ಚಿಕ್ಕೋಡಿ : ಗ್ರಾಪಂ. ಚುನಾವಣೆಯ ಕಣದಲ್ಲಿದ್ದಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಜೋಡಕುರಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮಾರುತಿಗೌಡ ಭೀಮಗೌಡ ಪಾಟೀಲ್(65) ಬೆಳಿಗ್ಗೆ ಚಹಾ ಕುಡಿಯುತ್ತಲೇ ಕೊನೆಯುಸಿರೆಳಿದ್ದಾರೆ. ಇವರು ಗ್ರಾಮದ ವಾರ್ಡ್ ನಂ.3ರಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಡಿ.27ರಂದು ಮತದಾನ ನಡೆಯಲಿದೆ. ಮಾರುತಿಗೌಡ ಅವರು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.
Laxmi News 24×7