ಚಿಕ್ಕಮಗಳೂರು: ಗುಡಿಸಲು ತೆರವು ವೇಳೆ ಅರಣ್ಯ ಸಿಬ್ಬಂದಿ ಮೇಲೆ ಬಡಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಂದ ಹಾಗೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ 2 ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಜಾಗ ತಮ್ಮದೆಂದು ಹಲ್ಲೆಗೆ ಯತ್ನಿಸಿರುವ ಕುಟುಂಬಸ್ಥರ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡಿಸಲು ತೆರವು ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳ ಮೇಲೆ ಕುಟುಂಬಸ್ಥರು ಬಡಿಗೆ ಮತ್ತು ದೊಣ್ಣೆಯಿಂದ ಹಲ್ಲೆಗೆ ಯತ್ನ ನಡೆಸಿದರು ಎಂದು ಹೇಳಲಾಗಿದೆ. ಗುಡಿಸಲುಗು ಅಕ್ರಮವಾಗಿ ಅರಣ್ಯ ವ್ಯಾಪ್ತಿಯಲ್ಲಿವೆ ಎಂಬುದು ಅಧಿಕಾರಿಗಳ ವಾದವಾದರೆ, ಈ ಜಾಗ ನಮ್ಮದು ಅನ್ನೋದು ಮನೆಯವರ ಪ್ರತಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಸಂಭವಿಸಿದ್ದು ಈ ನಡುವೆ ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News
Laxmi News 24×7