ಬೆಳಗಾವಿ: ಜಿಲ್ಲೆಯ ಗೃಹರಕ್ಷಕ ದಳ ಸಿಬ್ಬಂದಿ ಹೊಳೆಪ್ಪ ನೇಸರಗಿಗೆ ಅತ್ಯುತ್ತಮ ಸಾರ್ವಜನಿಕ ಸೇವೆ ವರ್ಗದಲ್ಲಿ ಬುಧವಾರ ಬೆಂಗಳೂರಿನ ಬನ್ನೇರುಘಟ್ಟದ ಆರ್.ಎ.ಮುಂಡ್ಕೂರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಮಂತ್ರಿಗಳ ಪದಕ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಸಿಬ್ಬಂದಿಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್, ಪದಕ ಪ್ರಧಾನ ಮಾಡಿದರು. ಅದರಲ್ಲಿ ಹೊಳೆಪ್ಪ ಸಹ ಸೇರಿದ್ದಾರೆ.
ಗೃಹರಕ್ಷಕ ದಳದ ಅಂಕಲಗಿ ಘಟಕದಲ್ಲಿ ಸ್ವಯಂ ಸೇವಕರಾಗಿ ಸೇರಿ 22 ವರ್ಷಗಳಿಂದ ಕರ್ತವ್ಯ ನಿರ್ವಹಿಸುವ ಹೊಳೆಪ್ಪ, ವಿಧಾನಸಭೆ, ಗ್ರಾಪಂ ಚುನಾವಣೆ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ.
Laxmi News 24×7