Breaking News

Uncategorized

ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು…

ಬೆಳಗಾವಿ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಮನೆ ಮನೆಗೆ ತೆರಳಿ ಸಮೀಕ್ಷೆ ಕೈಗೊಂಡು ಉಸಿರಾಟದ ತೊಂದರೆ, ಜ್ವರ ಮತ್ತಿತರ ಸೋಂಕಿನ ಲಕ್ಷಣಗಳು ಇರುವ ಹಿರಿಯ ನಾಗರಿಕರನ್ನು ಗುರುತಿಸಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.   ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ …

Read More »

ಕಾಫಿನಾಡು ಚಿಕ್ಕಮಗಳೂರಿಗೆ ಶುಭ ಸುದ್ದಿ- ಜಿಲ್ಲೆ ಸದ್ಯ ಕೊರೊನಾ ಮುಕ್ತ

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದರೂ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಜಿಲ್ಲೆಯು ಸದ್ಯ ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ. ಕಳೆದ ಕೆಲವು ದಿನಗಳಿಂದ ಕೋವಿಡ್-19 ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಎಲ್ಲಾ 16 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 16 ಮಂದಿಗೆ ಸೋಂಕು ಪತ್ತೆಯಾಗಿತ್ತು. ಅವರೆಲ್ಲರೂ ಇದೀಗ ಸಂಪೂರ್ಣ ಗುಣಮುಖತಾಗಿದ್ದು, ಜಿಲ್ಲಾಡಳಿತವು ಡಿಸ್ಚಾರ್ಜ್ ಗೂ ಮುನ್ನವೇ …

Read More »

ಗೋವಾ ರಾಜ್ಯಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಕೆಲ ಕಿಡಿಗೇಡಿಗಳು  ವಾಹನಕ್ಕೆ ಬೆಂಕಿ ಹಚ್ಚಿ ಸುಡಲಾಗಿದೆ.

ಬೆಳಗಾವಿ:  ಜಿಲ್ಲೆಯಿಂದ  ಗೋವಾ ರಾಜ್ಯಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲ ಕಿಡಿಗೇಡಿಗಳು  ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಕರ್ಲೇ- ಬೆಳವಟ್ಟಿ ಗ್ರಾಮದ ಮಧ್ಯೆ ನಡೆದಿದೆ. ಗೋವಾ ರಾಜ್ಯಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು  ಕೆಲ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನಕ್ಕಗಿ ಕಾಯುತ್ತಾ ನಿಂತಿದ್ದರು.  ಕರ್ಲೇಯಿಂದ ಒಂದು ಕಿ.ಮೀ. ಅಂತರದಲ್ಲಿ ವಾಹನ ಬರುತ್ತಿದ್ದಂತೆ ತಡೆದು ವಾಹನಕ್ಕೆ ಬೆಂಕಿ ಹಚ್ಚಿ ಸುಡಲಾಗಿದೆ. ವಾಹನದಲ್ಲಿ ಇದ್ದವರು ಓಡಿ ಹೋಗಿದ್ದಾರೆ. ಬೆಳವಟ್ಟಿ ಮಾರ್ಗದಿಂದ …

Read More »

ದುಬಾರಿ ಕೋವಿಡ್- ರೋಗಿಯ ಜೇಬಿಗೆ ಕತ್ತರಿ ಹಾಕಲಿದೆಯಾ ಕೊರೊನಾ?

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಈ ನಡುವೆ ಕೊರೊನಾ ಚಿಕಿತ್ಸೆ ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆಯಾ ಅನ್ನೋ ಸುಳಿವು ಸಿಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋದ್ರೆ ಉಚಿತ ಚಿಕಿತ್ಸೆ ದೊರೆಯುವ ಕಷ್ಟ ಎನ್ನಲಾಗುತ್ತಿದೆ. ಎಲ್ಲ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋದು ಅನುಮಾನ. ಹಾಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದೆ ಎಂದು ತಿಳಿದು ಬಂದಿದೆ. ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಮುಂದಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಹ …

Read More »

ಸತ್ತ ಮೇಲೆಯೂ ಕೆಲಸದವರ ಪಾಲಿಗೆ ಮತ್ತಪ್ಪ ರೈ ದಾರಿ ದೀಪವಾಗಿದ್ದಾರೆ.

