Breaking News

Uncategorized

-ದೇಶಾದ್ಯಂತ ನವರಾತ್ರಿ ಸಡಗರ ಸಂಭ್ರಮನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.

ಬೆಂಗಳೂರು, ಅ.17-ದೇಶಾದ್ಯಂತ ನವರಾತ್ರಿ ಸಡಗರ ಸಂಭ್ರಮ ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ, ಮಹಮೋಹನ್ ಸಿಂಗ್, ಕೇಂದ್ರ ಸಚಿವರಾದ ಅಮಿತ್ ಷಾ, ಡಿ.ವಿ.ಸದಾನಂದಗೌಡ, ಕಾಂಗ್ರೆಸ್ ನಾಯಕರಾದ ರಾಹುಲ್‍ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿಂದಂತೆ ವಿವಿಧ ಪಕ್ಷಗಳ ಧುರೀಣರು ದೇಶದ ಜನತೆಗೆ ಶುಭ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, …

Read More »

‘ಚಿರು ನನ್ನ ಮಗುವಾಗಿ ಯಾವಾಗ ಬರಬೇಕು ಅಂತಾರೋ ಆವಾಗ ಬರಲಿ’

ಚಿರು ಸರ್ಜಾ ಇಲ್ಲದ ಮೊದಲ ಹುಟ್ಟುಹಬ್ಬಕ್ಕೆ ಇಡೀ ಅಭಿಮಾನಿ ಬಳಗ ಕೊರಗುತ್ತಿದೆ. ಆದರೂ ಎಲ್ಲೆಡೆ ಚಿರುಗಾಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಒಂದೆಡೆ ಚಿರು ಹುಟ್ಟುಹಬ್ಬವಾದ್ರೆ, ಇನ್ನೊಂದೆಡೆ ಇಂದು ಚಿರು ಮತ್ತೆ ಹುಟ್ಟಿ ಬರ್ತಾರೆ ಅನ್ನೋ ಖುಷಿ, ಸಂಭ್ರಮ. ಇದರ ಜೊತೆಗೆ ಚಿರು ‘ಶಿವಾರ್ಜುನ’ ಸಿನಿಮಾ ಮತ್ತೆ ತೆರೆ ಕಂಡಿರೋದು ಮತ್ತೊಂದು ಖುಷಿ. ಸದ್ಯ, ಪತಿಯನ್ನ ನೋಡಲು ಮೇಘನಾ ರಾಜ್​ ಸರ್ಜಾ ಚಿರು ಸಮಾಧಿ ಕಡೆ ಹೊರಟಿದ್ದಾರೆ. ಚಿರು ಸಮಾಧಿಗೆ ಪೂಜೆ ಸಲ್ಲಿಸೋದಾಗಿ …

Read More »

ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ಮಾತಿನ ಚಕಮಕಿ- ಟ್ರಸ್ಟಿ, ಅರ್ಚಕರ ಗುಂಪಿನ ನಡ್ವೆ ಘರ್ಷಣೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಕಚೇರಿಯ ಪೀಠೋಪಕರಣಗಳಿಗೆ ಹಾನಿ ಮಾಡಲಾಗಿದೆ. ದೇಗುಲದ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಶೀತಲ ಸಮರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರಧಾನ ಅರ್ಚಕ ಶೇಷಗಿರಿ ಭಟ್ ದೇವಸ್ಥಾನದ ಗರ್ಭಗುಡಿಯ ಮುಂದೆ ಇಂದು ಕುಟುಂಬ ಸದಸ್ಯರೊಂದಿಗೆ ಮೌನಾಚರಣೆ ಆರಂಭಿಸಿದ್ದರು. ನವರಾತ್ರಿಗೂ ಮೊದಲು ಚಂಡಿಕಾ ಹೋಮ ನಡೆಸಬೇಕು. ಟ್ರಸ್ಟಿ …

Read More »

