Breaking News

Uncategorized

ಶಾಲೆ ಆರಂಭ ಮಾಡದಿದ್ದರೆ ಮಕ್ಕಳು ಬೇರೆ ಚಟ ಕಲಿತು ಬಿಡುತ್ತಾರೆ…..

ಕೊಪ್ಪಳ: ಶಾಲೆ ಆರಂಭ ಮಾಡಬೇಕು. ಆರಂಭ ಮಾಡದಿದ್ದರೆ ಮಕ್ಕಳು ಬೇರೆ ಚಟ ಕಲಿತು ಬಿಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇನ್ನೂ ಎರಡು ತಿಂಗಳು ಶಾಲೆ ಆರಂಭ ಮಾಡುವುದು ಬೇಡ. ನಂತರ ಶಾಲೆ ಪ್ರಾರಂಭ ಮಾಡಬೇಕು. ಎಲ್ಲ ಸಿದ್ಧತೆ ಮಾಡಿಕೊಂಡು ಶಾಲೆ ಆರಂಭ ಮಾಡಬೇಕು. ಎರಡು ಪಾಳಿಯಲ್ಲಿ ಶಾಲೆ ಆರಂಭ ಮಾಡಿ, ಇರುವ ವಿದ್ಯಾರ್ಥಿಗಳನ್ನೇ ದೂರ ದೂರ ಕೂರಿಸಬೇಕು. ಅಲ್ಲದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು …

Read More »

ಎಣ್ಣೆಗಾಗಿ ಗೆಳೆಯನ ಹತ್ಯೆಗೆ ಯತ್ನಿಸಿದ್ದ ರೌಡಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್

ಬೆಂಗಳೂರು: ಎಣ್ಣೆಗಾಗಿ ಗೆಳೆಯನ ಹತ್ಯೆಗೆ ಯತ್ನಿಸಿದ್ದ ರೌಡಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್ ನಡೆಸಿದ್ದಾರೆ. ಮುನಿಕೃಷ್ಣ ಗುಂಡೇಟು ತಿಂದ ಆರೋಪಿ. ಅಮೃತಹಳ್ಳಿ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಅವರು ಫೈರಿಂಗ್ ನಡೆಸಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ. ಕೊರೊನಾ ಲಾಕ್‍ಡೌನ್ ತೆರುವು ನಂತರ ಎಣ್ಣೆ ಅಂಗಡಿಗಳು ಓಪನ್ ಆಗಿದ್ದವು. ಈ ವೇಳೆ ಮದ್ಯದ ಕೊಡಲಿಲ್ಲ ಅಂತ ಮುನಿಕೃಷ್ಣ ಗೆಳೆಯನ ಜೊತೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಜಾಕು ಇರಿದು ಪರಾರಿಯಾಗಿದ್ದ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ …

Read More »

ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಬ್ಯಾನರ್ ಅಳವಡಿಕೆ……….

ಮಂಗಳೂರು: ನಗರದಲ್ಲಿರುವ ಪಂಪ್‍ವೆಲ್ ಫ್ಲೈ ಓವರ್ ಮೇಲೆ ವೀರ್ ಸಾವರ್ಕರ್ ಮೇಲ್ಸೇತುವೆ ಎಂಬ ಬ್ಯಾನರ್ ಹಾಕಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲ ಅಪರಿಚಿತರು ಮೇಲ್ಸೇತುವೆ ಮೇಲೆ ವೀರ್ ಸಾವರ್ಕರ್ ಹೆಸರಿನ ಬ್ಯಾನರ್ ಹಾಕಿ ಪಕ್ಕದಲ್ಲಿಯೇ ಬಜರಂಗದಳ ಎಂದು ಬರೆದು ಫೋಟೋ ಕ್ಲಿಕ್ಕಿಸಿದ್ದಾರೆ. ಫೋಟೋ ಕ್ಲಿಕ್ಕಿಸಿದ ಬಳಿಕ ಬ್ಯಾನರ್ ತೆಗೆದು ಹಾಕಿದ್ದಾರೆ. ಸದ್ಯ ಸ್ಥಳೀಯ ಮಟ್ಟದಲ್ಲಿ ವೀರ್ ಸಾವರ್ಕರ್ ಬ್ಯಾನರ್ ಫೋಟೋಗಳು ಮಿಂಚಿನಂತೆ ಹರಿದಾಡುತ್ತಿವೆ. ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ …

Read More »

ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ರಾಜ್ಯಕ್ಕೆ

ಮಡಿಕೇರಿ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಇನ್ನು ಮುಂಗಾರು ಚುರುಕುಗೊಳ್ಳಲಿದೆ. ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಎನ್‍ಡಿಆರ್‍ಎಫ್ ತಂಡ ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಆಂಧ್ರ ಪ್ರದೇಶದ ಗುಂಟೂರಿನಿಂದ ತಂಡ ಆಗಮಿಸಿದ್ದು, 23 ಸಿಬ್ಬಂದಿಯನ್ನೊಳಗೊಂಡ ಬೆಟಾನಿಯನ್ ಮಡಿಕೇರಿಯ ಮೈತ್ರಿ ಹಾಲ್‍ನಲ್ಲಿ ವಾಸ್ತವ್ಯ ಹೂಡಿದೆ. ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆ ಈ …

Read More »

ಜೂನ್ 3 ರಂದುತಮ್ಮ ಕ್ಷೇತ್ರ ಬಾದಾಮಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭೇಟಿ

