Breaking News

ಬೆಳಗಾವಿ

ಆಡಳಿತದಲ್ಲಿ ಪಾರದರ್ಶಕತೆ ಕೊರತೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಬೇಸರ

ಬೆಳಗಾವಿ: ‘ಸರ್ಕಾರಿ ಯೋಜನೆಗಳ ಪ್ರಯೋಜನ ದೊರೆಯಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ‌ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನಿವಾರಿಸಬೇಕಿದೆ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು. ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ನಾಗರಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಪ್ರಕ್ರಿಯೆಯು …

Read More »

ಸಿಎಂ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು;: ಶಿವಾಚಾರ್ಯ ಸ್ವಾಮೀಜಿ

ಚಿಕ್ಕೋಡಿ, ಜೂನ್ 28: ಡಿಸಿಎಂ ಡಿಕೆ ಶಿವಕುಮಾರ್​​ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವಂತೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಬೆನ್ನಲ್ಲೇ ಇದೀಗ ವಿವಿಧ ಸಮುದಾಯಗಳ ಸ್ವಾಮೀಜಿಗಳು ಆ ಬಗ್ಗೆ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಇದೀಗ, ಪಂಚ ಪೀಠದಿಂದ ಲಿಂಗಾಯತ ಮುಖ್ಯಮಂತ್ರಿಗೆ ಬೇಡಿಕೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ …

Read More »

ಏಳು ತಿಂಗಳ ಬಾಕಿ ಸಂಬಳ ಕೊಡಿ’

ರಾಯಚೂರು: ‘ಜಿಲ್ಲೆಯಲ್ಲಿ ವಿವಿಧ ವೃಂದ ಹೊರ ಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ ಏಳು ತಿಂಗಳ ವೇತನವನ್ನು ತಕ್ಷಣ ವೇತನ ಪಾವತಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ. ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯಗೌಡ, ‘ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಗುತ್ತಿಗೆ ಏಜೆನ್ಸಿಗಳು ತಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. …

Read More »

ಕರ್ನಾಟಕದ ಕುದುರೆಗಳಿಗೆ ‘ಮಹಾ’ ಮರ್ಯಾದೆ

ಚಿಕ್ಕೋಡಿ: ಹೀರಾ ಮತ್ತು ಮೋತಿ ಅವರಿಗೆ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಿಯಲ್ಲಿ ಆಷಾಢ ಏಕಾದಶಿಯಲ್ಲಿ ರಾಜ ಮರ್ಯಾದೆ ಸಿಗುತ್ತದೆ. ಪ್ರತಿ ವರ್ಷ ಪಂಢರಪುರಕ್ಕೆ ಹೊರಡುವ ದಿಂಡಿಯಲ್ಲಿ 315 ಕಿ.ಮೀ ದಾರಿಯುದ್ದಕ್ಕೂ ಇವರೂ ಹೆಜ್ಜೆ ಹಾಕುತ್ತಾರೆ..! ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ. ಹೀರಾ, ಮೋತಿ ಎಂಬುದು ಎರಡು ಕುದುರೆಗಳ ಹೆಸರು. ತಾಲ್ಲೂಕಿನ ಅಂಕಲಿ ಗ್ರಾಮದ ಶಿಥೋಳೆ ಮನೆತನದವರು ಸಾಕಿರುವ ಈ ಕುದುರೆ ಜೋಡಿಗೆ ಪಂಢರಪುರದ ದೇವಸ್ಥಾನದಲ್ಲಿ ವಿಶೇಷ ಆತಿಥ್ಯ ಸಿಗುತ್ತದೆ. ಪ್ರತಿವರ್ಷ ಜ್ಯೇಷ್ಠ …

Read More »

ಖಾನಾಪುರ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಖಾನಾಪುರ: ಪಟ್ಟಣದ ಹೊರವಲಯದ ಬೆಳಗಾವಿ ರಸ್ತೆಯ ಮರೆಮ್ಮ ದೇವಾಲಯದ ಬಳಿ ಶುಕ್ರವಾರ ರಾತ್ರಿ ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟಿದ್ದಾರೆ. ತಾಲ್ಲೂಕಿನ ಹಲಕರ್ಣಿ ನಿವಾಸಿ ಸಂಜು ಮಲ್ಲಪ್ಪ ಸತನಾಯ್ಕ (35) ಮೃತರು. ಪಟ್ಟಣದಿಂದ ಬೆಳಗಾವಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿಯನ್ನು ಓವರ್‌ಟೇಕ್ ಮಾಡಲು ಹೀಗಿ, ಎದುರಿಗೆ ಬಂದ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಗಂಗವಾಳಿ ಗ್ರಾಮದ ತುಕಾರಾಮ ಸುತಾರ …

Read More »

