Breaking News

Uncategorized

ಊಟ ಬಡಿಸುವುದು ತಡವಾಯಿತೆಂದು ತಾಯಿಗೇ ಗುಂಡಿಟ್ಟ ಭೂಪ!

ನವದೆಹಲಿ: ರಾತ್ರಿ ತನಗೆ ಊಟ ಬಡಿಸಲು ತಡಮಾಡಿದಳು ಎಂದು ಪುತ್ರನೊಬ್ಬ ಗುಂಡಿಟ್ಟು ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಬಾವಾನಾ ಕೈಗಾರಿಕಾ ಪ್ರದೇಶದ ನಿವಾಸಿ ಬಾಲಾ ದೇವಿ (60) ಹತಳಾದ ತಾಯಿ. ಸೂರಜ್​ (26) ಹತ್ಯೆ ಮಾಡಿದವನು. ಆತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಅಕ್ರಮ ಪಿಸ್ತೂಲ್​ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರಜ್​ ಶುಕ್ರವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ. ಬಾಲಾದೇವಿ ಇನ್ನೂ ಅಡುಗೆ ಮಾಡುತ್ತಿದ್ದಳು. ಮನೆಗೆ …

Read More »

GST ತೆರಿಗೆದಾರರಿಗೆ ಭರ್ಜರಿ ಸಿಹಿಸುದ್ದಿ

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ರಿಟರ್ನ್ ಸಲ್ಲಿಕೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್ ಮತ್ತು ತೆರಿಗೆ ಪಾವತಿ ಅರ್ಜಿ GSTR-3B ವಿಳಂಬ ಸಲ್ಲಿಕೆ ಶುಲ್ಕವನ್ನು ಗರಿಷ್ಠ 500 ರೂಪಾಯಿಗಳಿಗೆ ಮಿತಿಗೊಳಿಸಲಾಗಿದೆ. 2017ರ ಜುಲೈನಿಂದ 2020ರ ಜುಲೈ ವರೆಗಿನ ಅವಧಿಯ ರಿಟರ್ನ್ ಗಳಿಗೆ ಈ ನಿಯಮ ಅನ್ವಯವಾಗಲಿದ್ದು, ತೆರಿಗೆ ಬಾಕಿ ಉಳಿಸಿಕೊಂಡಿರದಿದ್ದರೆ ವಿಳಂಬ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ತೆರಿಗೆದಾರರಿಗೆ ಈ …

Read More »

ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ.

ಕೋಲಾರ: ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಿಂದ ಪ್ರತಿಭಟನೆಯನ್ನು ಮಾಡುತ್ತಿದ್ದು, ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳು ಉಲ್ಲುಂಘನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ. ಮಾರುಕಟ್ಟೆಯ ಸೆಸ್ ಪಾವತಿಸುವುದಕ್ಕೆ ವಿರೋಧಿಸಿ ಪ್ರತಿಭಟನೆ ಮಾಡಿತ್ತಿದ್ದು, ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಪಾವತಿಸುವ ಸೆಸ್ ಶುಲ್ಕ ಮಾಡಿದ್ದಾರೆ. ಕೋವಿಡ್ ಸಮಸ್ಯೆ ಬಗೆಹರಿಯುವರೆಗು ಸೆಸ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸೆಸ್ ಸಂಗ್ರಹ ನಿಲ್ಲಿಸಿದ್ದ ಎಪಿಎಂಸಿ ಕೊರೋನಾ ಮುಂದುವರೆದಿದ್ದರೂ …

Read More »

ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಧುಗಿರಿ: ತಾಲ್ಲೂಕಿನಲ್ಲಿ 12 ಜನರಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 38 ವರ್ಷದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಎಲ್ಲರ ನಿದ್ದೆಗೆಡಿಸಿದೆ. ತಾಲ್ಲೂಕಿನ ಶ್ರಾವಂಡನಹಳ್ಳಿಯ 26 ವರ್ಷದ ಮಹಿಳೆ, ಗೊಂದಿಹಳ್ಳಿಯ 65 ವರ್ಷದ ವೃದ್ದ, ಚಿಕ್ಕದಾಳವಟ್ಟದ 63 ವರ್ಷದ ವೃದ್ಧ, ಅಮರಾವತಿಯ 22 ವರ್ಷ ಯುವಕ, ಆಚೇನಹಳ್ಳಿಯ 8 ವರ್ಷದ ಬಾಲಕ, ಮಧುಗಿರಿ …

