ಗದಗ: ಗೆಳೆಯರೊಂದಿಗೆ ಈಜಲು ಹೋದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಘಟನೆ ನಡೆದಿದೆ. ಬ್ಯಾಡಗಿ ಮೂಲದ ಹರ್ಷವರ್ಧನ್ ಅರಕೇರಿ ಈಜಲು ಬಾರದೆ ಹೊಂಡದಲ್ಲಿ ಸಾವನ್ನಪ್ಪಿದ ಬಾಲಕ. ದೀಪಾವಳಿ ಹಬ್ಬಕ್ಕೆಂದು ಬ್ಯಾಡಗಿಯಿಂದ ಲಕ್ಷ್ಮೇಶ್ವರದ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ, ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾನೆ. ಬಟ್ಟೆಗಳನ್ನು ಹೊಂಡದ ದಡದಲ್ಲಿಟ್ಟು ನೀರಿಗೆ ಹಾರಿದ್ದಾರೆ. ಹೊಂಡದಲ್ಲಿದ್ದ ಹೂಳಲ್ಲಿ ಸಿಲುಕಿದ್ದರಿಂದ ಈಜಲು ಬಾರದೆ …
Read More »ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಧರ್ಮದೇಟು
ಬೆಂಗಳೂರು: ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಧರ್ಮದೇಟು ಬಿದ್ದಿದೆ. ಬೆಂಗಳೂರಿನ ಗಾಂಧಿನಗರದ ತ್ರಿಭವನ್ ಥೇಟರ್ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಗೆ ಸ್ಥಳೀಯರು ಥಳಿಸುತ್ತಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ತೆಲುಗು ಭಾಷೆ ಮಾತನಾಡುವ ವ್ಯಕ್ತಿ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಧರ್ಮದೇಟು ಕೊಟ್ಟ ಬಳಿಕ ಸಾರ್ವಜನಿಕರೇ ಆ ವ್ಯಕ್ತಿಯನ್ನ ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. …
Read More »ಶಶಿಕಲಾ ಜೊಲ್ಲೆ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ
ಬೆಂಗಳೂರು : ಸಚಿವ ಸಂಪುಟ ಪುನಾರಚನೆಯಲ್ಲಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಈಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ಪಟ್ಟಿ ನೀಡಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಸಿಎಂ ಬಿಎಸ್ ವೈ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾವರ …
Read More »ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿಪ್ರತಿಭಟನಾ ಮೆರವಣಿಗೆ
ಬೆಳಗಾವಿ: ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಖಂಡಿಸಿ ಬೆಳಗಾವಿ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇಲ್ಲಿ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು. ಬಿಜೆಪಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಬಿಜೆಪಿ ಸರ್ಕಾರವು ವಿದ್ಯುತ್ ದರವನ್ನು ಸರಾಸರಿ 5.4 ರಂತೆ ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಳ ಮಾಡಿದೆ. ಕೋವಿಡ್ ಸಂಕಷ್ಟದ …
Read More »ಜನರ ರಕ್ತ ಹೀರುವ ಹೆದ್ದಾರಿ ಟೋಲ್‍ಗಳು, ಹಗಲು ದರೋಡೆಗೆ ಮತ್ತೊಂದು ಲೈಸೆನ್ಸ್..!
ಬೆಂಗಳೂರು, ನ.19-ಮುಂದಿನ ವರ್ಷದಿಂದ ಹೆದ್ದಾರಿಗಳ ಟೋಲ್‍ಗಳಲ್ಲಿ ಹಾದು ಹೋಗಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ ಎಂಬ ನಿರ್ಧಾರ ವಾಹನ ಸವಾರರನ್ನು ಕೆರಳಿಸಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ವಾಗ್ದಾಳಿಗಳು ನಡೆಯುತ್ತಿವೆ. ಸರ್ಕಾರ ಸರಿಯಾದ ಸೌಲಭ್ಯ ನೀಡದೆ, ಬದಲಿ ರಸ್ತೆ ನಿರ್ಮಿಸದೆ ಜನರನ್ನು ಸುಲಿಗೆ ಮಾಡುವಂತಹ ಹುಚ್ಚು ನಿರ್ಧಾರಗಳನ್ನು ಪ್ರಕಟಿಸಿರುವುದು ಪ್ರಶ್ನಾರ್ಹವಾಗಿದೆ. ಜನವರಿ 1ರಿಂದ ಟೋಲ್ ಇರುವ ಹೆದ್ದಾರಿಗಳಲ್ಲಿ ಸಂಚರಿಸಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ. ಫಾಸ್ಟ್ಯಾಗ್ …
Read More »ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಆದೇಶ ಹೊರಡಿಸಿದೆ.
