ಬೆಂಗಳೂರು, ಮೇ 25- ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಿನ್ನೆ ಪ್ರಾಯೋಗಿಕವಾಗಿ ಮೊದಲ ಭಾನುವಾರ ಲಾಕ್‍ಡೌನ್ ಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿರುವ ಹಿನ್ನಲೆಯಲ್ಲಿ ಇನ್ನೂ ಎರಡು ತಿಂಗಳ ಕಾಲ ಮುಂದುವರೆಸಲು ಸರ್ಕಾರ ತೀರ್ಮಾನಿಸಿದೆ. ನಿನ್ನೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮನೆಯಿಂದ ಆಚೆ ಬಾರದೆ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡು, ಕೊರೊನಾ ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂಬ ಸಂದೇಶ ಸಾರಿದ್ದರು. …
Read More »(ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು.
ಮೂವತ್ತು ದಿನಗಳ ಉಪವಾಸ ಮತ್ತು ಪ್ರಾರ್ಥನೆ ನಂತರ ಬಂದಿರುವ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು. ಮುಸಲ್ಮಾನ ಬಾಂಧವರು ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ಪ್ರತಿ ವರ್ಷ ಪವಿತ್ರ ರಂಜಾನ್ ತಿಂಗಳಿನಲ್ಲಿ ಉಪವಾಸ ಆಚರಿಸಿ ಹಬ್ಬ ಮಾಡುವುದು ವಾಡಿಕೆ. ರಂಜಾನ್ ತಿಂಗಳಿನಲ್ಲಿ ಉಪವಾಸವೆಂದರೆ ಸೂರ್ಯೋದಯಕ್ಕೂ ಮುನ್ನ ಆಹಾರ ಸೇವನೆ ಮಾಡಿ ಬಳಿಕ 14 ಗಂಟೆಗೂ ಹೆಚ್ಚು ಕಾಲ ನೀರು …
Read More »ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ನಿರ್ಬಂಧ – ಕಾಡುದಾರಿಗಳು ಸಂಪೂರ್ಣ ಬಂದ್
ಚಾಮರಾಜನಗರ: ಕೊರೊನಾ ಪ್ರಕರಣಗಳ ಹೈ ರಿಸ್ಕ್ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳುತ್ತಿದ್ದರು. ಇದೀಗ ಕಾಡುದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾದ ಮಹದೇಶ್ವರಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರುತ್ತಿದ್ದರು. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದರು. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್‍ಪೋಸ್ಟ್ ಇದ್ದರೂ …
Read More »ಗ್ರಾಮದ ಮಹಿಳೆಗೆ ಕೊರೊನಾ- ಹಾಲು ಖರೀದಿ ನಿಲ್ಲಿಸಿದ ಕೆಎಂಎಫ್……..
ಬೆಂಗಳೂರು: ಗರ್ಭಿಣಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಕೆಎಂಎಫ್ ಗ್ರಾಮದಿಂದ ಹಾಲು ಖರೀದಿಯನ್ನು ನಿಲ್ಲಿಸಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದ ರೈತರ ಹಾಲು ಚರಂಡಿ ಸೇರಿದೆ. ಚಿಕ್ಕಕೊರಟಿ ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಗ್ರಾಮದ ರೈತರಿಂದ ಹಾಲು ಖರೀದಿಯನ್ನು ಕೆಎಂಎಫ್ ನಿಲ್ಲಿಸಿದೆ. ಶುಕ್ರವಾರದಿಂದ ಹಾಲು ಖರೀದಿ ನಿಲ್ಲಿಸಲಾಗಿದ್ದು, ಸುಮಾರು ನಾಲ್ಕು ಸಾವಿರ ಲೀಟರ್ ನಷ್ಟು ಹಾಲನ್ನು ರೈತರನ್ನು ಚರಂಡಿಗೆ ಚೆಲ್ಲಿದ್ದಾರೆ. ಗ್ರಾಮದ ಬಹುತೇಕ ಜನರು ಹೈನುಗಾರಿಕೆಯಿಂದಲೇ ಜೀವನ …
Read More »ಕ್ವಾರಂಟೈನ್ ಕೇಂದ್ರದ ಬಳಿ ಬ್ರೆಡ್, ಮೊಟ್ಟೆ ಮಾರಾಟ: ಓಡಿ ಬಂದ ಜನ
ರಾಯಚೂರು: ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದ ಜನ ಆಹಾರ ಪದಾರ್ಥಗಳಿಗಾಗಿ ಹೊರಬರುತ್ತಿದ್ದಾರೆ. ಬ್ರೆಡ್, ಮೊಟ್ಟೆ ಹಾಗೂ ತಿನಿಸು ಪದಾರ್ಥಗಳ ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಜನ ಹೊರಬರುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದ ಮುಂದೆಯೇ ವ್ಯಾಪಾರಿಗಳು ಬ್ರೆಡ್ ಸೇರಿ ಇತರೆ ಆಹಾರ ಪದಾರ್ಥಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣದಿಂದ ಬಂದವರಿಗಾಗಿ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ ಜನರ ಓಡಾಟಕ್ಕೆ ಯಾವುದೇ ನಿರ್ಭಂದವಿಲ್ಲದಂತಾಗಿದೆ. ಕಾವಲಿಗೆ ಪೊಲೀಸರು ಇದ್ದರೂ ಕ್ವಾರಂಟೈನ್ ಕೇಂದ್ರದ ಗೇಟ್ …
Read More »ರಾಜ್ಯದಲ್ಲಿ ‘ಮಹಾ’ ಸ್ಫೋಟ- ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆ………..
