Breaking News

Uncategorized

ನಮ್ಮಲ್ಲಿರುವುದು ಕೆಂಪು, ಬಿಳಿ ರಕ್ತ ಕಣ, ಡಿ.ಕೆ.ಸುರೇಶ್‍ಗೆ ಬಯಾಲಜಿ ಪುಸ್ತಕ ಕೊಡಿ- ಸುಧಾಕರ್

ಕೋಲಾರ: ಸಂಸದ ಡಿ.ಕೆ.ಸುರೇಶ್ ಅವರ ಕೇಸರಿ ರಕ್ತ ಹೇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಟಾಂಗ್ ನೀಡಿದ್ದು, ನಮ್ಮಲ್ಲಿರುವುದು ಕೆಂಪು ಹಾಗೂ ಬಿಳಿ ರಕ್ತ ಕಣಗಳು ಎಂದಿದ್ದಾರೆ. ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಕೇಸರಿ ರಕ್ತ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಅವರಿಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ ನೋಡಿಕೊಳ್ಳಲಿ. ನನಗೆ ಗೊತ್ತಿರೋದು ಬಿಳಿ ಹಾಗೂ ಕೆಂಪು ರಕ್ತ ಕಣ ಅಷ್ಟೆ ಕೇಸರಿ ರಕ್ತ ಕಣ ಇರೋದು …

Read More »

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.

ಮಂಡ್ಯ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.ಪ್ರಸಾದ ಸೇವನೆ ಬಳಿಕ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿದ 60 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. 60 ಜನರ ಪೈಕಿ ಐವರು ತೀವ್ರ ಸುಸ್ತಿನಿಂದ ಬಳಲಿದ್ದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ …

Read More »

ಸಚಿವ ರಮೇಶಜಾರಕಿಹೊಳಿಕಿಂಗ್ ಮೇಕರ್ ಆಗಿದ್ದಾರೆ: ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಸಚಿವ ರಮೇಶಜಾರಕಿಹೊಳಿ  ಅವರಿಗೆ ಕಿಂಗ್ ಆಗುವ ಅವಕಾಶವಿತ್ತು. ಆದ್ರೆ ಅವರು ಕಿಂಗ್ ಮೇಕರ್ ಆಗಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ  ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿನ  ಸುವರ್ಣಸೌಧ ಎದುರು ಲಿಂಗಾಯತ ಸಮುದಾಯವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಸತ್ಯಾಗ್ರಹ ವೇಳೆ ಮನವಿ ಸ್ವೀಕರಿಸಲು ಸ್ಥಳಕ್ಕೆ ಸಚಿವರು ಬಂದಿದ್ದ ವೇೆಳೆ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ರಮೇಶ ಜಾರಕಿಹೊಳಿ ಅವರು …

Read More »

ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!

ಚಾಮರಾಜನಗರ: ಕೊರೊನಾ ಭಯ, ಲಾಕ್‍ಡೌನ್‍ನಿಂದ ಕಳೆದ ಏಳೆಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಜನ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡ್ತಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗ ದಂಡೇ ನೆರೆದಿದೆ. ಮೋಜು ಮಸ್ತಿಯ ಮೂಡ್‍ನಲ್ಲಿರೋ ಜನ ಕೊಂಚ ಮೈಮರೆತಂತೆ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಹೌದು. ಕಾವೇರಿ ಮೈದುಂಬಿ ಹರಿಯುತ್ತಿದ್ದು ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಲ್ಲಿನವರು ಪ್ರವಾಸಿಗರಿಗೆ ತೆಪ್ಪದ …

Read More »

ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್

ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಬರೋಬ್ಬರಿ ಮೂರು ಕೋಟಿಗೂ ಅಧಿಕ ರೂ.ಗಳ ಬಿಲ್ ಮೊತ್ತವನ್ನು ಗ್ರಾಮ ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ. ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಕಳೆದ ಏಳೆಂಟು ವರ್ಷಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಶ್ರವಣಬೆಳಗೂಳಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು …

Read More »

ನವರಾತ್ರಿ ಉತ್ಸವದಲ್ಲಿ ನಂದಿನಿಯ ಸಿಹಿ ಉತ್ಪನ್ನಗಳ ದಾಖಲೆಯ ಮಾರಾಟ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಕೆಎಂಎಫ್ ರೈತರ ಹಾಗೂ ಗ್ರಾಹಕರ ಅಭ್ಯುದಯಕ್ಕಾಗಿ ನಿರಂತರ ಸೇವೆ ಮಾಡಿದೆ. ಸಂಕಷ್ಟದ ಕಾಲದಲ್ಲೂ ಕೆಎಂಎಫ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 8 ಕೋಟಿ ರೂ.ಗಳ ದೇಣಿಗೆ ನೀಡಿದೆ ( ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ) ಗೋಕಾಕದಲ್ಲಿ ನಂದಿನಿ ಎಕ್ಸ್‍ಕ್ಲೂಸಿವ್ ಪಾರ್ಲರ್ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ . ಗೋಕಾಕ : .ನವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿ 120 ಮೆಟ್ರಿಕ್ ಟನ್ ಸಿಹಿ …

Read More »

2021ರ ಆರಂಭದಲ್ಲೇ ರಾಜ್ಯಕ್ಕೆ ಸಿಗಲಿದೆ ಲಸಿಕೆ: ಸುಧಾಕರ್

ಬೆಂಗಳೂರು: 2021 ರ ಆರಂಭದಲ್ಲೇ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ರಾಜ್ಯದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಆಸ್ಟ್ರಾಜನಿಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪುಣೆಯ ಸೇರಂ ಸಂಸ್ಥೆ ಜೊತೆ ಆಸ್ಟ್ರಾಜನಿಕಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡು ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಸ್ ಫರ್ಡ್ …