ಮಾರಾಟಕ್ಕೆ ಇಟ್ಟಿದ್ದ ಮಗು ಸಾವು

ಬೆಳಗಾವಿ: ಮಾರಾಟಕ್ಕೆ ಒಳಗಾಗುವುದನ್ನು ತಪ್ಪಿಸಿ, ರಕ್ಷಿಸಲಾಗಿದ್ದ ಹೆಣ್ಣು ಮಗು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಗುರುವಾರ (ಜೂನ್‌ 20) ಮೃತಪಟ್ಟಿದೆ. ‘ಮಗು ಎಂಟೇ ತಿಂಗಳಿಗೆ ಜನಿಸಿತ್ತು. ತೂಕ 1 ಕೆಜಿ 200 ಗ್ರಾಂ ಮಾತ್ರ ಇತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಗು ಜನ್ಮತಃ ಸೆಪ್ಟಿಸಿನಿಯಾ ಎಂಬ ಕಾಯಿಲೆಗೆ ಒಳಗಾಗಿತ್ತು. ನಾವು ಸಾಕಷ್ಟು ಪ್ರಯತ್ನ ಮಾಡಿದರೂ ಮಗು ಚೇತರಿಸಿಕೊಳ್ಳಲಿಲ್ಲ’ ಎಂದು ಜಿಲ್ಲಾಸ್ಪತ್ರೆಯ ಮಕ್ಕಳ ರೋಗತಜ್ಞ ಡಾ.ಶೈಲೇಶ್‌ ಪಾಟೀಲ ತಿಳಿಸಿದರು. ಏನಿದು ಪ್ರಕರಣ: ‘ಪವಿತ್ರಾ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಅವರಾದಿ ಗ್ರಾಮದ ಶ್ರೀ ಫಲಾಹಾರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …

Read More »

ನಿಬ್ಬೆರಗಾಗಿಸುವ ಜಲಯೋಗ ಸಾಧಕ: 3 ತಾಸು ನೀರಿನಲ್ಲಿ ತೇಲುವ 72ರ ವೃದ್ಧ!

ಕಬ್ಬೂರ: 72 ವರ್ಷದ ಈ ಹಿರಿಯರು ಜಲಯೋಗದಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ನೀರಿನ ಮೇಲೆ ಮೂರು ತಾಸಿಗೂ ಅಧಕ ಸಮಯ ಲೀಲಾಜಾಲವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಅವರ ಸಾಮರ್ಥ್ಯ, ಚುರುಕುತನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಎಂಥವರನ್ನೂ ನಿಬ್ಬೆರಗು ಮಾಡುತ್ತದೆ. ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಪ್ರಕಾಶ ಬಸಲಿಂಗಪ್ಪ ಬೆಲ್ಲದ ಅವರೇ ಈ ಯೋಗ ಸಾಧಕ. ಬ್ಯಾಂಕ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅವರು 37 …

Read More »

ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು

ಬೆಳಗಾವಿ: ಕರ್ನಾಟಕದ ಗಡಿಭಾಗದಲ್ಲಿ ರುವ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುತ್ತಿರುವ ಮಹಾರಾಷ್ಟ್ರ ಸರಕಾರವು ಸದ್ದಿಲ್ಲದೆ ಇನ್ನೊಂದು ಪಿತೂರಿ ಮಾಡುತ್ತಿದೆ ಎಂದು ಆರೋಪಿಸ ಲಾಗಿದೆ. ಅದು ಕಳೆದ 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯನ್ನೇ ಮಾಡಿಲ್ಲ ಎನ್ನುವ ಸಂಗತಿ ಈಗ ಹೊರಬಿದ್ದಿದೆ. ಉರ್ದು ಭಾಷಾ ಶಿಕ್ಷಕರ ನೇಮಕಾತಿ ಮಾಡಿದ್ದು, ಕನ್ನಡ ಶಾಲೆಗಳಿಗೆ ಮಾತ್ರ ಅರ್ಹ ಶಿಕ್ಷಕರಿದ್ದರೂ ಮಹಾರಾಷ್ಟ್ರ ಸರಕಾರ ಅವರನ್ನು ಪರಿಗಣಿಸಿಲ್ಲ. 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ …

Read More »

40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಚಿಕ್ಕೋಡಿ: ನೀರಿಲ್ಲದ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಜೀವದಾನ ನಿಡಿದ್ದಾರೆ.   ಚಿಕ್ಕೋಡಿ ನಗರದ ವಾಡ ಗಲ್ಲಿಯ ಶ್ರೀನಿವಾಸ್ ದೊಡಮನಿ ಅವರ ಸುಮಾರು 40 ಅಡಿ ಆಳದ ಬಾವಿಯಲ್ಲಿ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಕ್ಕು ಕಾಲು ಜಾರಿ ಬಿದ್ದಿದೆ. ಹೀಗಾಗಿ ದೊಡಮನಿ ಮನೆಯವರು ಚಿಕ್ಕೋಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಕ್ಕನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ಅಗ್ನಿಶಾಮಕ ದಳದ ಸಿಬ್ಬಂದಿ …

Read More »