Breaking News
Home / Uncategorized (page 715)

Uncategorized

ಬೆಳಗಾವಿ ಜಿಲ್ಲೆಯ ಚಾಲಕನ ಪುತ್ರನ ಸಾಧನೆ; UPSC ಪರೀಕ್ಷೆಯಲ್ಲಿ 440ನೇ ಸ್ಥಾನ!

ಬೆಳಗಾವಿ ; ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಎಂಬುದನ್ನು ಚಾಲಕನ‌ ಮಗ ಇಂದು ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ. ಹೌದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕೀರ್ತಿಯನ್ನು ಗ್ರಾಮದ ಜಗದೀಶ ಅಡಹಳ್ಳಿ ಅವರು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440 ನೇ ರ್‍ಯಾಂಕ್ ಪಡೆಯುವುದರ ಮೂಲಕ ರಾಜ್ಯದ …

Read More »

ಸಿದ್ದರಾಮಯ್ಯನವರು ಬೇಗ ಗುಣಮುಖರಾಗಲಿ:ಸತೀಶ್ ಜಾರಕಿಹೊಳಿ

ಬೆಂಗಳೂರು: ಮಾಜಿ  ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೊರೊನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹಾರೈಸಿದ್ದಾರೆ. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೊನಾ ಲಕ್ಷಣಗಳು ಕಂಡು ಬರದೆ ಇದ್ದರು. ಸೋಂಕು ದೃಢಪಟ್ಟಿದೆ. ಆದ ಕಾರಣ ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ನಾಯಕ ಕೊರೊನಾ ಸೋಂಕಿನಿಂದ ಶೀಘ್ರದಲ್ಲೇ ಗುಣಮುಖರಾಗಲಿ, ಉತ್ತಮ ಆರೋಗ್ಯದೊಂದಿಗೆ ಮತ್ತೆ ಎಂದಿನಂತೆ …

Read More »

ಸಿದ್ದರಾಮಯ್ಯ ಅವರಿಗೆ ಕೋವಿಡ್19 ಸೋಂಕು ತಗುಲಿರುವ ಸುದ್ದಿ ಕೇಳಿ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ: ರಮೇಶ ಜಾರಕಿಹೊಳಿ

ಬೆಂಗಳೂರು: ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೋವಿಡ್19 ಸೋಂಕು ತಗುಲಿರುವ ಸುದ್ದಿ ಕೇಳಿ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಜಲಸಂನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಎಂದು ಅವರು ಹಾರೈಸಿದ್ದಾರೆ

Read More »

17 ಐಪಿಎಸ್ ಅಧಿಕಾರಿಗಳ ವರ್ಗಾವಣೆ………….

ಬೆಂಗಳೂರು : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಲಾಗಿದ್ದು,17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವಿಶೇಷ ಎಂದರೆ,ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಲವರಿಗೆ ಕೊರೋನಾ ದೃಢಪಟ್ಟಿದ್ದು ಅವರೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಗೃಹ ಇಲಾಖೆಯ ಕಾರ್ಯದರ್ಶಿ ಆಗಿದ್ದ ಎಡಿಜಿಪಿ ಉಮೇಶ್‌ಕುಮಾರ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಡಿ.ರೂಪಾ ಅವರು ವರ್ಗವಾಗಿದ್ದಾರೆ. ಕಲಬುರ್ಗಿ …

Read More »

ಕೊರೋನಾ ಚಿಕಿತ್ಸೆ: ಸಿಎಂ, ಕೇಂದ್ರ ಸಚಿವರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆಯಿಲ್ಲವೇ?

ನವದೆಹಲಿ: ಕೊರೋನಾ ಸೋಂಕು ದೃಢಪಟ್ಟ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದು ಕೆಲ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬದಲು ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಸಹ ವ್ಯಕ್ತವಾಗುತ್ತಿದೆ. ಸೋಂಕು ದೃಢಪಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ …

Read More »

ಮತ್ತೆ 4ಸಾವಿರ ಕಿಟ್‌ಗಳ ಪೂರೈಕೆ

ಬೆಳಗಾವಿ: ‘ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಹೊರತುಪಡಿಸಿ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು. ಇಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ತುರ್ತು ಚಿಕಿತ್ಸೆಗೆ ಅಗತ್ಯ ಇರುವವರಿಗೆ ತಪಾಸಣೆ ನಡೆಸಿ ಪ್ರಮಾಣಪತ್ರವನ್ನು ನೀಡಲು ಜಿಲ್ಲೆಗೆ ಮತ್ತೆ 4ಸಾವಿರ ರ‍್ಯಾಪಿಡ್ ಆಂಟಿಜೆನ್ ಕಿಟ್‌ಗಳು ಬಂದಿವೆ. ಪ್ರಮಾಣಪತ್ರ ಪಡೆದ ಬಳಿಕವೂ …

Read More »

ಡಿಸಿಎಂ ಲಕ್ಷ್ಮಣ ಸವದಿ ನೂರಾರು ಜನರನ್ನ ಸೇರಿಸಿ ಆರ್‌ಟಿಓ ಕಚೇರಿ ಉದ್ಘಾಟಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