Read More »

ಮುನಿರತ್ನ, ಭೈರತಿ ಬಸವರಾಜ್ ಹಾಗೂ ಸೋಮಶೇಖರ್ ಮಾನಗೆಟ್ಟವರು,:ಸಿದ್ದರಾಮಯ್ಯ 

ಬೆಂಗಳೂರು: ಮುನಿರತ್ನ, ಭೈರತಿ ಬಸವರಾಜ್ ಹಾಗೂ ಸೋಮಶೇಖರ್ ಮಾನಗೆಟ್ಟವರು, ಲಜ್ಜೆಗೆಟ್ಟವರು ಅಂತಾ ವಿರೋಧ ಪಕ್ಷದ  ನಾಯಕ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದ್ದಾರೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ  ಇಂದು ಕಾಂಗ್ರೆಸ್ ಅಭ್ಯರ್ಥಿ  ಕುಸುಮಾ ಪರ ಪ್ರಚಾರದ ವೇಳೆ ಮಾತನಾಡಿದ ಅವರು,  ಮುನಿರತ್ನ ರಾಜಕೀಯದಲ್ಲಿರಲು ನಾಲಾಯಕ್. ಮುನಿರತ್ನ ಕ್ಷೇತ್ರ ಅಭಿವೃದ್ಧಿ ಮಾಡಿದ್ದು ಯಾರು ಕೊಟ್ಟ ಹಣದಿಂದ..? ನಾನು ಸಿಎಂ ಆಗಿದ್ದಾಗ ಕೊಟ್ಟ ಹಣದಿಂದ.ಇದೊಂದೇ ಕ್ಷೇತ್ರಕ್ಕೆ ನಾನು ಎರಡು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇನೆ. ಈಗ ನಮಗೆಲ್ಲ …

Read More »

ವಾಲ್ಮೀಕಿ ಮಹರ್ಷಿಗಳ ಗೌರವಾರ್ಥವಾಗಿ ಅಯೋಧ್ಯೆಯಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡುವಂತೆ ರಾಯಚೂರು ಸಂಸದ ರಾಜಾ ಅಮರೇಶ್ವರ್​ ನಾಯ್ಕ್​ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ದೆಹಲಿ: ಅಯೋಧ್ಯೆಯ ರಾಮ ಮಂದಿರದ ಜೊತೆಗೆ ರಾಮಾಯಣ ಮಹಾಗ್ರಂಥದ ರಚನೆಕಾರರಾದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಗೌರವಾರ್ಥವಾಗಿ ಅಯೋಧ್ಯೆಯಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡುವಂತೆ ರಾಯಚೂರು ಸಂಸದ ರಾಜಾ ಅಮರೇಶ್ವರ್​ ನಾಯ್ಕ್​ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವಿಜಯದಶಮಿಯ ಅಂಗವಾಗಿ ಪ್ರಧಾನಿಗೆ ಶುಭಕೋರಿ ಪತ್ರ ಬರೆದಿದ್ದ ಸಂಸದ ವಾಲ್ಮೀಕಿ ಮಹರ್ಷಿಗಳ ಸ್ವರಣಾರ್ಥ ಒಂದು ಪುತ್ಥಳಿಯನ್ನು ಸಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಸಮುದಾಯದ ಮಠಾಧೀಶರ ಹಾಗೂ ಸಮುದಾಯದ ಜನರಿಂದ ಈ ಕೂಗು …

Read More »

ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಒಳನುಗ್ಗಿದ್ದ ಚೋರರು ಮನೆಯಲ್ಲಿದ್ದ ಚಿನ್ನ, ಒಡವೆ ಹಣವನ್ನೆಲ್ಲಾ ಕದ್ದು ಪರಾರಿಯಾದರು ಅನ್ನೋ ಸುದ್ದಿನ ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ.

ಮುಂಬೈ: ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಒಳನುಗ್ಗಿದ್ದ ಚೋರರು ಮನೆಯಲ್ಲಿದ್ದ ಚಿನ್ನ, ಒಡವೆ ಹಣವನ್ನೆಲ್ಲಾ ಕದ್ದು ಪರಾರಿಯಾದರು ಅನ್ನೋ ಸುದ್ದಿನ ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಅವುಗಳು ಸಹ ಕದಿಯಲು ಯೋಗ್ಯವೆಂಬಂತೆ ಭಾಸವಾಗುತ್ತಿದೆ. ಅಲ್ಲಿಗೂ ಸೈಕಲ್​ ಗ್ಯಾಪ್​ನಲ್ಲಿ 9 ಮೂಟೆ ಮಾರಿಬಿಟ್ಟಿದ್ದಾರೆ!   ಅಂತೆಯೇ, 100 ರೂಪಾಯಿಯ ಗಡಿ ಮುಟ್ಟಿರುವುದರಿಂದ ಈರುಳ್ಳಿ ಸಹ ಕದಿಯಲು ಸೂಕ್ತವಾದ, ಅತ್ಯಮೂಲ್ಯ ವಸ್ತುವಾಗಿ ಮಾರ್ಪಟ್ಟಂತಿದೆ. ಹೌದು, ಮಹಾರಾಷ್ಟ್ರದ …

Read More »