Read More »

ಅಭಿಮಾನಿಗಳ ಬಗ್ಗೆ ಡಿಂಪಲ್ ಕ್ವೀನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ…!

  ಅಭಿಮಾನಿಗಳಂದ್ರೆನೇ ಹಾಗೇ, ನೆಚ್ಚಿನ ನಟನಟಿಯರ ಹುಟ್ಟುಹಬ್ಬ ಬರ್ಲಿ, ಸಿನಿಮಾ ರಿಲೀಸ್​ ಆಗಲಿ, ಹಬ್ಬದಂತೆ ಆಚರಿಸ್ತಾರೆ, ಅವರನ್ನ ನೋಡಿ ಕಣ್ತುಂಬಿಕೊಳ್ಳೋಕ್ಕೆ ಗಂಟೆಗಟ್ಟಲೇ ಮನೆಮುಂದೆ ಕಾದು ಕೂತಿರ್ತಾರೆ, ಒಮ್ಮೆ ನೇರವಾಗಿ ತಮ್ಮ ನೆಚ್ಚಿನ ಸ್ಟಾರ್​ಗಳನ್ನ ಮಾತನಾಡಿಸಿ ಬಿಟ್ರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ, ಅದನ್ನ ಹೊರತುಪಡಿಸಿ ಬೇರೇನನ್ನ ಬಯಸೋದು ಇಲ್ಲ ಅಭಿಮಾನಿಗಳು, ಅದಕ್ಕೆ ಅಭಿಮಾನಿಗಳನ್ನ ದೇವರು ಅಂದ್ರು ಡಾ.ರಾಜ್​ ಕುಮಾರ್. ಇದೀಗ ಅಂತಹ ಒಬ್ಬ ಅಭಿಮಾನಿಯ ಬಗ್ಗೆ ಡಿಂಪಲ್​ ಕ್ವೀನ್​ ರಚಿತಾರಾಮ್​ ತಮ್ಮ …

Read More »

ಸತ್ಯಸಾಯಿ ಸಂಸ್ಥೆಯ 2 ಹೊಸ ಕ್ಯಾಂಪಸ್ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮತಿ

ಮುದ್ದೇನಹಳ್ಳಿ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಇನ್ಸಿಟ್ಯೂಟ್ ಆಫ್ ಹ್ಯೂಮನ್ ಎಕ್ಸಲೆನ್ಸ್ ಸಂಸ್ಥೆಗೆ ಎರಡು ಹೊಸ ಕ್ಯಾಂಪಸ್ ಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸಂಸ್ಥೆಗೆ ಗುರುವಾರ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು, ಸಂಸ್ಥೆಯ ಮುಖ್ಯಸ್ಥರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರಿಗೆ ಅನುಮತಿ ಪತ್ರಗಳನ್ನು ಹಸ್ತಾಂತರ …

Read More »

ಕಿಮ್ಸ್‌ನಿಂದ ಶುಕ್ರವಾರ ಬೆಳಿಗ್ಗೆ ಪರಾರಿಯಾಗಿದ್ದ ಕೊರೊನಾ ಸೋಂಕಿತ ರಾತ್ರಿ ಗದಗದಲ್ಲಿ ಸಿಕ್ಕು ಬಿದ್ದಿದ್ದಾನೆ.

