Breaking News

Uncategorized

ಯಾರ ಸಂಪರ್ಕಕ್ಕೆ ಬಾರದೇ ಇದ್ದರೂ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ  ಆರೋಗ್ಯ ಅಧಿಕಾರಿಗಳಿಗೆ ಕೊನೆಗೆ ಉತ್ತರ ಸಿಕ್ಕಿದೆ.

ಬೆಂಗಳೂರು: ಕರ್ನಾಟಕದಲ್ಲಿ ಇಂದು 8 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಯಾರ ಸಂಪರ್ಕಕ್ಕೂ ಸಿಗದ ಪಾದರಾಯನಪುರದ ವ್ಯಕ್ತಿಗೆ ಕೊರೊನಾ ಬಂದಿದೆ. 48 ವರ್ಷದ ವ್ಯಕ್ತಿ(ರೋಗಿ 513) ನಾನು ಲಾಕ್‍ಡೌನ್ ಬಳಿಕ ಮನೆಯಲ್ಲೇ ಇದ್ದೆ ಹೊರಗಡೆ ಹೋಗಿಲ್ಲ ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೇ ಪಾಸಿಟಿವ್ ಅಲ್ಲದ ವ್ಯಕ್ತಿಗಳ ಜೊತೆಗೂ ನಾನು ಸಂಪರ್ಕ ಹೊಂದಿಲ್ಲ. ವಿದೇಶಕ್ಕೆ ಹೋಗಿಲ್ಲ. ವಿದೇಶ ಹೋಗಿ ಬಂದವರ ಜೊತೆ ಸಂಪರ್ಕವನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಯಾರ ಸಂಪರ್ಕಕ್ಕೆ …

Read More »

ಪಾದರಾಯನಪುರ ಗಲಾಟೆ ಪ್ರಕರಣ: ಪ್ರಮುಖ ಆರೋಪಿ ಇರ್ಫಾನ್ ಬಂಧನ………

ಬೆಂಗಳೂರು(ಏ. 27): ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಪಾದರಾಯನಪುರ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಕೊನೆಗೂ ಖಾಕಿ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾಡುಗೊಂಡನ ಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಇರ್ಫಾನ್​ನನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಮತ್ತು ಜೆಜೆ ನಗರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇರ್ಫಾನ್​ನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್​ಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮತ್ತು ಗಲಾಟೆ …

Read More »

ದೇಶದಲ್ಲಿ ಒಂದೇ ದಿನ 1,400 ಮಂದಿಗೆ ಕೊರೊನಾ,886 ಮಂದಿ ಸಾವನ್ನಪ್ಪಿದ್ದಾರೆ.”

ನವದೆಹಲಿ: ದೇಶಾದ್ಯಂತ ಕೊರೊನಾ ರಣಕೇಕೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,400 ಮಂದಿಗೆ ಸೋಂಕು ತಗುಲಿದ್ದು, ಬಾಧಿತರ ಸಂಖ್ಯೆ 28 ಸಾವಿರದ ಗಡಿ ದಾಟಿದೆ. ಇದುವರೆಗೂ 886 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದ ದೇಶದಲ್ಲಿ 6,573 ಮಂದಿ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ.22.17ಕ್ಕೆ ಏರಿಕೆಯಾಗಿದೆ. ಕಳೆದ 28 ದಿನಗಳಿಂದ ದೇಶದ 16 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಕಳೆದ 14 ದಿನಗಳಿಂದ 85 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಬೆಳಕಿಗೆ …

Read More »

ಬೆಳಗಾವಿ ಜಿಲ್ಲೆ ಕೊಂಚ ನಿರಾಳವಾಗಿದೆ…….

ಬೆಳಗಾವಿ: ಕೊರೊನಾ ಸೋಂಕು ಸಂಬಂಧ ಸೋಮವಾರ ಸಂಜೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಗೆ ಕೊಂಚ ನಿರಾಳವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಯಾವುದೇ ವರದಿ ಬೆಳಕಿಗೆ ಬಂದಿಲ್ಲ. ಆದ್ರೆ ರಾಜ್ಯಾದ್ಯಂತ ಒಟ್ಟು 9 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಈವರೆಗೂ 512 ಜನರಿಗೆ ಸೋಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ 54 ಜನರು ಸೋ‌ಂಕು ತೊಗಲಿದ್ದ, ಚಿಕಿತ್ಸೆ ಮುಂದುವರೆದಿದೆ.

Read More »

ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

ಮಡಿಕೇರಿ: ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದರ ಭಾಗವಾಗಿ ಆಶಾ ಕಾರ್ಯಕರ್ತೆಯರು ಸಹ ಟೆಸ್ಟಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇಲ್ಲೊಂದಿಷ್ಟು ಅಂಗನವಾಡಿ ಕಾರ್ಯಕರ್ತರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬಾಡಗ ಗ್ರಾಮದ ಅಂಗನವಾಡಿ ಶಿಕ್ಷಕಿ ಜಯಂತಿ ಸೇರಿದಂತೆ ನಾಲ್ಕೈದು ಅಂಗನವಾಡಿಗಳ ಶಿಕ್ಷಕಿಯರು ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದು, ಮಾಸ್ಕ್ ಹೊಲೆದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ …

Read More »

ಲಾಕ್ ಡೌನ್ ಮೇ.15ರವರೆಗೆ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.,,,,,,,,,,,,,”

