Breaking News

ಬೆಳಗಾವಿ

ಯಡಿಯೂರಪ್ಪ ಅವರನ್ನು ಹೆದರಿಸಿ ರಾಜೀನಾಮೆ ಪಡೆದಿದ್ದಾರೆ: ಸಿದ್ದರಾಮಯ್ಯ

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ನವರು ಹೆದರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಇಲ್ಲಿನ ಪ್ರವಾಸಿಮಂದಿರದಲ್ಲಿ ಸೋಮವಾರ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಸ್ವಇಚ್ಛೆಯಿಂದ ರಾಜೀನಾಮೆ ನೀಡಿಲ್ಲ’ ಎಂದರು. ‘2019ರಲ್ಲಿ ಪ್ರವಾಹ ಬಂದಾಗ ಸಚಿವ ಸಂಪುಟ ಇರಲಿಲ್ಲ. ಈ ಬಾರಿ ಪ್ರವಾಹ ಬಂದಾಗ ಮುಖ್ಯಮಂತ್ರಿಯೇ ರಾಜೀನಾಮೆ ನೀಡಿದ್ದಾರೆ. ಇದು ಕರ್ನಾಟಕದ ದುರ್ದೈವವೆ ಸರಿ. ಯಡಿಯೂರಪ್ಪ ಕೇರ್‌ ಟೇಕರ್‌ …

Read More »

ಅವಮಾನ ಮಾಡಿ ಬಿಎಸ್ ವೈ ರಾಜೀನಾಮೆ ಪಡೆಯಲಾಗಿದೆ; ಸತೀಶ್ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ನಾಯಕರು ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸವಣ್ಣನವರ ರೀತಿ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಡಿಯೂರಪ್ಪನವರನ್ನು ಇಷ್ಟೊಂದು ಅವಮಾನಗೊಳಿಸಬಾರದಿತ್ತು. ಹಿರಿಯ ನಾಯಕನಿಗೆ ಗೌರವಯುತವಗೈ ಹೋಗಲು ಅವಕಾಶ ನೀಡಬೇಕಿತ್ತು. ಒತ್ತಡ ಹೇರಿ ಹಿರಿಯ ನಾಯಕನನ್ನು ಅಗೌರವದಿಂದ ಕೆಳಗಿಳಿಸಿದ್ದಾರೆ. ಇದನ್ನು ಯಾರೂ ಸಹಿಸಲು ಆಗಲ್ಲ ಎಂದರು. 12ನೇ …

Read More »

ಚಿಕ್ಕೊಳಿ ಪರಸಿ ರೊಡ ಬ್ರಿಡ್ಜ್ ಕಾಮಗಾರಿ ಸರಿಯಾಗಿದೆ ,ಸತೀಶ್ ಜಾರಕಿಹೊಳಿ ಅವರನ್ನ ಬ್ರಿಡ್ಜ್ ಮೇಲೆ ನೋಡಿ ಯುವಕರ ಗುಂಪು ಸೆಲ್ಫಿ ಹಾಗೂ ಅವರ್ ಭೇಟಿ ಗಾಗಿಗಿ ಮುಗಿಬಿದ್ದಿದ್ದಾರೆ..

ಗೋಕಾಕ : ಗೋಕಾಕ ನಗರದಲ್ಲಿ ಸತತ ಸುರಿಯುತ್ತಿದ್ದ ಮಳೆಯಿಂದ ಗೋಕಾಕ ನಗರ ಮಿನಿ ದ್ವೀಪ ದಂತೆ ಆಗಿತ್ತು ಕಳೆದ ಎರಡು ದಿನದಿಂದ ಸ್ವಲ್ಪ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಜನರು ಸ್ವಲ್ಪ ನಿರಾಳ ವಾಗಿದ್ದರೆ ಇಂದು ಚಿಕ್ಕೊಳಿ ಪರಸಿ ರೊಡ ಅಥವಾ ಗೋಕಾಕ ಫಾಲ್ಸ್ ಗೆ ಹೋಗುವ ಬ್ರಿಜ ಅಂತಾರೆ ಇದರ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮಳೆಯಿಂದ ಕೆಟ್ಟಿದ್ದ ರಸ್ತೆಯನ್ನು ಇಂದು ಪ್ಯಾಚ್ ಅಪ್ ಮಾಡಿಸುವ ಮೂಲಕ ಸರಿಪಡಿಸಿದ್ದಾರೆ …

Read More »

ಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ.