ಚಿಕ್ಕೋಡಿ/ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಚಿವರು ಹಾಗೂ ಅಧಿಕಾರಿಗಳು ಸೆಲ್ಫ್ ಕ್ವಾರಂಟೈನ್ ಆಗುತ್ತಿದ್ದಾರೆ. ಆದರೆ ಸಿಎಂ ಭೇಟಿ ಬಳಿಕ ಸೆಲ್ಫ್ ಕ್ವಾರಂಟೈನ್ ಆಗದ ಡಿಸಿಎಂ ಲಕ್ಷ್ಮಣ ಸವದಿ ನೂರಾರು ಜನರನ್ನ ಸೇರಿಸಿ ಆರ್‌ಟಿಓ ಕಚೇರಿ ಉದ್ಘಾಟಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಂಜೂರಾದ ನೂತನ ಆರ್‌ಟಿಓ ಕಚೇರಿ ಉದ್ಘಾಟನಾ ಸಮಾರಂಭ ನಡೆದಿದೆ. ಸಮಾರಂಭದಲ್ಲಿ 250ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ …

Read More »

ಮಹಾರಾಷ್ಟ್ರದ ಉದ್ಯಮಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಬಂದಾಗ ಅವರಿಗೆ ನಮ್ಮ ಜನರು  ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಬೇಡಿಕೆ ಇಟ್ಟಿದ್ದಾರೆ.  ಇದರಲ್ಲಿ ಅನ್ಯತ ಭಾವಿಸಬಾರದು. 

ಅಥಣಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾದಿಂದ ಬೇಗ ಗುಣಮುಖರಾಗಲಿ. ದೇವರು ಆರೋಗ್ಯ ದಯಪಾಲಿಸಲಿ ಎಂದು ಬೇಡಿಕೊಳ್ಳುವೆ  ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು. ಅಥಣಿ ಆರ್ ಟಿ ಓ ಕಚೇರಿಯ ನೂತನವಾಗಿ ವಾಹನ ನೋಂದಣಿ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಸ್ವತಃ ನನ್ನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರು ಕ್ವಾರೆಂಟೈನ್ ಆಗಿ ಅಂತ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಅವರನ್ನು ಭೇಟಿ ನೀಡಿಲ್ಲ. ದೆಹಲಿಗೆ ಹೋಗಿಬಂದ ವಿಚಾರವನ್ನು ಅವರಿಗೆ ಸಾಮಾಜಿಕ …

Read More »

ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿತ ಮೃತಪಟ್ಟು ಮೂರು ದಿನ ಕಳೆದರೂ ಮನೆಯವರಿಗೆ ಮಾಹಿತಿ ನೀಡಿಲ್ಲ ಅಂತ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ ನಡೆದಿದೆ. ಬೆಂಗಳೂರು ನಗರ ಕೆ.ಪಿ. ಆಗ್ರಹಾರದ 56 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಜುಲೈ 30 ರ ಸಂಜೆ ಗುರುವಾರದಂದು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಶುಕ್ರವಾರ ಬೆಳಗಿನ ಜಾವ ಸೋಂಕಿತ ಮೃತಪಟ್ಟಿದ್ದಾರೆ. …

Read More »

ಅಯೋಧ್ಯೆಯಲ್ಲಿನ ರಾಮಮಂದಿರ ಶಿಲಾವಿನ್ಯಾಸ ಕಾರ್ಯಕ್ಕೆ ಮೂಹರ್ತ ಕೊಟ್ಟಿದ್ದ ವಿದ್ವಾಂಸ ವಿಜಯೇಂದ್ರ ಶರ್ಮಾ

ಬೆಳಗಾವಿ: ಅಯೋಧ್ಯೆಯಲ್ಲಿನ ರಾಮಮಂದಿರ ಶಿಲಾವಿನ್ಯಾಸ ಕಾರ್ಯಕ್ಕೆ ಮೂಹರ್ತ ಕೊಟ್ಟಿದ್ದ ವಿದ್ವಾಂಸ ವಿಜಯೇಂದ್ರ ಶರ್ಮಾ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಕರೆ ಆಗಮಿಸುತ್ತಿವೆ ಎಂದು ತಿಳಿಸಿದ್ದಾರೆ‌. ದೇಶವೇ ನಿರೀಕ್ಷೆಯಲ್ಲಿದ್ದ ರಾಮಂದಿರ ನಿರ್ಮಾಣ ಕಾರ್ಯಕ್ಕೆ ಬೆಳಗಾವಿ ಮೂಲಕದ ವಿಜಯೇಂದ್ರ ಶರ್ಮಾ ವಿದ್ವಾಂಸರು ಶಿಲಾವಿನ್ಯಾಸಕ್ಕೆ ಮುಹೂರ್ತ ನೀಡಿದ್ದರು. ದೆಹಲಿಯಲ್ಲಿ ಶಿಲಾವಿನ್ಯಾಸಕ್ಕೆ ಸಿದ್ದತೆಗಳು ನಡೆಯುತ್ತಿವೆ. ಅ.5 ರಂದು ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಸಿದ್ದತೆಗಳು ನಡೆಯುತ್ತಿವೆ. ಆದ್ರೆ ಈತ್ತ ಶಿಲಾವಿನ್ಯಾಸಕ್ಕೆ ಮುಹೂರ್ತ ನೀಡಿದ್ದ ಬೆಳಗಾವಿಯ ಶಾಸ್ತ್ರಿ ನಗರದ …

Read More »