Breaking News

Uncategorized

ಗೋ ಹತ್ಯೆ ನಿಷೇಧ’ ಜಾರಿಗೆ ಸುಗ್ರೀವಾಜ್ಞೆ,

ಬೆಂಗಳೂರು, ಡಿ.28- ಪ್ರತಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ನಾಳೆ ರಾಜ್ಯಪಾಲ ವಿ.ಆರ್.ವಾಲಾ ಅವರ ಅಂಕಿತಕ್ಕೆ ಕಳುಹಿಸಿಕೊಡಲಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು …

Read More »

ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಸುರೇಶ್‍ಕುಮಾರ್

ಬೆಂಗಳೂರು,ಡಿ.28 – ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದರಿಂದ ಏನು ಸಾಧಿಸುತ್ತಾರೆ, ನೆಲಕ್ಕೆ ಅವಮಾನ ಮಾಡುವುದನ್ನೇ ಕೆಲವರು ಜಾತ್ಯಾತೀತತೆ ಎಂದು ನಂಬಿದ್ದಾರೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ನಿನ್ನೆ ಗ್ರಾಮಪಂಚಾಯತ್ ಮತದಾನ ಮಾಡಿದ ಬಳಿಕ ಮೈಸೂರಿನ ಆಪ್ತರ ಮನೆಯಲ್ಲಿ ಬಾಡೂಟ ಸವಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಬೆಂಬಲಿಗನೊಬ್ಬ ಇಂದು ಹನುಮ ಜಯಂತಿ ಎಂದು ನೆನಪಿಸಿದ್ದ. ಇದಕ್ಕೆ ಎಂದಿನಂತೆ ತಮ್ಮ …

Read More »

ಬಿಜೆಪಿಯವರು 7 ವರ್ಷದಲ್ಲೇ ಮಾರಿದ್ರು: ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ಕಾಂಗ್ರೆಸ್ ಏನು ಮಾಡದಿದ್ರೆ ಸಂಸ್ಥೆಗಳನ್ನು ಹೇಗೆ ಮಾರಾಟ ಮಾಡುತಿದ್ರು?

ಗೋಕಾಕ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ಅಭಿವೃದ್ದಿಗೊಳಿಸಿದ ದೇಶವನ್ನು ಬಿಜೆಪಿಯವರು ಕೇವಲ 7 ವರ್ಷದಲ್ಲಿ ಮಾರಾಟ ಮಾಡಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪೆಟ್ರೋಲಿಯಂ, ಬಿಎಸ್ಎನ್ ಎಲ್ ಎಲ್ಲವನ್ನು ಕಾಂಗ್ರೆಸ್ ನವರು 70ವರ್ಷಗಳ …

Read More »

ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಕನ್ನಡ ಧ್ವಜ

ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದೆ. ಪಾಲಿಕೆ ಎದುರು ಕನ್ನಡ ಧ್ವಜ ಹಾರಾಡಿಸುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಕನ್ನಡಪರ ಹೋರಾಟಗಾರರ ನಡುವೆ ವಗವಾದ ನಡೆದಿದೆ. ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಸಾರಥ್ಯದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ನನಸು ಮಾಡಿದ್ದಾರೆ. ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ಕನ್ನಡ …

Read More »

ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭ:BSY

ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಿಗದಿಯಂತೆ ಶಾಲೆಗಳು ಆರಂಭವಾಗಲಿದೆ. ಆದರೆ ಕೊರೊನ ಹಿನ್ನೆಲೆಯಲ್ಲಿ ಯಾವರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು. ಜನವರಿ 1ರಿಂದ ಶಾಲೆಗಳು ಆರಂಭವಾಗಲಿದ್ದು, 6-9ನೇ ತರಗಿವರೆಗೆ ವಿದ್ಯಾಗಮ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ತರಗತಿಗಳು ಆರಂಭವಾಗಲಿವೆ ಎಂದರು.