ಬೆಳಗಾವಿ – ಕಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ. ಬೆಳಗಾವಿ -ಕೊಲ್ಲಾಪುರ ಮಧ್ಯೆ ಸಂಕೇಶ್ವರ ಬಳಿ ವೇದಗಂಗಾ ನದಿ ಉಕ್ಕಿ ಹರಿದು ಸಂಚಾರ ಬಂದ್ ಆಗಿತ್ತು, ಅಲ್ಲದೆ ಮಧ್ಯೆ ಮಧ್ಯೆ ಕೆಲವು ಹಳ್ಳಗಳೂ ರಸ್ತೆಯ ಮೇಲೆ ಹರಿದು ಸಂಚಾರ ತಡೆದಿದ್ದವು. ಇಂದು ಮಧ್ಯಹ್ನ 12 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ಮೇಲಿನ ನೀರು ಖಾಲಿಯಾಗಿದ್ದು, ವಾಹನ ಸಂಚಾರಕ್ಕೆ ಅನುಮತಿ …

Read More »

ನೊಂದ ಕುಟುಂಬಗಳಿಗೆ ಆಸರೆಯಾಗೋಣ: ರಾಹುಲ್ ಜಾರಕಿಹೊಳಿ ನಿರ್ಗತಿಕರ ಸಾತ್ವಾಂನ ಹೇಳಿದ ಯುವ ನಾಯಕ ರಾಹುಲ್

    ಗೋಕಾಕ: ರಣ ಭೀಕರ ಮಳೆಗೆ ಘಟಪ್ರಭಾ ನದಿಯ ತೀರದ   ಗ್ರಾಮಗಳು  ಪ್ರವಾಹಕ್ಕೆ ತುತ್ತಾಗಿದ್ದು, ಪ್ರವಾಹ  ಪೀಡಿತ ಗ್ರಾಮಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭೇಟಿ ನೀಡಿ, ರವಿವಾರ  ಪರಿಸ್ಥಿತಿ ಅವಲೋಕಿಸಿದರು.   ಅರಭಾವಿ ವಿಧಾನ ಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿರುವ  ಅಡಿಬಟ್ಟಿ, ಚಿಗದೊಳ್ಳಿ,  ಜಾಕ್ವೆಲ್ ಗೌಡನ್ ಕ್ರಾಸ್ ಮೆಳವಂಕಿ,  ಕಲಾರ್ಕೊಪ್ಪ,  ಹಡಗಿನಾಳ,  ತಳಕಟ್ನಾಳ , ಉದಗಟ್ಟಿ  ಗ್ರಾಮದ ಗಂಜಿ ಕೇಂದ್ರಗಳಲ್ಲಿರುವ  ನಿರ್ಗತಿಕರನ್ನು ಭೇಟಿ ಮಾಡಿ, …

Read More »

ಮಹಾನಗರ ಪಾಲಿಕೆ ಆಯುಕ್ತರ ಮನೆಯಮುಂದೆ ಶಾಸಕ ಅಭಯ ಪಾಟೀಲ ಚೆಲ್ಲಿದ್ದ ಕಸವನ್ನು ಸ್ವಚ್ಛತಾ ಸಿಬ್ಬಂದಿ ಕೆಲವೇ ಕ್ಷಣದಲ್ಲಿ ತೆಗೆದು ಸ್ವಚ್ಛಗೊಳಿಸಿದರು.

ಬೆಳಗಾವಿ – ಮಹಾನಗರ ಪಾಲಿಕೆ ಆಯುಕ್ತರ ಮನೆಯಮುಂದೆ ಶಾಸಕ ಅಭಯ ಪಾಟೀಲ ಚೆಲ್ಲಿದ್ದ ಕಸವನ್ನು ಸ್ವಚ್ಛತಾ ಸಿಬ್ಬಂದಿ ಕೆಲವೇ ಕ್ಷಣದಲ್ಲಿ ತೆಗೆದು ಸ್ವಚ್ಛಗೊಳಿಸಿದರು. ನಗರದಲ್ಲಿ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂದು ಆಕ್ರೋಶಗೊಂಡ ಶಾಸಕ ಅಭಯ ಪಾಟೀಲ ತಾವೇ ಸ್ವತಃ ಟ್ರ್ಯಾಕ್ಟರ್ ನಲ್ಲಿ ಕಸ ತುಂಬಿಕೊಂಡು ಬಂದು ಪಾಲಿಕೆ ಆಯುಕ್ತರ ಮನೆಯ ಮುಂದೆ ಚೆಲ್ಲಿದ್ದರು. ತಕ್ಷಣ ಸ್ವಚ್ಛತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎಲ್ಲವನ್ನೂ ಸ್ವಚ್ಛಗೊಳಿಸಿದರು. ಈ ಕುರಿತು ಮಾತನಾಡಿದ ಪಾಲಿಕೆ …

Read More »

ಹೈಕಮಾಂಡ್‍ನಿಂದ ಸಂಜೆಯ ವೇಳೆಗೆ ಸಂದೇಶ ಬರಲಿದೆ ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ.

