Breaking News

Uncategorized

ಸುಧಾ ಆಪ್ತೆ ರೇಣುಕಾ ಮನೆಯಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ,ಚಿನ್ನಾಭರಣ ಪತ್ತೆ..!

ಬೆಂಗಳೂರು, ನ.8- ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಅವರ ಆಪ್ತರ ನಿವಾಸಗಳಲ್ಲೂ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ನಿವೃತ್ತ ಡಿವೈಎಸ್‍ಪಿ ಚಂದ್ರಶೇಖರ್ ಅವರ ಪತ್ನಿ ರೇಣುಕಾ ಅವರು ಸುಧಾ ಅವರ ಆಪ್ತರಾಗಿದ್ದು, ಇವರ ನಿವಾಸದ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಒಟ್ಟು 3.5 ಕೆಜಿ ಚಿನ್ನ, 7 ಕೆಜಿ ಬೆಳ್ಳಿ ವಸ್ತುಗಳು, …

Read More »

ಅಂದು ನನ್ನ ತಾಯಿ ಭಾರತದಿಂದ ಬಂದಾಗ ಇದನ್ನು ಊಹಿಸಿರಲಿಲ್ಲ: ಕಮಲಾ ಹ್ಯಾರಿಸ್

ವಾಷಿಂಗ್ಟನ್: ವಿಶ್ವದ ಗಮನವನ್ನೇ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕೊನೆಗೂ ಅಚ್ಚರಿಯ ರೀತಿಯಲ್ಲಿ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೋ ಬೈಡನ್ 273 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇದರಿಂದಾಗಿ ಅಮೆರಿಕದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಜಯಘೋಷ ಕೇಳಿ ಬರುತ್ತಿದೆ. ಅದೇ ರೀತಿ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿರುವುದಕ್ಕೂ ಸಹ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ಜೋ ಬೈಡನ್ 46ನೇ …

Read More »

ದೀಪ ಆರಿಸಬೇಡ ಸಖೀ………..

ದೀಪ ಆರಿಸಬೇಡ ಸಖೀ ದೀಪವಾರಿಸಬೇಡ ಸಖೀ ಇರಲಿ ಬಿಡು. ಗೊತ್ತು ಇಲ್ಲಿ ಯಾರೂ ಇಲ್ಲ ಸುಖೀ ಇರಲಿಬಿಡು. ಉತ್ತರಿಸಲಿ ಕಾಲ ಎಲ್ಲ ಪ್ರಶ್ನೆಗಳಿಗೂ ಕಾಯುತ್ತೇನೆ ಅನವರತ ಮೌನ-ಮಾತಾಗುವ ಭರವಸೆಯಲ್ಲಿ!! ದೀಪವಾರಿಸಬೇಡ ಸಖೀ ಇರಲಿ ಬಿಡು. ಜಗವ ಬೆಳಗುವ ದೀಪದ ಕೆಳಗೂ ಕತ್ತಲಿರುವಾಗ. ಒಲವ ಹಣತೆಗಳು ಮತ್ತೆ ಹೊತ್ತಿ ಉರಿಯಲಿ ಬಿಡು. ಉರಿವ ಎದೆಯ ಬೆಂಕಿಗೆ ಇಲ್ಲಿ ತುಪ್ಪ ಸುರಿದವರೆಷ್ಟೋ?? ಅವರ ಹರಕೆಗಳು ಫಲಿಸಿಲ್ಲ ನಿಜ ಶಾಪಗಳಾದರೂ ತಟ್ಟಲಿ ಬಿಡು. ದೀಪವಾರಿಸಬೇಡ …

Read More »

ರಾಜ್ಯದಲ್ಲೇ ಮೊದಲ ಪ್ರಯೋಗ – ವಿದ್ಯಾರ್ಥಿಗಳಿಗೆ ಅನುಕೂಲ

ರಾಮನಗರ: ಇಲ್ಲೊಂದು ಇಂಟರ್ ನೆಟ್ ಗ್ರಾಮವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಹೆಚ್ಚಿಸುವುದನ್ನು ಉತ್ತೇಜಿಸಲು, ಮಾತೃಭೂಮಿ ಸೇವಾ ಫೌಂಡೇಶನ್ ಸಂಸ್ಥೆಯಿಂದ ಈ ಸೇವೆ ಕಲ್ಪಿಸಲಾಗಿದೆ. ಯೂತ್ ಬ್ರಾಂಡ್ ಬ್ಯಾಂಡ್ ಸಹಯೋಗದಲ್ಲಿ ಈ ಗ್ರಾಮಕ್ಕೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಉಚಿತ ವೈಫೈ ನೀಡಲಾಗಿದೆ. ಇದರಿಂದ ಆನ್‍ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಿದೆ. ಹೌದು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ ಗೆ ಸಹಾಯವಾಗಲೆಂದು …

Read More »

ಶಿರಾ ಹಾಗೂ ಆರ್‍ಆರ್‍ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ:b.s.y.