ಕೊಪ್ಪಳದಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರೀಕರಣ

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ ಜೇಮ್ಸ್ ಮೂವಿಯ ಚಿತ್ರೀಕರಣ ನಾಳೆಯಿಂದ ಕಿಷ್ಕಿಂದ ಗುಡ್ಡದ ಪ್ರದೇಶದಲ್ಲಿ ನಡೆಯಲಿದೆ. ಗಂಗಾವತಿ ತಾಲೂಕಿನ ಕಿಷ್ಕಿಂದ ಭಾಗವಾಗಿರುವ ಮಲ್ಲಾಪುರ ಮತ್ತು ವಾನಭದ್ರಪ್ಪ ಗ್ರಾಮದ ನಡುವೆ ಬೃಹತ್ ಸೆಟ್ ಹಾಕಲಾಗಿದೆ. ಚಿತ್ರದ ನಾಯಕ ಪುನೀತ್ ರಾಜಕುಮಾರ್ ಮತ್ತು ತೆಲುಗಿನ ಖ್ಯಾತ ನಟ ಶ್ರೀಕಾಂತ್ ಕೂಡ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಮಲ್ಲಾಪುರ ಗ್ರಾಮದ ಹೊರವಲಯದ ಗುಡ್ಡ ಪ್ರದೇಶದಲ್ಲಿ ಭವ್ಯ ಸೆಟ್ ಅನ್ನು …

Read More »

ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್? ಭೂಮಿ ಶೆಟ್ಟಿ

ಕಿನ್ನರಿ ಧಾರಾವಾಹಿ ಹಾಗೂ ಬಿಗ್‍ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅವರ ಹೊಸ ಪ್ರಾಜೆಕ್ಟ್ ಹಾಗೂ ಬಿಗ್‍ಬಾಸ್ ನಂತರದ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. • ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್? ನಾನು ಸೂಪರ್ ಆಗಿದ್ದೀನಿ. ಲೈಫ್ ಬೊಂಬಾಟ್ ಆಗಿದೆ. ಬಿಗ್‍ಬಾಸ್‍ನಿಂದ ಬಂದ ಮೇಲೆ ಒಂದಿಷ್ಟು ಹೊಸ ಹೊಸ ಅವಕಾಶಗಳು ಸಿಕ್ತಿವೆ. ಸದ್ಯಕ್ಕೆ ಕೊರೊನಾದಿಂದ ಪಾರಾದ್ರೆ ಸಾಕಾಗಿದೆ. • ಬಿಗ್‍ಬಾಸ್ ಮುಗಿದ ನಂತರ …

Read More »

ಭೀಮೆ, ಕೃಷ್ಣಾರ್ಭಟಕ್ಕೆ ಉತ್ತರ ಕರ್ನಾಟಕದ ಮಂದಿ ಬೆಚ್ಚಿಬಿದ್ದಿದ್ದಾರೆ.

ಕಲಬುರಗಿ: ಭೀಮೆ, ಕೃಷ್ಣಾರ್ಭಟಕ್ಕೆ ಉತ್ತರ ಕರ್ನಾಟಕದ ಮಂದಿ ಬೆಚ್ಚಿಬಿದ್ದಿದ್ದಾರೆ. ಊರಿಗೆ ಊರೇ ಮುಳುಗಡೆಯಾಗಿ, ಜನಜೀವನ ಅಯೋಮಯವಾಗಿದೆ. ಮನೆ, ಮಠ ಕಳೆದುಕೊಂಡ ಜನ ಕಣ್ಣೀರ ಹೊಳೆಯನ್ನೇ ಹರಿಸ್ತಿದ್ದಾರೆ. ಕಲಬುರಗಿಯಲ್ಲಂತೂ ಜಲರಾಕ್ಷಸ ಘನಘೋರ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ.ಹೌದು. ಉತ್ತರ ಕರ್ನಾಟಕದ ಸ್ಥಿತಿ ನಿಜಕ್ಕೂ ದುರಂತ ಅಂದ್ರೆ ತಪ್ಪಾಗಲ್ಲ. ಹಳ್ಳಿಗೆ ಹಳ್ಳಿಗಳನ್ನೇ ಮುಳುಗಿಸಿದೆ. ಮನೆಯೊಳಗೂ ನೀರು, ಹೊರಗೂ ನೀರು, ಅಕ್ಕಿ, ಗೋಧಿ, ಹೊಲ, ಗದ್ದೆ ಎಲ್ಲವೂ ನೀರುಪಾಲಾಗಿವೆ. ಕಲಬುರಗಿಯನ್ನಂತು ಮಹಾಮಳೆ ಮುಳುಗಿಸಿ ಬಿಟ್ಟಿದೆ. ರಣಭೀಕರ …

