Breaking News

ಬೆಳಗಾವಿ

ಪ್ರಧಾನಿ ಮೋದಿ ಬೆಳಗಾವಿ ಭೇಟಿ 27ಕ್ಕೆ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಫೆ.27ರಂದು ಬೆಳಗಾವಿಗೆ ಆಗಮಿಸಲಿದ್ದು, ಹೈಟೆಕ್‌ ರೈಲ್ವೆ ನಿಲ್ದಾಣ ಉದ್ಘಾಟಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ನಾಯಕರು ಭಾನುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.   ‘ಫೆ.27ರಂದು ಶಿವಮೊಗ್ಗದಲ್ಲಿ‌ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸುವರು. ಬಳಿಕ, ಇಲ್ಲಿಗೆ ಬಂದು ರೈಲ್ವೆ ನಿಲ್ದಾಣ ಉದ್ಘಾಟಿಸುವರು. ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದರೊಂದಿಗೆ ರೋಡ್ ಷೋ ನಡೆಸುವ ಬಗ್ಗೆಯೂ ಚರ್ಚಿಸುತ್ತಿದ್ದೇವೆ’ ಎಂದು ಪಕ್ಷದ ರಾಜ್ಯ …

Read More »

ಯಾರ ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್, ಟಿಕೆಟ್ ಘೋಷಣೆ ಆದ್ಮೇಲೆ ಎಲ್ಲವೂ ತಣ್ಣಗಾಗಲಿದೆ.:ಸತೀಶ ಜಾರಕಿಹೋಳಿ

ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಟಿಕೆಟ್ ಬಗ್ಗೆ ಘೋಷಣೆ ಮಾಡಬಹುದು ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯೋಣ. ಯಾರ ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು ಟಿಕೆಟ್ ಘೋಷಣೆ ಆಗದೇ ಇರೋದ್ರಿಂದ ಭಿನ್ನಮತ ಇರೋದು ಸಹಜ. ಟಿಕೆಟ್ ಘೋಷಣೆ ಆದ್ಮೇಲೆ ಎಲ್ಲವೂ ತಣ್ಣಗಾಗಲಿದೆ. ಎಲ್ಲರೂ ಸೇರಿ ಟಿಕೆಟ್ …

Read More »

ಏಕಾಏಕಿ ಹೊತ್ತಿಕೊಂಡ ಬೆಂಕಿ

ಬೆಳಗಾವಿ: ಏಕಾಏಕಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಭಾರೀ ಜ್ವಾಲೆಯಾಗಿ ಹಬ್ಬಿಕೊಂಡು ಇಡೀ ಅಂಗಡಿಯನ್ನು ಆವರಿಸಿಕೊಂಡಿತು. ಸ್ಥಳದಲ್ಲಿರುವವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಸ್ಥಳೀಯರ ಕರೆಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಈ ಘಟನೆಯಿಂದ ಸುಮಾರು 10 ಲಕ್ಷರೂ.ಗೂ ಹೆಚ್ಚು ಮೌಲ್ಯದ ಸ್ವತ್ತು ಸುಟ್ಟು ಹೋಗಿರುವುದಾಗಿ ಅಂದಾಜಿಸಲಾಗಿದೆ. ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಶನಿವಾರ ಬೆಳಗ್ಗೆ ಅಂಗಡಿಯೊಂದರಲ್ಲಿ ಗೀಜರ್ ನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ …

Read More »

ಮಗನನ್ನು ಹತ್ಯೆಗೈದಿದ್ದ ತಂದೆಗೆ 10 ವರ್ಷ ಜೈಲು ಶಿಕ್ಷೆ

ಮಗನನ್ನು ಹತ್ಯೆಗೈದಿದ್ದ ತಂದೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, 11ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಬೆಳಗಾವಿ: ಮಗನನ್ನು ಹತ್ಯೆಗೈದಿದ್ದ ತಂದೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, 11ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ರಾಮದುರ್ಗ ತಾಲೂಕಿನ ಸಾಲಪುರ ಗ್ರಾಮದ ಶಿವಪ್ಪ ಗಂಗಪ್ಪ ಮುದಕವಿ ಎಂಬಾತನೇ ಶಿಕ್ಷೆಗೆ ಗುರಿಯಾದ ಕೈದಿ. ಶಿವಪ್ಪ 2018ರಂದು ತನ್ನ ಮಕ್ಕಳಾದ ಗಂಗಾಧರ ಮತ್ತು …

Read More »

ಸರಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು ರಮೇಶ ಜಾರಕಿಹೊಳಿ

ಬೆಳಗಾವಿ: ಐತಿಹಾಸಿಕ ರಾಜಹಂಸಗಢ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಸಂಘರ್ಷ ಆರಂಭವಾಗಿದೆ. ರಾಜಹಂಸಗಢ ಕೋಟೆಯಲ್ಲಿ 43 ಅಡಿ ಎತ್ತರದ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಕಾಮಗಾರಿ ಬಹುತೇಕ ಮುಗಿದಿದೆ.   ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಉದ್ಘಾಟನಾ ಸಮಾರಂಭ ನಿಗದಿಗೊಳಿಸಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸರಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. …

Read More »

ಹಗಲು ಶಿವನಾಮ ಜ‍ಪ, ರಾತ್ರಿ ಜಾಗರಣೆ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಮಹಾಶಿವರಾತ್ರಿಯ ಸಡಗರ ಮನೆ ಮಾಡಿತು. ನಸುಕಿನಿಂದಲೇ ಹಲವು ಭಕ್ತರು ಶಿವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ನಗರದ ಕಪಿಲೇಶ್ವರ ಮಂದಿರ, ಮಿಲಿಟರಿ ಮಹಾದೇವ ಗುಂಡಿ, ಕೆಎಲ್‌ಇ ಶಿವಾಲಯ, ಕಣಬರಗಿಯ ಸಿದ್ಧೇಶ್ವರ ದೇವಾಲಯ, ಶಿವಾಜಿನಗರದ ವೀರಭದ್ರೇಶ್ವರ ದೇವಸ್ಥಾನ, ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ, ಶಹಾಪುರದ ಮಹಾದೇವ, ಶಾಹುನಗರ ಶಿವ ಮಂದಿರ, ಮಹಾಂತೇಶ ನಗರದ ಶಿವಾಲಯ, ಶಿವಶಕ್ತಿ ಕಾಲೊನಿ, ಸದಾಶಿವ …

Read More »

ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ?

