Breaking News

Uncategorized

ಮೂರು ಕ್ಷೇತ್ರ ಮೂವರು ಪ್ರಭಾವಿ ನಾಯಕರ ಬೆಂಬಗರಿಗೆ ಒಲಿದ ಅದೃಷ್ಟ

  ಬೆಳಗಾವಿ:   ಡಿಸಿಸಿ  ಬ್ಯಾಂಕ್ 3 ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ನೇಕಾರ  ಸಹಕಾರಿ ಸಂಘದಿಂದ  ಸ್ಪರ್ಧಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಆಪ್ತ ಕೃಷ್ಣಾ ಅನಗೋಳ್ಕರ್   ಗೆಲವು  ಸಾಧಿಸಿದ್ದಾರೆ. ರಾಮದುರ್ಗ, ಖಾನಾಪುರ ಹಾಗೂ ಸಹಕಾರಿ ಸಂಘ  ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆ ವಿರೋಧಿಸಿದ್ದರು.  ಈ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದ್ದು,  ಫಲಿತಾಂಶ ಪ್ರಕಟಗೊಂಡಿದೆ. ಮೂರು ಕ್ಷೇತ್ರದ ಫಲಿತಾಂಶದಲ್ಲಿ ಮೂವರು ಪ್ರಭಾವಿ ನಾಯಕರ …

Read More »

ತೀವ್ರ ಕುತೂಹಲ ಕೆರಳಿಸಿದ  ಖಾನಾಪುರ ಡಿಡಿಸಿ ಬ್ಯಾಂಕ್ ಚುನಾವಣೆ   ಫಲಿತಾಂಶ ಹೊರ ಬಿದ್ದಿದ್ದು, ಎಂಇಎಸ್ ಅಭ್ಯರ್ಥಿ  ಅರವಿಂದ  ಪಾಟೀಲ್ ಜಯ

ಬೆಳಗಾವಿ:  ತೀವ್ರ ಕುತೂಹಲ ಕೆರಳಿಸಿದ  ಖಾನಾಪುರ ಡಿಡಿಸಿ ಬ್ಯಾಂಕ್ ಚುನಾವಣೆ   ಫಲಿತಾಂಶ ಹೊರ ಬಿದ್ದಿದ್ದು, ಎಂಇಎಸ್ ಅಭ್ಯರ್ಥಿ  ಅರವಿಂದ  ಪಾಟೀಲ್ ಜಯಗಳಿಸಿದ್ದಾರೆ. ಎಂಇಎಸ್ ಅಭ್ಯರ್ಥಿ 27 ಮತಗಳ ಪಡೆದು ವಿಜಯಶಾಲಿಯಾದರೆ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ 25 ಮತಗಳ ಪಡೆಯುವ ಮೂಲಕ 2 ಮತಗಳ ಅಂತರದಲ್ಲಿ  ಪರಾಭವಗೊಂಡಿದ್ದಾರೆ. ಕೋರ್ಟ್ ಆದೇಶ ಪಡೆಯುವ ಮೂಲಕ ಕೊನೆಯ  ಕ್ಷಣದಲ್ಲಿ ನಾಲ್ವರು ಮತ ಚಾಲಯಿಸಿದ ಬಳಿಕ ಅಚ್ಚರಿಯ ಫಲಿತಾಶ ಪ್ರಕಟಗೊಂಡಿದೆ. ಇಂದು ಬೆಳಗ್ಗೆ …

Read More »

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬ್ಯಾನ್ ಮಾಡೋದು ಸರಿಯಲ್ಲ: ಮುತಾಲಿಕ್

ಬೆಳಗಾವಿ/ಚಿಕ್ಕೋಡಿ: ದೀಪಾವಳಿ ಹಬ್ಬ ಸಂದರ್ಭದಲ್ಲಿ ಪಟಾಕಿ ಬ್ಯಾನ್ ಮಾಡುವುದು ಸರಿಯಲ್ಲ. ಪಟಾಕಿಯಿಂದಲೇ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಆಚರಣೆಗಳು ನಡೆಯುವ ಕಾರಣ ಪಟಾಕಿಯನ್ನು ಬ್ಯಾನ್ ಮಾಡಬಾರದು. ಪಟಾಕಿಯಿಂದ ಮಾತ್ರ ಭಾರೀ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಆಗುತ್ತಿದೆ ಎಂಬುದು ಸುಳ್ಳು. ಇವತ್ತು …

