ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನು ಭೂತರಾಮಟ್ಟಿಯಿಂದ ಹಿರೇಬಾಗೇವಾಡಿಗೆ ಸ್ಥಳಾಂತರಿಸಲಾಗಿದ್ದು, ಹಿರೇಬಾಗೇವಾಡಿ ಗ್ರಾಮಸ್ಥರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಕ್ಯಾಬಿನೆಟ್ ಅನುಮೋದನೆ ಅಷ್ಟೇ ಬಾಕಿ ಉಳಿದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಾಚರಣೆ ಮಾಡಿದ್ದಾರೆ.
Read More »ಹಾಡಹಗಲೇ ಗ್ರಾಮದೊಳಗೆ ನುಗ್ಗಿದ ಕಾಡಾನೆ
ಸಕಲೇಶಪುರ: ತಾಲ್ಲೂಕಿನ ಮಠಸಾಗರ ಗ್ರಾಮಕ್ಕೆ ಬುಧವಾರ ಬೆಳಿಗ್ಗೆ ನುಗ್ಗಿದ ಕಾಡಾನೆ ಗ್ರಾಮಸ್ಥರಲ್ಲಿ ಭಯ ಉಂಟುಮಾಡಿತು. ಬೆಳಿಗ್ಗೆ 7.30ರ ಸುಮಾರಿಗೆ ಗ್ರಾಮದ ಮನೆಗಳ ಅಂಗಳಕ್ಕೆ ಬಂದ ಕಾಡಾನೆ ಕಂಡು ಗ್ರಾಮಸ್ಥರು ಕೂಗಿಕೊಂಡರು. ಜಾಗೃತಗೊಂಡ ಸ್ಥಳೀಯರು ಬಳಿಕ ಮನೆಯಿಂದ ಹೊರ ಬರಲಿಲ್ಲ. ಸುಮಾರು 15 ನಿಮಿಷಗಳ ಕಾಲ ಗ್ರಾಮದಲ್ಲಿ ಗಾಬರಿಯಿಂದ ಓಡಾಡುತ್ತಿದ್ದ ಆನೆ ನಂತರ ಪಕ್ಕದ ಕಾಫಿ ತೋಟದತ್ತ ತೆರಳಿತು. ಯಾವುದೇ ಪ್ರಾಣಹಾನಿ ಉಂಟಾಗಲಿಲ್ಲ. 10 ದಿನಗಳ ಹಿಂದೆ ಇದೇ ಗ್ರಾಮದಿಂದ ಕೂಗಳತೆ ದೂರದಲ್ಲಿ …
Read More »ಕೊರೊನಾ ಸಂಕಷ್ಟದಲ್ಲೂ ರಿಲಾಯನ್ಸ್‌ಗೆ ಹಣದ ಹೊಳೆ, ಸಿಲ್ವರ್ ಲೇಕ್‍ನಿಂದ 7,500 ಕೋಟಿ ರೂ. ಹೂಡಿಕೆ..!