ಬೆಂಗಳೂರು: ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಕೊರೊನಾ ಸ್ಫೋಟಗೊಂಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 138 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರ 47, ಹಾಸನ 14, ತುಮಕೂರು 8, ಬೀದರ್ 9, ರಾಯಚೂರು 10, ಶಿವಮೊಗ್ಗ 2, ಬೆಂಗಳೂರು, …
Read More »ಕೊರೋನಾ ಕಂಟ್ರೋಲ್‌ಗೆ ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ : ಇಲ್ಲಿದೆ ಡೀಟೇಲ್ಸ್
ಬೆಂಗಳೂರು, ಮೇ 22- ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸೋಂಕು ನಿವಾರಣೆಗೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ನಿಯಂತ್ರಣ ವಲಯ, ಬಫರ್‍ಜೋನ್ ಹಾಗೂ ಕ್ಲಸ್ಟರ್‍ಗಳನ್ನು ಪುನರ್‍ವ್ಯಾಖ್ಯಾನಿಸಿರುವ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ. ನಿಯಂತ್ರಿತ ವಲಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ವಾಸವಾಗಿರುವ ಮನೆಯ ಸುತ್ತಲ ಸರಹದ್ದನ್ನು ಗುರುತಿಸಿ ಆ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು …
Read More »ಚಿಕನ್ ಗೆ ಫುಲ್ ಡಿಮ್ಯಾಂಡ್; ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಬೇಡಿಕೆಯಷ್ಟು ಕೋಳಿ
ಬೆಂಗಳೂರು (ಮೇ 21); ಕೊರೊನೋ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಆಗಿ ಸಾಕಷ್ಟು ಉದ್ಯಮಗಳು ಸಂಕಷ್ಟಕ್ಕೀಡಾಗಿದ್ದರೆ, ಮಾಂಸಾಹಾರ ವ್ಯಾಪಾರ ಮಾತ್ರ ಇಂದಿಗೂ ಫುಲ್ ಡಿಮ್ಯಾಂಡ್ ಉಳಿಸಿಕೊಂಡಿದೆ. ಪ್ರಸ್ತುತ ಚಿಕನ್‌ಗೆ ಎಲ್ಲಿಲ್ಲಿದ ಬೇಡಿಕೆಯಿದ್ದು, ಚಿಕನ್ ವ್ಯಾಪಾರಿಗಳಿಗೆ ಮುಂಗಡ ದುಡ್ಡು ಕೊಟ್ಟರೂ ಬೇಡಿಕೆಯಷ್ಟು ಚಿಕನ್ ಸಿಗುತ್ತಿಲ್ಲ. ಪರಿಣಾಮ ಚಿಕನ್ ದರವೂ ಏರುತ್ತಿದೆ. ಕಳೆದೆರಡು ತಿಂಗಳ ಹಿಂದೆ ಚಿಕನ್ ವ್ಯಾಪಾರ ಸಾಕಷ್ಟು ಕಳೆಗುಂದಿತ್ತು. ಚಿಕನ್ ತಿಂದರೆ ಕೊರೋನಾ ಬರುತ್ತೆ ಎಂಬ ಭಯಕ್ಕೆ …
Read More »ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ: ದರ್ಶನ್ ಪತ್ನಿ ವಿಜಯಲಕ್ಷ್ಮಿ………
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಲಾಕ್‍ಡೌನ್ ವೇಳೆ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ದರ್ಶನ್ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಲಾಕ್‍ಡೌನ್ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. “ಕೊರೊನಾ ಲಾಕ್‍ಡೌನ್‍ನಿಂದ ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ. ಲಾಕ್‍ಡೌನ್ ಮುಗಿದ ನಂತರ ಸ್ಥಳೀಯ ಮಾರಾಟಗಾರರಿಂದ ತರಕಾರಿಗಳನ್ನು ಖರೀದಿಸಿ. ಸ್ಟಾರ್ ಹೋಟೆಲ್‍ಗೆ ಹೋಗಿ ಕಾಫಿ ಕುಡಿಯುವ ಬದಲು ನಿಮ್ಮ ಮನೆಯ ಹತ್ತಿರ …
Read More »ಮಹಾರಾಷ್ಟ್ರದಿಂದ ಬೆಳಗಾವಿಗೆ ಅಕ್ರಮವಾಗಿ ನುಗ್ಗಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ
ಬೆಳಗಾವಿ:ಮಹಾರಾಷ್ಟ್ರದಿಂದ ಬೆಳಗಾವಿಗೆ ಅಕ್ರಮವಾಗಿ ನುಗ್ಗಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಕ್ವಾರಂಟೈನ್ ಗೆ ಒಳಪಡಿಸಿ ಮುಂದೆ ಆಗಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಸಿಕ್ಕಿಬಿದ್ದ ಮೂವರಲ್ಲಿ ಓರ್ವನ ಉಷ್ಣಾಂಶವು 103 ಡಿಗ್ರಿ ಇದ್ದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹವಾಲ್ದಾರ್ ಅವರ ಸಮಯ ಪ್ರಜ್ಞೆಯಿಂದಾಗಿ ಮೂವರು ಜನ ಮಹಾರಾಷ್ಟ್ರದ ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಮೂವರ …
Read More »