ಹುಬ್ಬಳ್ಳಿ: ಕಿಮ್ಸ್‌ನಿಂದ ಶುಕ್ರವಾರ ಬೆಳಿಗ್ಗೆ ಪರಾರಿಯಾಗಿದ್ದ ಕೊರೊನಾ ಸೋಂಕಿತ ರಾತ್ರಿ ಗದಗದಲ್ಲಿ ಸಿಕ್ಕು ಬಿದ್ದಿದ್ದಾನೆ. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಕೊರೊನಾ ಸೋಂಕಿತ ಆರೋಪಿ ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಐಸೋಲೇಷನ್ ವಾರ್ಡ್‍ನಿಂದ ಹೊರಬಂದ 55 ವರ್ಷದ ಸೋಂಕಿತ ಆರೋಪಿ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದ. ಬೆಳಗ್ಗೆ ವೈದ್ಯರು ಚಿಕಿತ್ಸೆ ನೀಡಲು ತೆರಳಿದ ವೇಳೆ ಇದು ಬೆಳಕಿಗೆ ಬಂದಿತ್ತು. ಈತನನ್ನು ಕಾಯ್ದುಕೊಳ್ಳಲು ಇಬ್ಬರು …

Read More »

ಬಂಧಿಸಲು ಹೋದಾಗ ಕ್ರಿಮಿನಲ್ ಗ್ಯಾಂಗ್‍ನಿಂದ ಫೈರಿಂಗ್- 8 ಮಂದಿ ಪೊಲೀಸರು ದುರ್ಮರಣ

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್‍ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್ ಗಳನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿದೆ. ಈ ಘಟನೆ ಉತ್ತರಪ್ರದೇಶ ರಾಜಧಾನಿ ಲಕ್ನೋದಿಂದ 150 ಕಿ.ಮಿ ದೂರದಲ್ಲಿ ನಡೆದಿದೆ. ಮೃತರನ್ನು ಸಿಒ ದೇವೇಂದ್ರ ಕುಮಾರ್ ಮಿಶ್ರಾ, ಎಸ್‍ಒ ಮಹೇಶ್ ಯಾದವ್, ಅನೂಪ್ ಕುಮಾರ್, ಸಬ್ ಇನ್ಸ್ …

Read More »

ಕೊರೊನಾ ಎಂಬ ಮಹಾಮಾರಿ ಬದುಕು ಬದಲಿಸಿ ಈಗ ಬೀದಿಯಲ್ಲಿ ನಿಂತು ಕೆಲಸ ಮಾಡುವಂತೆ ಮಾಡಿದೆ.

ಬೆಂಗಳೂರು: ಕೊರೊನಾ ಸುನಾಮಿ ಹಲವರ ಬದುಕನ್ನು ಅತಂತ್ರ ಮಾಡಿದೆ. ಲಾಕ್‍ಡೌನ್‍ಗೂ ಮುಂಚೆ ಹೇಗೋ ಜೀವನಸಾಗಿಸುತ್ತಿದ್ದ ವಯೋವೃದ್ಧೆಯರು ಈಗ ದುಡಿಮೆಗಾಗಿ ಗಾಳಿ, ಬಿಸಿಲು, ಮಳೆ ಎನ್ನದಂತೆ ದುಡಿಯಬೇಕಿದೆ. ಕೊರೊನಾ ಎಂಬ ಮಹಾಮಾರಿ ಬದುಕು ಬದಲಿಸಿ ಈಗ ಬೀದಿಯಲ್ಲಿ ನಿಂತು ಕೆಲಸ ಮಾಡುವಂತೆ ಮಾಡಿದೆ. ಮನೆಗೆಲಸ ಮಾಡುತ್ತಿದ್ದ ಮಹಿಳೆ, ಕಳೆದ 10 ವರ್ಷಗಳಿಂದ ತಿಂಗಳಿಗೊಮ್ಮೆ ಸಂಬಳ. ಹತ್ತಾರು ಮನೆಯಲ್ಲಿ ಅಡುಗೆ, ಕ್ಲಿನಿಂಗ್ ಕೆಲಸ ಇಷ್ಟೇ ಈಕೆ ಪ್ರಪಂಚವಾಗಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. …

Read More »

ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬೆಂಗಳೂರು: ನಟ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿದೆ. ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ …

Read More »