Read More »

ಪ್ರಶಾಂತ್ ಸಂಬರಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ಇವರು ಸಾಮಾಜಿಕ ಕಾರ್ಯ ಕರ್ತ ರಾ ಅಥವಾ ಬಡ್ಡಿ ವ್ಯವಹಾರ ಮಾಡೋರ..?

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಅಧಿಕ ಬಡ್ಡಿ ನೀಡಿಲ್ಲವೆಂದು ವಾಟ್ಸಪ್‌ನಲ್ಲಿ ತೇಜೋವಧೆ ಮಾಡಿದ್ದರೆ ಎಂದು ಆರೋಪಿಸಿ ವೆಸ್ಟ್ ಆಫ್ ಕಾರ್ಡ್ ರೋಡ್ ನಿವಾಸಿ ವೈ.ಕೆ.ದೇವನಾಥ್ ಎಂಬುವರು ದೂರು ನೀಡಿದ್ದರು. ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್‌ 499(ಮಾನಹಾನಿ) 500(ಮಾನಹಾನಿಗಾಗಿ ದಂಡನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನಿದೆ? ಪ್ರಶಾಂತ್‌ ಸಂಬರಗಿ ಬಳಿ ನಾನು ಬಡ್ಡಿ ಸಾಲ …

Read More »

ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್, ಆಯಿಲ್ ಮಸಾಜ್!, ಉಚಿತ ಸ್ನಾನ, ಹೇರ್ ಕಟ್!

ಹುಕ್ಕೇರಿ; ಮಹಿಳೆಯರು, ಕಾಲೇಜು ಯುವತಿಯವರು ಹಾಗೂ ಸಿನಿಮಾ ನಟ- ನಟಿಯರು ತಮ್ಮ ಸೌಂದರ್ಯವರ್ದನೆಗೋಸ್ಕರ ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗೋದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಎಮ್ಮೆಗಳಿಗಾಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಶುರುವಾಗಿದೆ. ಅಷ್ಟಕ್ಕೂ ಎಲ್ಲಿದೆ ಆ ಪಾರ್ಲರ್ ಎನದರ ವಿಶೇಷ ಅಂತೀರಾ? ಈ ಸ್ಟೋರಿ ಓದಿ. ಹೌದು, ಅಧುನಿಕ ಜಗತ್ತಿನಲ್ಲಿ ಸೌಕರ್ಯಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಕಟ್ಟುಮಸ್ತಾದ ದೇಹದ ಜತೆ ಮುಖದ ಸೌಂದರ್ಯ ಅಂದ ಚಂದಕ್ಕೆ ನಮ್ಮ …

Read More »

ಬ್ರಿಟನ್‍ನಿಂದ ರಿಟರ್ನ್ ಆದ ಗೋವಾ ಶಾಸಕನಿಗೆ ಕ್ವಾರಂಟೈನ್‍

ಪಣಜಿ, ಡಿ.27- ಬ್ರಿಟನ್‍ನಿಂದ ಬಂದ ಗೋವಾ ಶಾಸಕನನ್ನು ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‍ನಲ್ಲಿಡಲಾಗಿದೆ. ಪಕ್ಷೇತರ ಶಾಸಕ ರೋಹನ್ ಖೌಂಟೆ ಅವರು ಕೆಲವು ದಿನಗಳ ಹಿಂದೆ ಬ್ರಿಟನ್‍ಗೆ ಪ್ರವಾಸಕ್ಕೆ ತೆರಳಿ ಇಂದು ಬೆಳಗ್ಗೆ ಮರಳಿದ್ದರು. ತಕ್ಷಣ ಅವರನ್ನು ಪರೀಕ್ಷೆಗೊಳಪಡಿಸಲು ಮುಂದಾದಾಗ ಅವರು ಅಲ್ಲಿಂದ ನಿರ್ಗಮಿಸಿದರು. ಇದರಿಂದಾಗಿ ಅವರನ್ನು ಕೂಡಲೇ ವಶಕ್ಕೆ ಪಡೆದು ಪರೀಕ್ಷೆಗೊಳಪಡಿಸಬೇಕೆಂದು ಕೆಲ ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸಿದ್ದರು.ಈಗಾಗಲೇ ಬ್ರಿಟನ್‍ನಲ್ಲಿ ರೂಪಾಂತರ ಕೊರೊನಾ ಬಂದಿರುವುದರಿಂದ ಯಾರೇ ಆದರೂ ಅವರನ್ನು ಪರೀಕ್ಷೆಗೊಳಪಡಿಸಬೇಕು ಮತ್ತು ಇವರು …

