ಬೆಳಗಾವಿ : ಕೋವಿಡ್ ಮಹಾಮಾರಿಗೆ ಹೆದರಿ ಜನರು ತಮ್ಮ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ನೋಡುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಮೇದಾರ ಸಮಾಜದ ಹಿತೈಸಿಗಳಾದ ನಾಗೇಶ ಹಾಗೂ ಅರ್ಜುನ ಕಡೋಲಿ ಸಹೋದರರು ಕೊರೋನಾಗೂ ಹೆದರದೆ ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ಓಡಾಡಿ ಬಡತನದ ಅಲೆಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸುತ್ತಿದ್ದಾರೆ.ಕಳೆದ ಕೆಲ ದಿನಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ಊರುಗಳಿಗೆ ಭೇಟಿ ನೀಡಿ …
Read More »ನೆರೆ ಪ್ರವಾಹ ಸಂಬಂಧ ಪೂರ್ವಭಾವಿಯಾಗಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.
ಗೋಕಾಕ : ನೆರೆಯ ಮಹಾರಾಷ್ಟ್ರ ಹಾಗೂ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಪ್ರಸಕ್ತ ಸ್ಥಿತಿಯಲ್ಲಿ ಪ್ರವಾಹ ಭೀತಿ ಎದುರಾಗಿಲ್ಲ. ಆದರೂ ನದಿ ತೀರದ ಗ್ರಾಮಗಳ ಜನರ ಸುರಕ್ಷತೆಗಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಸಂಜೆ ತಮ್ಮ ಗೃಹ ಕಛೇರಿಯಲ್ಲಿ ನೆರೆ ಪ್ರವಾಹ ಸಂಬಂಧ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ …
Read More »ವೇದಗಂಗಾ ನದಿಯಲ್ಲಿ ಕೊಚ್ಚಿಹೋಗಿ ಮರ ಹತ್ತಿ ಕುಳಿತಿದ್ದ ಯುವಕನನ್ನು ರೋಚಕ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಸ್ಥಳೀಯರು
ಬೆಳಗಾವಿ: ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ ಬಳಿ ವೇದಗಂಗಾ ನದಿ ದಾಟುತ್ತಿದ್ದಾಗ ಕೊಚ್ಚಿಹೋಗಿದ್ದ ಯುವಕನನ್ನು ಸತತ 5 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಎನ್ಡಿಆರ್ಎಫ್ ತಂಡ ರಕ್ಷಣಾ ಕಾರ್ಯಾಚರನೆ ನಡೆಸುತ್ತಿದ್ದರೂ ಸ್ಥಳೀಯರೇ ನದಿಯಲ್ಲಿ ಕೊಚ್ಚಿಹೋಗಿದ್ದ ದಿಗ್ವಿಜಯ್ ಕುಲಕರ್ಣಿ ಎಂಬ ಯುವಕನ್ನು ರಕ್ಷಿಸಿದ್ದಾರೆ. ಸೇತುವೆ ಮೇಲೆ ಹರಿಯುತ್ತಿದ್ದ ವೇದಗಂಗಾ ನದಿ ದಾಟಲು ಯತ್ನಿಸಿದ್ದ ಯುವಕ ದಿಗ್ವಿಜಯ ಕುಲಕರ್ಣಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ನದಿಯ ಮಧ್ಯೆ …
Read More »ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ L& T ಕಂಪನಿಯ ಆಕ್ಸೀಜನ್ ಘಟಕ ಇಂದಿನಿಂದ ಸೇವೆಗೆ ಸಮರ್ಪಣೆ
ಬೆಳಗಾವಿ- ಇನ್ನು ಮುಂದೆ ಬೆಳಗಾವಿಯಲ್ಲಿ ಎಂದಿಗೂ ಆಕ್ಸೀಜನ್ ಸಮಸ್ಯೆ ಎದುರಾಗುವದಿಲ್ಲ,ಯಾಕಂದ್ರೆ ಶಾಸಕ ಅಭಯ ಪಾಟೀಲ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ L& T ಕಂಪನಿಯ ಆಕ್ಸೀಜನ್ ಘಟಕ ಇಂದಿನಿಂದ ಸೇವೆಗೆ ಸಮರ್ಪಣೆಯಾಗಿದೆ. ಬೆಳಗಾವಿಯಲ್ಲಿ ಆಮ್ಲಜನಕ ಕೊರತೆನ್ನು ಗಮನಿಸಿದ ಶಾಸಕ, ಅಭಯ ಪಾಟೀಲ ರವರು ಆಮ್ಲಜನಕ ತಯಾರಿಕಾ ಘಟವನ್ನು ಸ್ಥಾಪಿಸುವಂತೆ ಎಲ್&ಟಿ ಕಂಪನಿಯ ಅವರಿಗೆ ವೈಯಕ್ತಿಕವಾಗಿ ವಿನಂತಿಸಿದ್ದರು. ಅದಕ್ಕೆ ಸ್ಪಂದಿಸಿರುವ L&T ಕಂಪನಿ ನಿಗದಿತ ಅವಧಿಯಲ್ಲಿ ಆಮ್ಲಜನಕ. …
Read More »ಬೆಳಗಾವಿಯಲ್ಲಿ ಸದ್ಯಕ್ಕಿಲ್ಲ ಪ್ರವಾಹ ಭೀತಿ ಎಂದ ಜಿಲ್ಲಾಧಿಕಾರಿ,ವಿವಿಧ ಜಿಲ್ಲೆಗಳ ಜೊತೆ ಸಂವಾದ ನಡೆಸಿದ B.S.Y.