ಬೆಳಗಾವಿ: ಹೈಕಮಾಂಡ್‍ನಿಂದ ಸಂಜೆಯ ವೇಳೆಗೆ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಹೆಚ್ಚು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಮಾಧ್ಯಮದವರೊಂದಿಗೆ ಮಾತನಾಡಿ, ಸಂಜೆಯ ವೇಳೆಗೆ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ. ಯವುದೇ ಸ್ವಾಮಿಜಿಗಳು ಸಭೆ, ಸಮಾವೇಶ ಮಾಡುವ ಅಗತ್ಯವಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಕುರಿತಾಗಿ ವಿಶ್ವಾಸವಿದೆ ಎಂದಿದ್ದಾರೆ. ಎರಡು ವರ್ಷಗಳ …

Read More »

ಮಳೆ ಕಡಿಮಯಾಗಿದೆ ಆದ್ರೆ ಪ್ರವಾಹದ ಭೀತಿ ಹೋಗಿಲ್ಲ ಸತೀಶ್ ಜಾರಕಿಹೊಳಿ ಗೋಕಾಕ್ ರೌಂಡ್ಸ್

ಸತತವಾಗಿ ಸುರಿಯುತ್ತಿರುವ ಮಳೆ ನಿನ್ನೆಯಿಂದ ಕೊಂಚ ನಿರಾಳ ವಾಗಿದೆ ಇಂದು ಬೇಳಂ ಬೆಳಿಗ್ಗೆ ಸತಿ ಶ ಜಾರಕಿಹೊಳಿ ಅವರು ನಗರದ ಗೋಕಾಕ ಫಾಲ್ಸ್ ,ಚಿಕ್ಕೊಳ್ಳಿ ಪರ್ಸಿ ಹಾಗೂ ಇನ್ನಿತರ ಪ್ರದೇಶ ಗಳಿಗೆ ಭೇಟಿ ನೀಡಿ ನೀರಿನ ಮಟ್ಟ ವೀಕ್ಷಿಸಿದರು ಒಬ್ಬ ವಿರೋಧ್ ಪಕ್ಷದ ನಾಯಕರು ಜನರ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದು ಎಲ್ಲರಿಗೂ ಕುತೂಹಲ ಮೂಡಿಸಿದೆ ಇದಷ್ಟೇ ಅಲ್ಲದೇ ನಿನ್ನೆ ಕಾಂಗ್ರೆಸ್ ಶಾಸಕರು ಸುಮಾರು ಕಡೆ ಭೇಟಿ ನೀಡಿದ್ದಾರೆ ನೀರಿನ …

Read More »

ಯಡಿಯೂರಪ್ಪ ಅವರ ಬೆನ್ನಿಗೆ ಬಿಜೆಪಿಯವರೇ ಚೂರಿ ಹಾಕಿದ್ದಾರೆ’: ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ಬಿಜೆಪಿಯವರೇ ಚೂರಿ ಹಾಕಿದ್ದಾರೆ’ ಎಂದು ಕೆಪಿಸಿಸಿ ವಕ್ತಾರೆಯೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದವರು ಚೂರಿ ಹಾಕಲು ಸಾಧ್ಯವೇ?’ ಎಂದು ಕೇಳಿದರು. ‘ಯಾರನ್ನು ಬೆಳೆಸಿದರೋ, ಯಾರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರೋ ಅವರೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿದರು. ‘2019ರಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿ ಅನುಭವಿಸಿದವರಿಗೆ ಪರಿಹಾರ …

Read More »

ಮಳೆ ನಿಂತರೂ ಪ್ರವಾಹ ಭೀತಿ ಹೆಚ್ಚಳ

ಬೆಳಗಾವಿ: ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಶನಿವಾರ ಮಳೆ ಪ್ರಮಾಣ ತಗ್ಗಿದೆ. ನದಿಗಳಿಗೆ ಹೆಚ್ಚಿನ ನೀರು ಹರಿದುಬರುತ್ತಿರುವುದರಿಂದ ಮತ್ತು ಜಲಾಶಯಗಳಿಗೆ ಹೊರಹರಿವಿನ ಪ್ರಮಾಣ ಏರಿಕೆಯಾಗಿರುವ ಪರಿಣಾಮ ನದಿ ತೀರದ ಪ್ರವೇಶಗಳಲ್ಲಿ ಪ್ರವಾಹದ ಭೀತಿ ಜಾಸ್ತಿಯಾಗುತ್ತಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 2,24,435 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 51,920 ಕ್ಯುಸೆಕ್‌ ಸೇರಿ 2,72,295 ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ದೂಧ್‌ಗಂಗಾ, ವೇದಗಂಗಾ ಮತ್ತು …

Read More »