ಬೆಂಗಳೂರು:  ರಾಜ್ಯದ ಜನರು ಮೇ.3 ಬಳಿಕ ಲಾಕ್ ಡೌನ್ ಮುಕ್ತಾಯವಾಗಲಿದೆ ಎಂದುಕೊಂಡಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿವರೊಂದಿಗೆ ನಡೆದ ವಿಡಿಯೋ ಕಾನ್ಪರೆನ್ಸ್ ನಲ್ಲಿ ಲಾಕ್ ಡೌನ್ ಮುಂದುವರೆಸಲಾಗುವುದು ಎಂಬ ಸುಳಿವು ಕೊಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಲೆ ಇದೆ. ಇದರಿಂದ  ಲಾಕ್ ಡೌನ್ ಮೇ.15ರವರೆಗೆ  ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಪ್ರಧಾನಿ ಮೋದಿ  ವಿಡಿಯೋ ಕಾನ್ಪರೆನ್ಸ್ ನಲ್ಲಿ ತಮ್ಮ ಪ್ಲ್ಯಾನ್ ಬಗ್ಗೆ ವಿವರಿಸಿದ್ದಾರೆ. ಕೊರೊನಾ …

Read More »

ಕೊರೋನಾ ಪರಿಹಾರ ನಿಧಿಗೆ1.15 ಸಾವಿರ ರೂ. ಚೆಕ್ ಸತೀಶ ಜಾರಕಿಹೊಳಿ ಸ್ವೀಕರಿಸಿದರು.

ಚಿಕ್ಕೋಡಿ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 1.15 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ರಾಯಬಾಗ ತಾಲೂಕಿನ‌ ಹಾರೂಗೇರಿ ಪಟ್ಟಣದ ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ ಅವರು ವ್ಯಯಕ್ತಿಕವಾಗಿ 1 ಲಕ್ಷ ರೂ ಮತ್ತು ನದಲಾಪುರ ಗ್ರಮದ ನಂದೀಶ್ವರ ಪ್ರಾಥಮಿಕ ‌ಕೃಷಿ ಪತ್ತಿನ ಸಂಘ ವತಿಯಿಂದ 15 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, …

Read More »

ಮೇ 3ರ ನಂತರ ಲಾಕ್‍ಡೌನ್ ವಿಸ್ತರಣೆ ಆಗುತ್ತಾ? – ಇಂದು ರಾಜ್ಯಗಳ ಜೊತೆ ಮೋದಿ ಸಭೆ

ನವದೆಹಲಿ/ಬೆಂಗಳೂರು: ಮೇ 3ಕ್ಕೆ ಲಾಕ್‍ಡೌನ್ ಮುಗಿಯುತ್ತದೋ? ಇಲ್ಲವೋ ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 10 ಗಂಟೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಕೋವಿಡ್ ನಿಯಂತ್ರಣ ಕ್ರಮ, ಲಾಕ್‍ಡೌನ್ ವಿಸ್ತರಣೆ  ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೊರೊನಾ ಸಂಬಂಧ ಮೋದಿಯವರು ಮೂರನೇ ಬಾರಿ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದು, ಇಂದು ಸಂಜೆಯ ವೇಳೆ ಮೇ 3ರ ನಂತರ ಲಾಕ್‍ಡೌನ್ …

Read More »

ತಂದೆಯ ಪುಣ್ಯ ತಿಥಿಗಾಗಿ ಕೂಡಿಟ್ಟ ಹಣದಲ್ಲಿ ಬಡವರು, ನಿರ್ಗತಿಕರಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ವಿತರಣೆ

ಕೋಲಾರ: ತಂದೆಯ ಪುಣ್ಯ ತಿಥಿಗಾಗಿ ಕೂಡಿಟ್ಟ ಹಣದಲ್ಲಿ ಪೋಸ್ಟ್ ಮಾಸ್ಟರ್ ಕೊರೊನಾ ಲಾಕ್‍ಡೌನ್‍ನಿಂದ ಕಂಗಾಲಾಗಿರುವ ಬಡವರು, ನಿರ್ಗತಿಕರಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾದರಿಯಾಗಿದ್ದಾರೆ. ಕೋಲಾರ ನಗರದ ಗಲ್‍ಪೇಟೆ ನಿವಾಸಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ತನ್ನ ತಂದೆ ಬಂಗವಾದಿ ಮುನಿಸ್ವಾಮಿ ಅವರ 13ನೇ ವರ್ಷದ ಪುಣ್ಯ ತಿಥಿ ದಿನ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದರು. ಮೂಲತಃ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಂಗವಾದಿ ಗ್ರಾಮದವರಾದ ಮುನಿಸ್ವಾಮಿ ಅವರು ಕಾಲಾಧೀನರಾಗಿ …

Read More »

ಮಂಗಳೂರು:ರಾತ್ರಿ ವೇಳೆ ಹೊರ ರಾಜ್ಯಗಳಿಂದ ಮೀನಿನ ಲಾರಿಗಳು ಬರುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಏರ್ಪಡುತ್ತಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಇದೀಗ ಕೊರೊನಾ ಹಾಟ್‍ಸ್ಪಾಟ್ ಆಗಿದೆ. ಕೊರೊನಾ ಪಾಸಿಟಿವ್ ಕೇಸ್ ಕಡಿಮೆ ಆಯಿತು ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೆ ಮತ್ತೆ ಕೊರೊನಾ ಪಾಸಿಟಿವ್ ಹೆಚ್ಚಾಗಿ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಜಿಲ್ಲಾಡಳಿತವೇ ಇಡೀ ಜಿಲ್ಲೆಯ ಜನರಿಗೆ ಕೊರೊನಾ ಸೋಂಕನ್ನು ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕೊರೊನಾ ಹರಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ದಾರಿ ಮಾಡಿಕೊಟ್ಟಿರುವ ಬೆಳವಣಿಗೆ ನಡೆದಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ರಾತ್ರಿ ವೇಳೆ ಹೊರ …

Read More »