ಬೆಳಗಾವಿ : ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಲಾಗುವುದು ಎಂದು ನೆರೆಯ ಮಹಾರಾಷ್ಟ್ರದ ನೀರಾವರಿ ಇಲಾಖೆಯ ಸಚಿವರು ತಿಳಿಸಿದ್ದಾರೆ. ಇದರಿಂದ ಪ್ರವಾಹ ಸ್ಥಿತಿಯ ಸಮರ್ಪಕ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಪ್ರವಾಹ ಸಿದ್ಧತೆ ಕುರಿತು ಬೆಳಗಾವಿ ಸೇರಿದಂತೆ ರಾಜ್ಯದ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶನಿವಾರ (ಜೂ.19) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಜಲಾಶಯಗಳಿಂದ ನೀರು ಬಿಡುಗಡೆ ಕುರಿತ …
Read More »ಬೆಳಗಾವಿಯ ಜಲಾಶಯ ನೀರಿನ ಮಟ್ಟ….
ಹಿಡಕಲ್ ಜಲಾಶಯ ನೀರಿನ ಮಟ್ಟ ಘಟಪ್ರಭಾ ನದಿ ಹಿಡಕಲ್ ಜಲಾಶಯ ಗರಿಷ್ಠ ಮಟ್ಟ- 2175.00 ಅಡಿ ಇಂದಿನ ಮಟ್ಟ- 2110.80 ಅಡಿ ಒಳ ಹರಿವು- 39,515 ಕ್ಯೂಸೆಕ್ ಹೊರ ಹರಿವು- 94 ಕ್ಯೂಸೆಕ್ ನೀರು ಸಂಗ್ರಹ- 13.474 ಡ್ಯಾಂ ಸಾಮರ್ಥ್ಯ- 51.00 tmc ನವಿಲುತಿರ್ಥ ಜಲಾಶಯ ನೀರಿನ ಮಟ್ಟ ಮಲಪ್ರಭಾ ನದಿ ನವೀಲು ತೀರ್ಥ ಜಲಾಶಯ ಗರಿಷ್ಠ ಮಟ್ಟ- 2079.50 ಅಡಿ ಇಂದಿನ ಮಟ್ಟ- 2054.10 ಒಳ ಹರಿವು- 17208 …
Read More »ಸಂಕಷ್ಟ ಕಾಲದಲ್ಲಿ ಮೇದಾರ ಸಮಾಜದ ಬಡವರ ಸಹಾಯಕ್ಕೆ ನಿಂತ ನಾಗೇಶ ಕಡೋಲಿ ಮತ್ತು ಅರ್ಜುನ ಕಡೋಲಿ ಸಹೋದರರು
ಬೆಳಗಾವಿ :ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ,ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ಎಂಬ ಮಾತಿನಂತೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಮೇದಾರ ಗಲ್ಲಿ ನಿವಾಸಿ ನಾಗೇಶ ಕಡೋಲಿ ಹಾಗೂ ಅರ್ಜುನ ಕಡೋಲಿ ಸಹೋದರರು ನಡೆದುಕೊಳ್ಳುತ್ತಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ತಮ್ಮ ಸಮಾಜದ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡು ಕೈಲಾದಷ್ಟು ಸೇವೆ ಸಲ್ಲಿಸುತ್ತ ಬಂದಿರುವ ಈ ಸಹೋದರರು ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಮೇದಾರ ಸಮಾಜದ ಬಡ ಕುಟುಂಬಗಳಿಗೆ …