ಬೆಂಗಳೂರು: 2020-21ನೇ ಸಾಲಿನ (ಜುಲೈ ಆವೃತ್ತಿ) ವಿವಿಧ ಸರ್ಟಿಫಿಕೇಟ್ ಪೆÇ್ರೀಗ್ರಾಮ್‍ಗಳಿಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಆದೇಶ ಹೊರಡಿಸಿದೆ. ದಂಡಶುಲ್ಕವಿಲ್ಲದೆ ನ.30ರವರೆಗೆ ಪ್ರವೇಶಾತಿ ವಿಸ್ತರಿಸಲಾಗಿರುವ ಪ್ರಥಮ ವರ್ಷದ ಕೋರ್ಸ್‍ಗಳು ಈ ಕೆಳಗಿನಂತಿವೆ. ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಾದ ಬಿಎ, ಬಿಕಾಂ, ಬಿ.ಲಿಬ್.ಐ.ಎಸ್ಸಿ, ಎಂಎ/ಎಂಕಾಂ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಎಸ್ಸಿ, ಎಂಬಿಎ, ಪಿ.ಜಿ. ಡಿಪ್ಲೊಮಾ ಪ್ರೋಗ್ರಾಮ್ಸ್, ಮತ್ತು ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ …
Read More »ರಾಷ್ಟ್ರಗೀತೆಯನ್ನೇ ತಪ್ಪಾಗಿ ಹಾಡಿದ ಬಿಹಾರ ಶಿಕ್ಷಣ ಸಚಿವ
ಬಿಹಾರ: ಬಿಹಾರ ಶಿಕ್ಷಣ ಸಚಿವ ಮೆವಾಲಾಲ್ ಚೌಧರಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡುವ ಮೂಲಕ ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಹಳೆಯ ವಿಡಿಯೋವಾಗಿದ್ದು, ಮೆವಾಲಾಲ್ ಚೌಧರಿ ಜನಗಣ ಮನವನ್ನು ತಪ್ಪುತಪ್ಪಾಗಿ ಹಾಡಿದ್ದಾರೆ. ಈ ವಿಡಿಯೋ ಪೊಸ್ಟ್ ಮಾಡಿರುವ ಆರ್ ಜೆಡಿ, 7 ಭ್ರಷ್ಟಾಚಾರ ಪ್ರಕರಣಗಳ ಆರೋಪ ಹೊತ್ತಿರುವ ಮೆವಾಲಾಲ್‍ಗೆ ರಾಷ್ಟ್ರಗೀತೆಯೇ ಗೊತ್ತಿಲ್ಲ. ಇಂತಹ ವ್ಯಕ್ತಿಯನ್ನು ನೀವು ಶಿಕ್ಷಣ ಮಂತ್ರಿಯನ್ನಾಗಿ ಮಾಡೋಕೆ ನಿತೀಶ್ ಕುಮಾರ್ ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ ಅಂತಾ ಪ್ರಶ್ನೆ …
Read More »K.P.S.C. ಪರೀಕ್ಷೆ ಮುಂದೂಡಿ ರಾಜ್ಯ ಸರ್ಕಾರ ಮಹತ್ವದ ಆದೇಶ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ (ಕೆಪಿಎಸ್ ಸಿ) ಮುಂದೂಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕೆಪಿಎಸ್ ಸಿ ಮತ್ತು ಯುಪಿ ಎಸ್ ಸಿ ಪರೀಕ್ಷೆಗಳು ಒಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಜನವರಿ 2 ರಿಂದ 5 ರವರೆಗೆ ನಿಗದಿಯಾಗಿದ್ದ ಕೆಪಿಎಸ್ ಸಿ ಮುಖ್ಯ ಪರೀಕ್ಷೆಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಫೆಬ್ರವರಿ 13 ರಿಂದ 16 ರವರೆಗೆ ಪರೀಕ್ಷೆ …
Read More »ನಾನು ವಲಸೆ ಬಂದ ಮನುಷ್ಯ ಅಲ್ಲ. ಮೂವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್
ಧಾರವಾಡ: ನಾನು ವಲಸೆ ಬಂದ ಮನುಷ್ಯ ಅಲ್ಲ. ಮೂವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ಕೈ ತಪ್ಪುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮನೆಯಿಂದ ಸೀದಾ ಬಿಜೆಪಿಗೆ ಬಂದವನು. ನನ್ನಲ್ಲಿ ಕೊರತೆ ಏನಿಲ್ಲ, ನಾನು ಕೆಲಸ ಮಾಡುತ್ತಿರುವೆ. ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮಗಳ ಮೂಲಕ ಮಾತ್ರ …
Read More »ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು: ಎಂ.ಪಿ. ರೇಣುಕಾಚಾರ್ಯ
ಬೆಂಗಳೂರು: ನನಗೆ ಸಚಿವ ಸ್ಥಾನ ಕೊಡಬೇಕು ಅಂತ ಹೇಳುತ್ತಿಲ್ಲ. ಗೆದ್ದಿರುವ ಶಾಸಕರಿಗೆ ಕೊಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರುವ ವಾಸ್ತವಾಂಶವನ್ನು ತಿಳಿಸುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ಯಾರನ್ನು ಸೇರಿಸಬೇಕು, ಕೈಬಿಡಬೇಕು ಅನ್ನೋದು ಸಿಎಂ, ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರಿಗೆ ಬಿಟ್ಟ ನಿರ್ಧಾರ. ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಕೆಲವರನ್ನು …
Read More »