ನವದೆಹಲಿ, -ಕೊರೊನಾ ವೈರಸ್ ಹಾವಳಿಯಿಂದ ದೇಶದ ಅನೇಕ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿ ಅಸ್ವಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಭಾರತದ ಪ್ರತಿಷ್ಠಿತ ರಿಲಾಯನ್ಸ್ ಸಂಸ್ಥೆಗೆ ನಿರಂತರವಾಗಿ ಹಣದ ಹೊಳೆ ಹರಿದುಬರುತ್ತಿದೆ. ಅಮೆರಿಕದ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‍ನರ್ಸ್, ಹೆಸರಾಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್‍ನ ರಿಲಾಯನ್ಸ್ ರಿಟೈಲ್‍ನಲ್ಲಿ 7,500 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡಿ ಶೇ.1.75ರಷ್ಟು ಪಾಲು ಪಡೆದಿದೆ. ಸಿಲ್ವರ್ ಲೇಕ್ ಕಂಪನಿಯು ರಿಲಾ …
Read More »ಸಂಜನಾ-ರಾಗಿಣಿಗೆ ಸಿಸಿಬಿ ಡ್ರಿಲ್, ಹಲವರ ಹೆಸರು ಬಾಯಿಬಿಟ್ಟ ‘ಮಾದಕ’ ನಟಿಮಣಿಯರು
ಬೆಂಗಳೂರು, – ಡ್ರಗ್ಸ್ ಜಾಲದ ಆಳ-ಅಗಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಂಧಿತ ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿಯವರ ವಿಚಾರಣೆ ಮುಂದುವರೆಸಿದ್ದು, ಸುಮಾರು 34 ಮಂದಿಯ ಹೆಸರನ್ನು ಬಾಯಿ ಬಿಡಿಸಿದ್ದಾರೆ. ಈ ಇಬ್ಬರು ನಟಿಯರು ಚಿತ್ರರಂಗದ ಪ್ರಮುಖ ನಟಿಯೊಬ್ಬರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಮತ್ತು ಅವರ ಪುತ್ರರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ. ಸಿಸಿಬಿಯ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಚಿತ್ರರಂಗದ ಖ್ಯಾತನಾಮರು ಮತ್ತು ರಾಜಕಾರಣಿಗಳ ಬೆನ್ನು ಹುರಿಯಲ್ಲಿ ಚಳಿ ಶುರುವಾಗಿದೆ. ಬಂಧಿತ …
Read More »ಸಿಎಂ ಭೇಟಿ ಮಾಡಿದ ಸ್ಯಾಂಡಲ್ವುಡ್ ‘ಲೀಡರ್’ ಶಿವಣ್ಣ ಅಂಡ್ ಟೀಮ್
ಬೆಂಗಳೂರು, ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟ ಶಿವರಾಜ್ ಕುಮಾರ್ ನೇತೃತ್ವದ ತಂಡ ಸಲ್ಲಿಸಿತು. ಕಳೆದ 6 ತಿಂಗಳಿನಿಂದ ಕೊರೊನಾದಿಂದ ತತ್ತರಿಸಿರುವ ಚಿತ್ರೋದ್ಯಮದ ಮಂದಿಗೆ ನೆರವು ನೀಡಲು ವಿಶೇಷ ಪ್ಯಾಕೇಜ್ ಅಗತ್ಯವಿದೆ. ಸರ್ಕಾರ ಇದನ್ನು ನೀಡುವಂತೆ ಕೊರಲಾಯಿತು. ಜೊತೆಗೆ ವಾರ್ಷಿಕ ತೆರಿಗೆ ಮನ್ನ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳ ಕರೆಂಟ್ ಬಿಲ್‍ನ್ನು ಮನ್ನ …
Read More »ಅ.1ರಿಂದ ಚಿತ್ರಮಂದಿರ ತೆರೆಯುವ ಸಾಧ್ಯತೆ