Read More »ರಾಜಕಾರಣಿಗಳಿಂದ ಕೊರೊನಾ ರೂಲ್ಸ್ ಬ್ರೇಕ್; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜಕಾರಣಿಗಳಿಂದ ಕೋವಿಡ್ ರೂಲ್ಸ್ ಬ್ರೇಕ್ ಮಾಡುವ ವಿಚಾರ ಸಂಬಂಧ ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ನಡೆಸಿತು. ರೂಲ್ಸ್ ಬ್ರೇಕ್ ಮಾಡಿ ಬೆಳಗಾವಿಯಲ್ಲಿ ಬಿಜೆಪಿ ನಡೆಸಿದ್ದ ಸಮಾವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತರ ಪ್ರಮಾಣಪತ್ರಕ್ಕೆ ಹೈಕೋರ್ಟ್ ಗರಂ ಆಯ್ತು. ಆಯುಕ್ತರ ಪ್ರಮಾಣಪತ್ರಗಳು ಹಾಸ್ಯಸ್ಪದವಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನೆ …
Read More »ಲಾಕ್ ಡೌನ್ ನಿಂದಾಗಿ ಬೆಳಗಾವಿಯಲ್ಲಿ ಸಂಕಷ್ಟಕ್ಕೀಡಾಗಿದ್ದ 6 ಒಂಟೆಗಳನ್ನು ರಕ್ಷಿಸಲಾಗಿದ್ದು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್
ಬೆಳಗಾವಿ – ಲಾಕ್ ಡೌನ್ ನಿಂದಾಗಿ ಬೆಳಗಾವಿಯಲ್ಲಿ ಸಂಕಷ್ಟಕ್ಕೀಡಾಗಿದ್ದ 6 ಒಂಟೆಗಳನ್ನು ರಕ್ಷಿಸಲಾಗಿದ್ದು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಉಸ್ತುವಾರಿ ನೋಡಿಕೊಂಡರು. ಡಾ.ಸೋನಾಲಿ ಸರ್ನೋಬತ್ ಜನರ ಮನರಂಜನೆಗಾಗಿ ಕೆಲವರು ಬೆಳಗಾವಿಗೆ 7 ಒಂಟೆಗಳನ್ನು ಕರೆತಂದಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಅವುಗಳಿಗೆ ಆಹಾರ ಮತ್ತು ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಅವುಗಳ ಮಾಲಿಕರಿಗೆ ಯಾವುದೇ ಆದಾಯವಿರಲಿಲ್ಲ. ಇದರಿಂದಾಗಿ ಒಂದು ಒಂಟೆ ಮರಣ ಹೊಂದಿತು. …
Read More »ಬೆಳಗಾವಿಯಲ್ಲಿ ಕಳೆದ 3 ದಿನಗಳಿಂದ ಮಳೆಯ ಅಬ್ಬರ , ರೈತನೋರ್ವ ಕೊಚ್ಚಿಹೋಗಿದ್ದು ಶೋಧ ಕಾರ್ಯ ನಡೆದಿದೆ.
ಬೆಳಗಾವಿ – ಬೆಳಗಾವಿಯಲ್ಲಿ ಕಳೆದ 3 ದಿನಗಳಿಂದ ಮಳೆಯ ಅಬ್ಬರ ಮುಂದುವರಿದಿದ್ದು, ಶನಿವಾರವೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಶುಕ್ರವಾರ ಮಾರ್ಕಂಡೇಯ ನದಿಯಲ್ಲಿ ರೈತನೋರ್ವ ಕೊಚ್ಚಿಹೋಗಿದ್ದು ಶೋಧ ಕಾರ್ಯ ನಡೆದಿದೆ. ಬುಧವಾರ ರಾತ್ರಿಯಿಂದಲೇ ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದರಿಂದ ಬೆಳಗಾವಿ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಎಲ್ಲೆಡೆ ಆತಂಕದ ವಾತಾವರಣ ಉಂಟಾಗಿದೆ. ಶುಕ್ರವಾರ ಮಧ್ಯಾಹ್ನ ನಂತರ ಸ್ವಲ್ಪಮಟ್ಟಿಗೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಶನಿವಾರ ಮತ್ತೆ …
Read More »