Read More »

ವಿನಯ ಕುಲಕರ್ಣಿ ಬಂಧನದ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ: ಲಕ್ಷ್ಮಣ ಸವದಿ

ಬೆಳಗಾವಿ:  ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ  ಅಂತಾ ಡಿಸಿಎಂ  ಲಕ್ಷ್ಮಣ ಸವದಿ ಹೇಳಿದ್ದಾರೆ. ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜಿ ಪಂ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ನಡೆದ ದಿನದಿಂದಲೇ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂಬ ಒತ್ತಾಯ ಇತ್ತು. ಅದರಂತೆ ಈಗ ತನಿಖೆ ನಡೆದಿದೆ ಎಂದರು. ಕೊಲೆಯಾಗಿರುವ ಯೋಗೀಶಗೌಡ ಅವರ …

Read More »

ಕಾದಾಟದಲ್ಲಿ ಬಾಲ ಕಳೆದುಕೊಂಡು ನೋವು ತಾಳಲಾರದೆ ನೀರಲ್ಲಿಯೇ ನಿಂತ ಸಲಗ

ಚಾಮರಾಜನಗರ: ಕಾದಾಟದಲ್ಲಿ ಬಾಲ ಕಳೆದುಕೊಂಡ ಆನೆ ನೋವು ತಾಳಲಾರದೆ ನದಿಗಿಳಿದು ನೀರಲ್ಲಿಯೇ ನಿಂತ ಘಟನೆ ಚಾಮರಾಜನಗರದ ಕಾವೇರಿ ವನ್ಯ ಜೀವಿ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿ ವನ್ಯಧಾಮದ ಭೀಮೇಶ್ವರಿ ಕಳ್ಳಭೇಟೆ ಶಿಬಿರದ ಬಳಿ ಈ ಘಟನೆ ನಡೆದಿದ್ದು, ಬಾಲ ತುಂಡಾಗಿ ಗಾಯವಾಗಿರುವ ಆನೆ ನೊಣಗಳ ಹಾವಳಿ ಹಾಗೂ ನೋವು ತಾಳಲಾರದೆ ನದಿಗಿಳಿದಿದೆ. ಈ ಆನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಗಾಯಗೊಂಡಿರುವ ಆನೆ ಮೇಲೆ ನಿಗಾ ಇಟ್ಟಿರುವ ಅರಣ್ಯ ಸಿಬ್ಬಂದಿ …

Read More »

ಕೆಪಿಸಿಸಿ ಅಧ್ಯಕ್ಷ ದಿಢೀರ್ ದೆಹಲಿಗೆ – ಸಿದ್ದು ವಿರುದ್ಧ ದೂರು ಕೊಡ್ತಾರಾ ಡಿಕೆಶಿ..?

ಬೆಂಗಳೂರು: ಉಪ ಚುನಾವಣೆ ನಡೆದ ಎರಡೇ ದಿನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. 2 ಕ್ಷೇತ್ರಗಳ ಫಲಿತಾಂಶ ಬರೋದಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇರುವಂತೆ ಕೆಪಿಸಿಸಿ ಅಧ್ಯಕ್ಷರ ದಿಢೀರ್ ದೆಹಲಿ ಪ್ರವಾಸ ಅಚ್ಚರಿ ಮೂಡಿಸಿದೆ. ಉಪ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಹೇಳಿಕೆಗಳ ಬಗ್ಗೆ ಹೈಕಮಾಂಡ್‍ಗೆ ದೂರು ನೀಡುವ ನಿರೀಕ್ಷೆ ಇದೆ. ಇದರಿಂದ ಪಕ್ಷದಲ್ಲಿ ಸಮನ್ವಯತೆ …

Read More »

ಗುಣಮುಖರಾದರೂ ಮತ್ತೆ ಬರ್ಬೋದು ಕೊರೊನಾ!