Read More »

ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

ಹೈದರಾಬಾದ್: ಆಂಧ್ರ ಪ್ರದೇಶದ ವಿಜಯರವಾಡ ನಗರದ ಬಿಟೆಕ್ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಲಭಿಸಿದ್ದು, ಪ್ರಕರಣದ ಆರೋಪಿ ನಾಗೇಂದ್ರ ಪೊಲೀಸರ ಎದುರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ದಿವ್ಯ ತೇಜಸ್ವಿನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನಾಗೇಂದ್ರ ಬಾಬು, ಗುಂಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಕೃತ್ಯದ ಕುರಿತು ಪೊಲೀಸರ ಬಳಿ …

Read More »

ವಿಕ್ರಮ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಫರಾಜ್ ಖಾನ್‍ಗೆ ಸಲ್ಮಾನ್ ಖಾನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ಸಹಾಯ ಮಾಡಿದ್ದಾರೆ.

ಮುಂಬೈ: ಪ್ರಸ್ತುತ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಫರಾಜ್ ಖಾನ್‍ಗೆ ಸಲ್ಮಾನ್ ಖಾನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ಸಹಾಯ ಮಾಡಿದ್ದಾರೆ. 1998ರಲ್ಲಿ ಬಿಡುಗಡೆಯಾದ ಮೆಹಂದಿ ಎಂಬ ಚಿತ್ರದಲ್ಲಿ ನಟಿ ರಾಣಿ ಮುಖರ್ಜಿಯೊಂದಿಗೆ ಫರಾಜ್ ಖಾನ್ ಅಭಿನಯಿಸಿದ್ದರು. ಈ ಚಿತ್ರದ ಮೂಲಕ ಬಹಳ ಹೆಸರುವಾಸಿಯಾಗಿದ್ದರು. ಕಳೆದ ಒಂದು ವರ್ಷದಿಂದ ಫರಾಜ್ ಖಾನ್ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸದ್ಯ ಬೆಂಗಳೂರಿನ ವಿಕ್ರಮ್ …

Read More »

ಪ್ರೀತ್ಸೇ.. ಪ್ರೀತ್ಸೇ ಅಂತ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೇಲೆ ಕತ್ತಿಯಿಂದ ದಾಳಿ

ಹೈದರಾಬಾದ್: ಪ್ರೀತ್ಸೇ.. ಪ್ರೀತ್ಸೇ ಅಂತ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೇಲೆ ಕತ್ತಿಯಿಂದ ದಾಳಿ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಕ್ರಿಸ್ತು ರಾಜಪುರಂ ಪ್ರದೇಶದ ನಿವಾಸಿಯಾಗಿರುವ ದಿವ್ಯ ತೇಜಸ್ವಿನಿ ಎಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಸ್ಥಳೀಯವಾಗಿ ಪೇಂಟಿಂಗ್ …

Read More »

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಹಾನಿ ನಾಳೆ ಕಂದಾಯ ಸಚಿವ ಆರ್. ಅಶೋಕ ಭೇಟಿ

ಬೆಂಗಳೂರು:  ರಾಜ್ಯದಲ್ಲಿ  ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾಳೆ ಕಂದಾಯ ಸಚಿವ ಆರ್. ಅಶೋಕ ಭೇಟಿ ನೀಡಲಿದ್ದಾರೆ. ಈ ವಿಚಾರವಾಗಿ  ಮಾತನಾಡಿದ ಅವರು,  ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ,  ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ  ಎದುರಾಗಿದೆ. ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ/.  ಆಯಾ ಪ್ರದೇಶದಲ್ಲಿ 43 ಕಾಳಜಿ ಕೇಂದ್ರ …

Read More »