ಬೆಂಗಳೂರು: ಸತ್ತ ಮೇಲೆಯೂ ಕೆಲಸದವರ ಪಾಲಿಗೆ ಮತ್ತಪ್ಪ ರೈ ದಾರಿ ದೀಪವಾಗಿದ್ದಾರೆ. ಮನೆಗೆಲಸ, ತೋಟ, ಹಾಗೂ ಕಾರು ಚಾಲಕರು, ಗನ್ ಮ್ಯಾನ್ ಗಳಿಗೆ ಸೈಟ್ ಮತ್ತು ಹಣ ನೀಡಿದ್ದಾರೆ. ಮುತ್ತಪ್ಪ ರೈ ನಿಧನರಾದ ಬಳಿಕ ಆಸ್ತಿ ಏನಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಮುತ್ತಪ್ಪ ರೈ ಬದುಕಿರುವಾಗಲೇ ವಿಲ್ ಬರೆದು ಉತ್ತರ ನೀಡಿದ್ದಾರೆ. 41 ಪುಟಗಳ ವಿಲ್‍ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳು ಯಾರಿಗೆ …

Read More »

ಹಣ್ಣಿನಲ್ಲಿ ಪಟಾಕಿ ಇರಿಸಿ ಆನೆಯನ್ನು ಹತ್ಯೆ ಮಾಡಿದ ಮೂವರು ಶಂಕಿತರ ಬಂಧನ

ಕೊಚ್ಚಿನ್,ಜೂ.5- ಕೇರಳದ ಅರಣ್ಯ ಪ್ರದೇಶದಲ್ಲಿ ಅನಾನಸ್ ಹಣ್ಣುಗಳಲ್ಲಿ ಪಟಾಕಿಯನ್ನು ಇರಿಸಿ ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರನ್ನು ಅಮ್ಜದ್ ಅಲಿ ಮತ್ತು ತಮೀಮ್ ಶೇಖ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿಯ ಗುರುತು ಗೌಪ್ಯವಾಗಿಡಲಾಗಿದೆ. ಈ ಆನೆ ಹತ್ಯೆ ಹಿಂದೆ ವ್ಯವಸ್ಥಿತ ಜಾಲದ ಸಂಚು ಇರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದ್ದು, ಮತ್ತಷ್ಟು ಜನರು ಬಲೆ ಬೀಳುವ ಸಾಧ್ಯತೆ ಇದೆ. …

Read More »

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ,ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ

ಬೆಳಗಾವಿ- ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟಗರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿ ಸೂಚನೆ ನೀಡಿದ್ರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಕಿಟ್ ವಿತರಿಸುತ್ತಾರೆ ಎಂಬ ವದಂತಿ ಹಿನ್ನೆಲೆ,ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಜನ ಸೇರಿರುವ ದೃಶ್ಯ

ಬೆಳಗಾವಿ:  ಆಹಾರ ಧಾನ್ಯ ಕಿಟ್ ವಿತರಿಸುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಇಂದು ಕೂಡ ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಜನ ಸೇರಿರುವ ದೃಶ್ಯ ಕಂಡು ಬಂತು. ಇಲ್ಲಿನ ಚನ್ನಮ್ಮ ವೃತ್ತದಲ್ಲಿರುವ ಸಚಿವ ಸುರೇಶ ಅಂಗಡಿ  ಅವರ ಕಚೇರಿ  ಎದುರು  ಸಾವಿರಾರು ಸಂಖ್ಯೆಯಲ್ಲಿ  ಜನರು ಸೇರಿದ್ದರು.  ಸಮಾಜಿಕ  ಅಂತರ ಕಾಯ್ದುಕೊಳ್ಳದೇ, ಕನಿಷ್ಟ ಮಾಸ್ಕ್ ಕೂಡ ಧರಿಸಿರಲಿಲ್ಲ.  ಸುಮಾರು ಐದು ಸಾವಿರ ಆಹಾರ ಧಾನ್ಯ ಕಿಟ್ ನೀಡಲಾಗುತ್ತಿದೆ ಎಂಬ  ವದಂತಿ …

Read More »

ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಬೆಳಗಾವಿ ಯಲ್ಲಿ ಇಂದು ಮೊದಲ ಸಭೆ.. ಸುಮಾರು ವಿಷಯ ಗಳ ಬಗ್ಗೆ ಚರ್ಚ್

ಬೆಳಗಾವಿ- ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟಗರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿ ಸೂಚನೆ ನೀಡಿದ್ರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಸೊಲ್ಲಾಪುರ ಜೈಲಿನಲ್ಲಿ ಸಿಬ್ಬಂದಿ ಸೇರಿ 60 ಮಂದಿಗೆ ಕೊರೊನಾ……….

ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರ ಜೈಲಿನಲ್ಲಿ ಸಿಬ್ಬಂದಿ ಸೇರಿ 60 ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸೊಲ್ಲಾಪುರ ಜಿಲ್ಲಾಧಿಕಾರಿ ಮಿಲಿಂದ್ ಶಂಭಾರ್ಕರ್, ಜೈಲಿನಲ್ಲಿ ಒಟ್ಟು 300 ಮಂದಿ ಕೈದಿಗಳಿದ್ದಾರೆ. ಕೊರೊನಾ ತಗುಲಿದ 60 ಮಂದಿಯ ಪೈಕಿ 8 ಜನ ಜೈಲು ಸಿಬ್ಬಂದಿ ಇದ್ದಾರೆ. ಎಲ್ಲರನ್ನೂ ಸದ್ಯ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸೊಲ್ಲಾಪುರ ಜೈಲಿನ ಕೈದಿ ಮತ್ತು ಸಿಬ್ಬಂದಿಗೆ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಈ …

Read More »