೈಲ್ ಹೊಂದಿರುವ ಇತರ ದೇಶಗಳು ಅಮೆರಿಕ, ರಷ್ಯಾ ಮತ್ತು ಚೀನಾ.

ಹೈಪರ್​ ಸಾನಿಕ್ ಟೆಸ್ಟ್ ಡೆಮಾನ್​ಸ್ಟ್ರೇಟರ್​ ವೆಹಿಕಲ್​ ಅನ್ನು ಡಿಫೆನ್ಸ್ ರಿಸರ್ಚ್​ ಆಯಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ (ಡಿಆರ್​ಡಿಒ) ಅಭಿವೃದ್ಧಿಪಡಿಸಿದ್ದು, ಇಂದು ಬೆಳಗ್ಗೆ 11.03 ನಿಮಿಷಕ್ಕೆ ಅಗ್ನಿ ಮಿಸೈಲ್ ಬೂಸ್ಟರ್ ಅನ್ನು ಬಳಸಿಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.

ಸರ್ಕಾರಿ ಮಾಹಿತಿ ಪ್ರಕಾರ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಡಿಆರ್​ಡಿಒ ಸ್ಕ್ರ್ಯಾಮ್​ಜೆಟ್​ ಎಂಜಿನ್​ ಹೊಂದಿದ ಹೈಪರ್​ಸಾನಿಕ್​ ಮಿಸೈಲ್​ ಸಿದ್ಧಪಡಿಸುವ ಸಾಮರ್ಥ್ಯವನ್ನು ಹೊಂದಲಿದೆ.

ಇದು ಸೆಕೆಂಡ್​ಗೆ ಎರಡು ಕಿ.ಮೀ.ಗೂ ಅಧಿಕ ವೇಗದಲ್ಲಿ ಸಂಚರಿಸಲಿದೆ. ಇಂದು ನಡೆದ ಪರೀಕ್ಷಾ ಪ್ರಯೋಗವನ್ನು ಡಿಆರ್​ಡಿಒ ಮುಖ್ಯಸ್ಥ ಸತೀಶ್​ ರೆಡ್ಡಿ ಮತ್ತು ಅವರ ತಂಡ ಮಾಡಿದೆ. ಮೂವತ್ತು ಕಿ.ಮೀ. ಸಂಚರಿಸಿದ ಬಳಿಕ ಅದು ಅಗ್ನಿ ಮಿಸೈಲ್ ಬೂಸ್ಟರನ್ನು ಪ್ರತ್ಯೇಕಿಸಿದೆ. ಇದು ಮಹತ್ವದ ಮೈಲಿಗಲ್ಲು ಎಂದು ಡಿಆರ್​ಡಿಒ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಘಟಿತ ಹೊಣೆಗಾರಿಕೆ: ಪ್ರಧಾನಿ ನರೇಂದ್ರ ಮೋದಿ   

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