ಬೆಂಗಳೂರು,- ಅಕ್ಟೋಬರ್ 1ರಿಂದ ಚಲನಚಿತ್ರ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ. ದಕ್ಷಿಣ ಮತ್ತು ಉತ್ತರ ಭಾರತದ ವಾಣಿಜ್ಯ ಮಂಡಳಿಗಳು ಕೇಂದ್ರ ಸರ್ಕಾರಕ್ಕೆ ಚಿತ್ರಮಂದಿರಗಳನ್ನು ತೆರೆಯುವ ಸಂಬಂಧ ಮನವಿ ಸಲ್ಲಿಸಿದ್ದು, ಇದಕ್ಕೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳು ನಡೆಯದೇ ಸಂಪೂರ್ಣ ಸ್ಥಗಿತವಾಗಿದೆ. …
Read More »‘ಗ್ರಾಮಪಂಚಾಯ್ತಿ ಡಾಟಾ ಎಂಟ್ರಿ ಆಪರೇಟರ್’ಗಳೇ ಗಮನಿಸಿ : ರಾಜ್ಯ ಸರ್ಕಾರದಿಂದ 1 ಗಂಟೆ ಕೋವಿಡ್ ಕೆಲಸ ಮಾಡುವಂತೆ ಆದೇಶ
ಬೆಂಗಳೂರು : ರಾಜ್ಯದ ವಿವಿಧ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಗಳನ್ನು, ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ದಿನ ಒಂದು ಗಂಟೆ ಕೆಲಸ ನಿರ್ವಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ರಾಜ್ಯದ …
Read More »ಈ ವರ್ಷ ‘ಬೆಂಗಳೂರಿಗೆ ಪ್ರತ್ಯೇಕ ಕಾನೂನು’ ಜಾರಿ – ಡಿಸಿಎಂ ಡಾ.ಅಶ್ವತ್ಥ ನಾರಾಯಣ
ಬೆಂಗಳೂರು : ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮತ್ತಿತರೆ ಮೂಲಭೂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆಗಳನ್ನಿಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದು ಇತರೆ ನಗರಗಳಂತೆ ಅಲ್ಲ. ದಿನೇದಿನೆ ರಾಜ್ಯದ ಮೂಲೆಮೂಲೆಗಳಿಂದ, ಇತರೆ ರಾಜ್ಯಗಳಿಂದ …
Read More »500 ಕನ್ನಡ ಪುಸ್ತಕ ಸಗಟು ಖರೀದಿಗೆ ಕ್ರಮ – ಸಚಿವ ಎಸ್ ಸುರೇಶ್ ಕುಮಾರ್
ಬೆಂಗಳೂರು : ರಾಜ್ಯ ಗ್ರಂಥಾಲಯ ಇಲಾಖೆಯಿಂದ ವಾರ್ಷಿಕ ಸಗಟು ಖರೀದಿ ಯೋಜನೆಯಡಿ ಇನ್ನು ಮುಂದೆ ಕನ್ನಡ ಪುಸ್ತಕಗಳ 500 ಪ್ರತಿಗಳನ್ನು ಖರೀದಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಬುಧವಾರ ರಾಜ್ಯ ಸಾರ್ವಜನಿಕ ಗ್ರಂಥಾಲಯ ನಿರ್ದೇಶನಾಲಯದಲ್ಲಿ ನೂತನ ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರಹಗಾರರ ಮತ್ತು ಪ್ರಕಾಶಕರ ಸಂಘದ ಕೋರಿಕೆಯಂತೆ ಬಹುದಿನಗಳ ನಿರೀಕ್ಷೆಯಾಗಿದ್ದ …
Read More »ಎಬಿವಿಪಿಯಿಂದ ಸಹಿ ಸಂಗ್ರಹ ಅಭಿಯಾನ ಆರಂಭ
ಬೆಳಗಾವಿ: ‘ಡ್ರಗ್ಸ್ ಜಾಲದಲ್ಲಿ ತೊಡಗಿರುವವರನ್ನು ತಕ್ಷಣ ಬಂಧಿಸಿ, ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಹಾನಗರ ಘಟಕದ ಕಾರ್ಯಕರ್ತರು ಬುಧವಾರ ಸಹಿ ಸಂಗ್ರಹ ಅಭಿಯಾನ ಆರಂಭಿಸಿದರು. ಇಲ್ಲಿನ ಹುತಾತ್ಮ ಚೌಕದಲ್ಲಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ್ ಮಾತನಾಡಿ, ‘ಶಾಲಾ-ಕಾಲೇಜು ಅಂಗಳಕ್ಕೂ ಡ್ರಗ್ಸ್ ಜಾಲ ಕಾಲಿಟ್ಟಿದೆ. ಗುಣಾತ್ಮಕ ಶಿಕ್ಷಣ ಪಡೆದು ಭವಿಷ್ಯ ಕಟ್ಟಿಕೊಳ್ಳಬೇಕಿದ್ದ …
Read More »