Read More »

ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣ

ನವದೆಹಲಿ: ಕೊರೊನಾ ಮಾಹಾಮಾರಿ ಸಂದರ್ಭದಲ್ಲಿಯೇ ದೇಶದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ ಬೇಡಿಕೆ ಹೆಚ್ಚಳವಾಗಿದೆ. ಅದರಲ್ಲೂ ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ, ಮುಂಬೈನಲ್ಲಿ ದಾಲ್ ಖಿಚ್ಡಿ, ಚೆನ್ನೈನಲ್ಲಿ ಇಡ್ಲಿ, ದೆಹಲಿಯಲ್ಲಿ ಕಾಫಿ, ಪುಣೆಯಲ್ಲಿ ಮ್ಯಾಗಿ, ಗುರುಗ್ರಾಮದಲ್ಲಿ ಆಲೂ ಟಿಕ್ಕಿ ಬರ್ಗರ್ ಹೆಚ್ಚು ಖರೀದಿಯಾಗುತ್ತಿದೆ. ದೇಶದೆಲ್ಲೆಡೆ ಕಾಂಡೋಮ್ ಖರೀದಿಸುವವರ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. ಹೈದರಾಬಾದ್ …

Read More »

ಬ್ಯಾಲೇಟ್ ಪೇಪರ್ ನಲ್ಲಿ ಬಕೆಟ್ ಬದಲು ಅಲ್ಮೇರಾ ಚಿಹ್ನೆ: ಮತದಾನ ಸ್ಥಗಿತ

ರಾಮದುರ್ಗ: ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿ ಚಿಹ್ನೆಯನ್ನು ತಪ್ಪಾಗಿ ಮುದ್ರಿಸಿರುವ ಹಿನ್ನೆಲೆ ಕದಂಪೂರ ವಾರ್ಡ್ ನಂಬರ್ 6 ರ ಚುನಾವಣೆ ಮುಂದೂಡಿಕೆ ಮಾಡಲಾಗಿದೆ. ತಾಲೂಕಿನ ಕದಂಪೂರ ಗ್ರಾಮದಲ್ಲಿ 6 ನೇ ವಾರ್ಡ್​ಗೆ ನಿರ್ಮಲಾ ಮಹಾಂತೇಶ ಖಾನಪೇಟ್ ಎಂಬುವರು ಸ್ಪರ್ಧಿಸಿದ್ದಾರೆ. ಇವರಿಗೆ ಬಕೆಟ್ ಚಿಹ್ನೆ ನೀಡಲಾಗಿತ್ತು. ಆದರೆ ಮತದಾನದ ಬ್ಯಾಲೆಟ್ ಪೇಪರ್‌ನಲ್ಲಿ ‘ಬಕೆಟ್’ ಚಿಹ್ನೆ ಬದಲು ‘ಅಲ್ಮೇರಾ’ ಚಿಹ್ನೆ ಮುದ್ರಣವಾಗಿದೆ. ಇದರಿಂದಾಗಿ ಮತದಾನ ಮೂಂದೂಡಿಕೆ ಮಾಡಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್​ ಭೇಟಿ ನೀಡಿ ಪರಿಶೀಲನೆ …

Read More »