ಶಿವಮೊಗ್ಗ: ಶಿರಾ ಹಾಗೂ ಆರ್‍ಆರ್‍ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಪ್ರಚಾರದ ವೇಳೆಯಲ್ಲಿಯೇ ಹೇಳಿದ್ದೆ, ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆ ಸಹ ಹೇಳಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಚಾರದ ವೇಳೆ ಕಾಂಗ್ರೆಸ್ ನವರು ನಮ್ಮ ಪಕ್ಷದ ಬಗ್ಗೆ ವಿನಾಃ ಕಾರಣ ಟೀಕೆ ಮಾಡುತ್ತಿದ್ದರು. ಶಿರಾದಲ್ಲಿ ಬಿಜೆಪಿ …

Read More »

ನ.18 ರಂದು ಬೆಳಗಾವಿಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಾಗುವುದು: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ನ.18 ರಂದು ಬೆಳಗಾವಿಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಮಹಾಂತೇಶ ನಗರದಲ್ಲಿರುವ ಬೆಳಗಾವಿ ಹಾಲು ಒಕ್ಕೂಟದ ಕಾರ್ಯಾಲಯದಲ್ಲಿ ಶನಿವಾರದಂದು ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನ. 18 ರಂದು ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ಕೆಎಂಎಫ್ ವಹಿಸಿಕೊಳ್ಳಲಿದ್ದು, ಬೆಳಗಾವಿ ಹಾಲು ಒಕ್ಕೂಟ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ, ಬೆಳಗಾವಿ …

Read More »

ಸಿಬಿಐ ತನಿಖೆಯಿಂದ ಕಾಂಗ್ರೆಸ್ ನ್ನು ಹೆದರಿಸಲು ಸಾಧ್ಯವಿಲ್ಲ: ರಣದೀಪ್

ಬೆಂಗಳೂರು, ನ.7- ಬಿಜೆಪಿ ಸರ್ಕಾರವು ಸಿಬಿಐ ಅನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಕಾಂಗ್ರೆಸ್ ನಾಯಕರಾದ ವಿನಯ ಕುಲಕರ್ಣಿ ಅವರನ್ನು ಬಂಧಿಸಿರುವುದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜಕೀಯ ಪಿತೂರಿಯನ್ನು ಎತ್ತಿ ತೋರಿಸುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಟ್ವಿಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು ಇಂತಹ ಬೆದರಿಕೆ ತಂತ್ರಗಳಿಗೆ ಎಂದಿಗೂ ಜಗ್ಗುವುದಿಲ್ಲ ಎಂಬುದನ್ನು ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಅಸ್ಥಿರ …

Read More »

ಮತ್ತೆ ಒಂದಾದ ಸಲ್ಮಾನ್-ಶಾರುಖ್

ಮುಂಬೈ, – ಜೀರೋ ಚಿತ್ರದ ನಂತರ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಬಾಲಿವುಡ್‍ನ ಬಾದ್‍ಷಾ ಶಾರುಖ್‍ಖಾನ್ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದು ಸಲ್ಮಾನ್‍ಖಾನ್ ಕೂಡ ಆ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟಿದೆ. ಶಾರುಕ್ ಹಾಗೂ ಸಲ್ಮಾನ್ ನಡುವೆ ಆಗಾಗ್ಗೆ ವಿವಾದಗಳಿ ದ್ದರೂ ಕೂಡ ಅವರಿಬ್ಬರಲ್ಲಿ ಉತ್ತಮ ಗೆಳೆತನವಿರುವುದರಿಂದ ಹಲವು ಚಿತ್ರಗಳಲ್ಲಿ ಒಂದಾಗಿ ನಟಿಸಿದ್ದು ಬಹುತೇಕ ಚಿತ್ರಗಳು ಯಶಸ್ವಿಯಾಗಿದೆ. ಶಾರುಖ್‍ಖಾನ್ ಈಗ ಗೆಲುವಿನ ಅವಶ್ಯಕತೆಯಿರುವುದರಿಂದ …

Read More »

ಜಮೀರ್ ಅಹ್ಮದ್,  ಸೌಮ್ಯ ರೆಡ್ಡಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್

ಬೆಂಗಳೂರು : ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್,  ಸೌಮ್ಯ ರೆಡ್ಡಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ಸಿದ್ದರಾಮಯ್ಯ ಮುಂದಿನ ಸಿಎಂ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿದ್ದರು. ಜಯನಗರ ಶಾಸಕಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಗೆಲ್ಲಿಸಿದರೆ, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಲಿದ್ದಾರೆ ಎಂದು ಹೇಳಿದ್ದರು. ಈ ವಿಚಾರವಾಗಿ ಮಾಧ್ಯಮದಲ್ಲಿ …

Read More »

(ಆರ್‌ ಎಸ್ ಎಸ್) , ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು ಮುಸ್ಲೀಂ ವಿರೋಧಿಯಲ್ಲ:ಸಚಿವ ರಮೇಶ ಜಾರಕಿಹೊಳಿ

ಗೋಕಾಕ : ರಾಷ್ತ್ರೀಯ ಸ್ವಯಂ ಸೇವಕ ಸಂಘ(ಆರ್‌ ಎಸ್ ಎಸ್) , ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು ಮುಸ್ಲೀಂ ವಿರೋಧಿಯಲ್ಲ, ದೇಶಕ್ಕೆ ದ್ರೋಹ ಬಗೆಯುವವರಿಗೆ ಮಾತ್ರ ನಮ್ಮ ಪಕ್ಷ ವಿರೋಧ ಮಾಡುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ್ ಗ್ರಾಮೀಣ ಮಂಡಲದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸೇರ್ಪಡೆಗೊಂಡ ವೇಳೆ ಕಾಂಗ್ರೆಸ್ …

Read More »