ಬೆಂಗಳೂರು: ಕೊರೊನಾ ಕಂಟ್ರೋಲ್‍ಗೆ ಬಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ. ರಾಜ್ಯದಲ್ಲಿ ಅಕ್ಟೋಬರ್ ಪ್ರಾರಂಭಕ್ಕೆ 10 ಸಾವಿರ ಇದ್ದ ಸೋಂಕಿತರ ಸಂಖ್ಯೆ ಈಗ 3 ಸಾವಿರದ ಅಸುಪಾಸಿನಲ್ಲಿದೆ. ಆದರೆ ಕೊರೊನಾ ಬಂದು ಗುಣಮುಖ ಆದವರಲ್ಲಿಯೂ ಈಗ ಸೋಂಕು ಹೆಚ್ಚಾಗಿದೆ. ಹೀಗಾಗಿ ಒಮ್ಮೆ ಬಂದು ರಿಕವರಿ ಅದವರಿಗೂ ಕೊರೊನಾ ಮತ್ತೆ ಕಾಟ ಕೊಡುತ್ತಿದೆ ಎಂಬ ವಿಚಾರವೊಂದು ಬಯಲಾಗಿದೆ. ಮೊದಮೊದಲು ತೀರಾ ಕಡಿಮೆ ಸಂಖ್ಯೆಯಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಈಗ …

Read More »

ಸಿದ್ದರಾಮಯ್ಯ ಒಬ್ಬ ಹುಚ್ಚ, : ಸಚಿವ ಈಶ್ವರಪ್ಪ

ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಹುಚ್ಚು. ಮುಖ್ಯಮಂತ್ರಿ ಸ್ಥಾನ ಹೋದನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದು ಹೋಗಿದೆ ಎಂದು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು. ಸಿದ್ದರಾಮಯ್ಯನಿಗೆ ಆಕಾಶದಿಂದ ಸುದ್ದಿ ಉದುರಿದ್ಯಾ? ಮೋದಿ, ನಡ್ಡಾ, ಅಮಿತ್ ಶಾ ಫೋನ್ ಮಾಡಿ ಹೇಳಿದ್ರಾ? ನೀವು ಜನರ ಮಧ್ಯೆ ಹೋಗಿ …

Read More »

ನಾನು ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲಎಲ್ಲ ಸದಸ್ಯರು ಸೇರಿ ಆಯ್ಕೆ ಮಾಡಿದರೆ ನಾನು ಆ ಹುದ್ದೆಯಲ್ಲಿ ಮುಂದುವರಿಯಲು ಸಿದ್:ರಮೇಶ ಕತ್ತಿ,ದ

ಬೆಳಗಾವಿ – ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ 3 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಎಲ್ಲ 16 ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಬೇಕೆನ್ನುವ ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ 3 ಸ್ಥಾನಗಳಿಗೆ ಚುನಾವಣೆ ನಡೆಸಲೇಬೇಕಾಗಿದೆ. ರಾಮದುರ್ಗ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ, ಖಾನಾಪುರ ತಾಲೂಕಿನ ತಾಲೂಕಿನ ಕೃಷಿ ಪತ್ತಿನ ಇವುಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿರುವುದು ಖಾನಾಪುರ …

Read More »

ಇಂದಿನಿಂದ ಇತಿಹಾಸ ಪ್ರಸಿದ್ಧ ಹಾಸನಾಂಬೆಯ ಆನ್‍ಲೈನ್ ದರ್ಶನ

ಹಾಸನ, ನ.5- ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಆದರೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆದಿದ್ದರೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ವರ್ಷಕ್ಕೊಮ್ಮೆ ಮಾತ್ರ ಆಶ್ವಯುಜ ಮಾಸದ ಗುರುವಾರದಂದು ಬಾಗಿಲು ತೆರೆಯುವ ಹಾಸನಾಂಬ ದೇವಾಲಯದ ಬಾಗಿಲು ತೆರೆದಾಗ ಹಿಂದಿನ ವರ್ಷ ಹಚ್ಚಿದ ದೀಪ ಆರಿರುವುದಿಲ್ಲ. …

Read More »