ಬಾಗಲಕೋಟೆ: ಕೋವಿಡ್-19 ಲಾಕ್‌ಡೌನ್‌ ನಂತರ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ಬಾದಾಮಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭೇಟಿ ನೀಡುತ್ತಿದ್ದಾರೆ. ಜೂನ್ 3 ರಂದು ಬಾದಾಮಿಗೆ ಬಂದು ಮರುದಿನ ಬೆಂಗಳೂರಿಗೆ ಮರಳಲಿರುವ ಅವರು, ಕೊರೊನಾ ಸೋಂಕು ಹರಡದಂತೆ ತಾಲ್ಲೂಕು ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರವಾಸದ ವೇಳೆ ಪರಿಶೀಲಿಸಲಿದ್ದಾರೆ. ಬುಧವಾರ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು ಕೊಪ್ಪಳ ಜಿಲ್ಲೆ ಗಿಣಿಗೇರಾಗೆ ಬರುವ ಸಿದ್ದರಾಮಯ್ಯ, ಅಲ್ಲಿಂದ ರಸ್ತೆ ಮಾರ್ಗವಾಗಿ ಬಾದಾಮಿ ಬರಲಿದ್ದಾರೆ. …

Read More »

ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ……….

ಬೆಂಗಳೂರು: ನೈಟ್ ಕರ್ಫ್ಯೂ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್ ಸಂಚಾರದ ಅವಧಿಯಲ್ಲಿ ಬದಲಾವಣೆಯಾಗಿದೆ. ಇದುವರೆಗೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಇತ್ತು. ಇಂದಿನಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್‍ಗಳು ಓಟಾಟ ಮಾಡಲಿವೆ. ಈ ಹಿಂದೆಯೇ ಎಂಡಿ ಶಿಖಾ ಅವರು ಬಸ್ ಸಂಚಾರ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ …

Read More »

ಕೊರೊನಾ ಸೋಂಕಿತ ಕಟಿಂಗ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಲೂನ್ ಶಾಪ್ ಮಾಲೀಕರಲ್ಲಿ ಆತಂಕ

ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಲೂನ್ ಒಂದರಲ್ಲಿ ಕೊರೊನಾ ಸೋಂಕಿತ ಕಟಿಂಗ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಲೂನ್ ಶಾಪ್ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಈವರೆಗೆ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೂ ಐವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕೋಲಾರ ಜಿಲ್ಲೆಗೆ ಹೊರ ರಾಜ್ಯ, ವಿದೇಶದಿಂದ ಬಂದವರಿಂದಲೇ ಕಂಟಕ ಎದುರಾಗುತ್ತಿದೆ. ಸದ್ಯಕ್ಕೆ ಮಲೇಷಿಯಾದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದು ಅಧಿಕಾರಿಗಳನ್ನು …

Read More »

ರಾಜ್ಯ ಸಭೆ-ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮಹತ್ವದ ಸಭೆ

ಬೆಂಗಳೂರು, ಜೂ.1-ಮುಂಬರುವ ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರ ಹಾಗೂ ಪಕ್ಷದ ಪ್ರಮುಖರ ಮಹತ್ವದ ಸಭೆ ಸದ್ಯದಲ್ಲೆ ನಡೆಸಲು ಉದ್ದೇಶಿಸಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ತಾಂಡವವಾಡುತ್ತಿರುವ ಕೊರೋನಾ ವೈರಾಣು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ, ಪಕ್ಷ ಸಂಘಟನೆ ಮೊದಲಾದ ವಿಚಾರಗಳ ಬಗ್ಗೆ …

Read More »

ಕುಂದಾನಗರಿಯಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ

ಬೆಳಗಾವಿ: ಕೆಲವು ದಿನಗಳಿಂದ ಅನೇಕ ಕಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಇದೀಗ ಕುಂದಾನಗರಿಯಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಇದರಿಂದ ಬೆಳಗಾವಿಯ ಶಾಹುನಗರ ಸೇರಿದಂತೆ ತಗ್ಗುಪ್ರದೇಶದಲ್ಲಿ ಕೆಲ ಮನೆಗಳಲ್ಲಿ ನೀರು ನುಗ್ಗಿದೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಜನರು ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಇರುತ್ತೆ. ಈ ನಗರದಲ್ಲಿ ಒಳಚರಂಡಿ ವ್ಯವಸ್ಥೆಯೂ …

Read More »

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಂಡಾಯ,ಅಸಮಾಧಾನಿತ ಶಾಸಕರ ಮತ್ತೆ ಸಭೆ………

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಂಡಾಯ ಭುಗಿಲೆದ್ದಿದ್ದು, ಅಸಮಾಧಾನಿತ ಶಾಸಕರು ಮತ್ತೆ ಸಭೆ ಸೇರಲು ನಿರ್ಧರಿಸಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದರೆ ಇನ್ನೊಂದೆಡೆ ಬಂಡಾಯ ಶಾಸಕರ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಯತ್ನ ನಡೆಸಿದೆ. ಈ ನಡುವೆ ಬುಧವಾರ ಮತ್ತೊಮ್ಮೆ ಸಭೆ ಸೇರಲು ಬಂಡಾಯ ಶಾಸಕರು ತೀರ್ಮಾನಿಸಿದ್ದಾರೆ. 2 ದಿನಗಳ ಹಿಂದಷ್ಟೇ ಬಿಜೆಪಿ ಬಂಡಾಯ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಬಿಜೆಪಿಯ …

Read More »