ಬೆಳಗಾವಿ: ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ? ಇದು ಪ್ರತಿಯೊಬ್ಬರನ್ನು ಕಾಡುತ್ತಿರುವ ಬಹಳ ದೊಡ್ಡ ಯಕ್ಷ ಪ್ರಶ್ನೆ. ಕೃಷ್ಣಾ ನದಿ ತೀರದ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಲಂತೂ ಇದು ಚುನಾವಣೆಯ ಬಹು ದೊಡ್ಡ ಅಸ್ತ್ರ. ಬೆಳಗಾವಿ ಜಿಲ್ಲೆಯ ವಿಭಜನೆ, ಚಿಕ್ಕೋಡಿ ನೂತನ ಜಿಲ್ಲಾ ರಚನೆ ಎಂಬ ಭರವಸೆ ಚಿಕ್ಕೋಡಿ ವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮಾನ್ಯದ …

Read More »

ಗೋಕಾಕ ಉದ್ಯಿಮಿ ಕೊಲೆ ಪ್ರಕರಣ ಭೇದಿಸಿದ ಎಲ್ಲ ಅಧಿಕಾರಿಗಳನ್ನು ಹೊಗಳಿದ ಎಸ್ಪಿ ಪಾಟೀಲ

ಗೋಕಾಕ: ಈಚೆಗೆ ಕೊಲೆಯಾದ ನಗರದ ಸಗಟು ವ್ಯಾಪಾರಿ ಶವ ಗುರುವಾರ ರಾತ್ರಿ ಪತ್ತೆಯಾಗಿದೆ. ತಾಲ್ಲೂಕಿನ ಪಂಚನಾಯಕನ ಹಟ್ಟಿ ಗ್ರಾಮದ ಹೊರವಲಯದಲ್ಲಿ, ಮಾರ್ಕಂಡೇಯ ನದಿ ಕಾಲುವೆಯಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ನಗರದ ಹಿಲ್‌ ಗಾರ್ಡನ್‌ ರಸ್ತೆಯ ನಿವಾಸಿ ರಾಜು ಝಂವರ (53) ಅವರನ್ನು ಫೆ.10ರಂದು ಅಪಹರಿಸಿ ಕೊಲೆ ಮಾಡಲಾಗಿತ್ತು. ಶವವನ್ನು ಗೋಕಾಕ ಫಾಲ್ಸ್‌ ಕಾಲುವೆಯಲ್ಲಿ ಎಸೆದಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದರು. ಪೊಲೀಸ್‌, ಅಗ್ನಿಶಾಮಕ ಸಿಬ್ಬಂದಿ ಸೇರಿ 350 ಮಂದಿಯ ತಂಡ ಶವಕ್ಕಾಗಿ …

Read More »

ಅಥಣಿ | ಟ್ರ್ಯಾಕ್ಟರ್‌ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಅಥಣಿ: ಪಟ್ಟಣದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಶುಕ್ರವಾರ ಪಲ್ಟಿಯಾಗಿದ್ದು, ವಾಹನದಡಿ ಸಿಲುಕಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅಗ್ರಾಣಿ ಇಂಗಳಗಾವಿಯ ಕಲ್ಪನಾ ಮಾದರ, ಬಣಜವಾಡದ ಶ್ರೀದೇವಿ ಮಾಂಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.   ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೊಡಿ, ಪಿಎಸ್‌ಐ ಶಿವಶಂಕರ ಮುಖರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಹಾಗೂ ಸ್ಥಳೀಯರು ಜೆಸಿಬಿ ಯಂತ್ರದ ನೆರವಿನಿಂದ ರಕ್ಷಣಾ …

Read More »

ಸಾಧನೆಗೆ ತಾಳ್ಮೆ, ಏಕಾಗ್ರತೆ ಅವಶ್ಯ: ಜಿ. ಎಂ. ಗಣಾಚಾರಿ

ಕಿತ್ತೂರು: : ಕಾಲೇಜು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದವರು ಹೆಚ್ಚಾಗಿ ಉತ್ತರ ಕರ್ನಾಟಕದವರೆ ಆಗಿದ್ದಾರೆ. ಇಲ್ಲಿಂದ ವಲಸೆ ಹೋಗಿ ಅಲ್ಲಿ ನೆಲೆಸಿದವರಾಗಿದ್ದಾರೆ ಎಂದು ಆರ್‌ಜಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಣಾಚಾರಿ ತಿಳಿಸಿದರು.   ಇಲ್ಲಿನ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸಾಧನೆಗೆ ಏಕಾಗ್ರತೆ ಮತ್ತು ತಾಳ್ಮೆ ಬೇಕು. ಪ್ರಾಮಾಣಿಕತೆ ಇರುವವ ಸಾಧಕ ಆಗುತ್ತಾನೆ. ಪ್ರಾಮಾಣಿಕತೆ ಇಲ್ಲದ …

Read More »