ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಿದ್ದಾರೆ. ಹೀಗೆ ಕಸ ಚೆಲ್ಲುವವರನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯತಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಹೌದು ಸಿಸಿ ಕ್ಯಾಮರಾ ಅಳವಡಿಸುವ ಕಾಮಗಾರಿಗೆ ಮಂಗಳವಾರ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಚಾಲನೆ ನೀಡಿದರು. ಅದೇ ರೀತಿ ಕಸ ಚೆಲ್ಲುವವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸುವ ಬಗ್ಗೆ ಎಚ್ಚರಿಕೆಯನ್ನು ಗ್ರಾಮ ಪಂಚಾಯತಿ ನೀಡಿದೆ. ಈ ವೇಳೆ ಗ್ರಾ.ಪಂ.ಉಪಾಧ್ಯಕ್ಷೆ ಭಾಗ್ಯಶ್ರೀ ಕೋಕಿತ್ಕರ್, …
Read More »ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ತೆರವು ಮಾಡಿದ ಬುಡಾ ಅಧಿಕಾರಿಗಳು
ಬೆಳಗಾವಿ ರಾಮತೀರ್ಥ ನಗರದಲ್ಲಿ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಬುಡಾ ಅಧಿಕಾರಿಗಳು ತೆರವು ಮಾಡಿದ್ದಾರೆ. ಹೌದು ಮಂಗಳವಾರ ಬೆಳಿಗ್ಗೆ ಜೆಸಿಬಿಗಳ ಸಹಾಯದಿಂದ ರಾಮತೀರ್ಥ ನಗರದಲ್ಲಿ ಯೋಜನೆ ಸಂಖ್ಯೆ 35, 40, 41ರಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಈ ಸಂಬಂಧ ಮಾತನಾಡಿದ ಬುಡಾ ಎಇಇ ಮಹಾಂತೇಶ ಹಿರೇಮಠ ಅವರು ಯಾವುದೇ ಅನಧಿಕೃತ ಮನೆಗಳನ್ನು ಯಾರೂ ಕೂಡ ಕಟ್ಟಬಾರದು. ಪ್ರಾಧಿಕಾರಕ್ಕಾಗಿ ನಾವು ವಶಪಡಿಸಿಕೊಂಡಿರುವ ಅಥವಾ …
Read More »ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆಕಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆಕಳು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಹೌದು ಸೋಮವಾರ ರಾತ್ರಿ ಬೆಳಗಾವಿ ನಗರದ 3ನೇ ಮತ್ತು 4ನೇ ರೈಲ್ವೇ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ರೈಲು ಗುದ್ದಿದ ಪರಿಣಾಮ ಆಕಳುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸ್ಯಾನಿಟರಿ ಇನ್ಸಪೆಕ್ಟರ್ ಗಣಾಚಾರಿ ಮತ್ತು ಅವರ ತಂಡ ಆಕಳುಗಳ ಶವಗಳನ್ನು ತೆಗೆದುಕೊಂಡು ಹೋಗಿ …
Read More »ಬೆಳಗಾವಿ ಗಡಿ ವಿವಾದ : ಅತ್ತ ‘ಮಹಾ’ ಸಿದ್ಧತೆ, ಇತ್ತ ಗಾಢ ನಿದ್ದೆ
ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಆದರೆ, ಕರ್ನಾಟಕ ಸರ್ಕಾರ ತುರ್ತು ಸಿದ್ಧತೆಗಳನ್ನೂ ಮಾಡಿಕೊಳ್ಳದಿರುವುದು ಗಡಿ ಕನ್ನಡಿಗರು ಹಾಗೂ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ. 1956ರ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ. ಗಡಿ ವಿವಾದವನ್ನು ಸುಪ್ರೀಂ …
Read More »ಬೆಳಗಾವಿಯಲ್ಲಿ ಕುಸಿದ ತಾಪಮಾನ: 10.2 ಡಿಗ್ರಿ ಸೆಲ್ಸಿಯಸ್ ದಾಖಲು
ಬೆಳಗಾವಿ: ನಗರದಲ್ಲಿ ಸೋಮವಾರ ಕನಿಷ್ಠ ತಾಪಮಾನ 10.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪ್ರಸಕ್ತ ವರ್ಷದ ಈವರೆಗಿನ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ. ಕಳೆದ ಸೋಮವಾರದಿಂದ ಗರಿಷ್ಠ 27ರಿಂದ ಕನಿಷ್ಠ 18ರ ಆಸುಪಾಸಿನಲ್ಲೇ ದಾಖಲಾಗಿದೆ. ಸೋಮವಾರ ಏಕಾಏಕಿ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡಿದೆ. ಇನ್ನೂ ಎರಡು ದಿನ ಇಷ್ಟೇ ಪ್ರಮಾಣದ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ನಗರದ ಜನ ಥರಗುಟ್ಟುವ ಚಳಿಯಿಂದ ಬಳಲುವಂತಾಯಿತು. ಗರಿಷ್ಠ ತಾಪಮಾನ ಸರಾಸರಿ …
Read More »ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು,ರಾಜ್ಯದಲ್ಲಿಯೂ ಕಠಿಣ ಕ್ರಮ : ಅಭಯ್ ಪಾಟೀಲ
ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ತಂದು ತೀವ್ರತರವಾದ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಯುಪಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದರು. ಮಂಗಳವಾರ ಬೆಳಗಾವಿಯ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ರಾಜ್ಯ ಮತ್ತು ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ ಜನರ ವಿರುದ್ಧ ಉಗ್ರ ಕ್ರಮ ಆಗಬೇಕು ಎಂದು ನಾವು ಮೊದಲಿನಿಂದ ಒತ್ತಾಯಿಸುತ್ತಿದ್ದೇವೆ. ಈ …
Read More »ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
ದೈಹಿಕ ಅಂಗವಿಕಲತೆಯನ್ನು ಲೆಕ್ಕಿಸದೆ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದು ಭಾರತದ ಕೀರ್ತಿ ಪತಾಕೆ ಹಾರಿಸಿದ ಎಲ್ಲ ವಿಕಲಚೇತನ ಕ್ರೀಡಾ ಪಟುಗಳಿಗೆ ಸರ್ಕಾರದಿಂದ ಹೆಚ್ಚಿನ ಸಹಾಯ, ಸಹಕಾರ ಸಿಗುವಂತಾಗಬೇಕು ಎಂದು ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಅಭಿಪ್ರಾಯ ಪಟ್ಟರು. ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ, ಒಲಂಪಿಕ್ ಕಮಿಟಿ …
Read More »ನಾಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀರ್ಪು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ
ಬೆಂಗಳೂರು : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೆರೆಯ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನವೆಂಬರ್ 23 ರ ನಾಳೆ ನಡೆಯಲಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿದಂತೆ ಕರ್ನಾಟಕದ ಹಲವು ಭಾಗಗಳು ತನ್ನದೆಂದು ವಾದಿಸಿ ಕಾನೂನು ಹೋರಾಟ ನಡೆಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಈ ನಿಟ್ಟಿನಲ್ಲಿ ಕಾನೂನು ತಂಡಕ್ಕೆ ಸಹಕಾರ ನೀಡಲು ಮತ್ತು ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ …
Read More »ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾವಿರಾರು ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣ
ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದ ಆನೆಬಾಯಿಕೋಡಿಯಲ್ಲಿ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾವಿರಾರು ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅ ಲಾಲಪುರ- ರಾಯಬಾಗ ರಸ್ತೆಯಲ್ಲಿರುವ ಆನೆಬಾಯಿ ಕೋಡಿಯಲ್ಲಿ ವಿದ್ಯುತ್ ಕಂಬ್ ಸಮೀಪದ ಮತ್ತೊಂದು ವಿದ್ಯುತ್ ಕಂಬಕ್ಕೆ ತಾಗುತ್ತಿದೆ. ಇದರಿಂದ ಜನರು ಭಯಭೀತಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೂ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಜನರು ಗಂಭೀರ ಆರೋಪ ಮಾಡುತ್ತಿದ್ದಾರೆ. ವಿದ್ಯುತ್ ಕಂಬ …
Read More »ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ
ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದಲ್ಲಿ ನಡೆದಿದೆ. ಯಕ್ಸಂಬಾ- ಚಿಕ್ಕೋಡಿ ರಸ್ತೆಯ ಮದ್ಯ ಶವವಿಟ್ಟು ಭಜನೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಲಾಯಿತು. ಇಂದು ಬೆಳಗ್ಗೆ ಅನಾರೋಗ್ಯದಿಂದ ನಣದಿವಾಡಿ ಗ್ರಾಮದ ಸುಧಾಕರ ಮಹಾದೇವ ನಾಯಕ ಎಂಬುವವರು ಮೃತಪಟ್ಟಿದರು. ರುದ್ರಭೂಮಿಗೆ ಹೋಗುವ ದಾರಿ ವಿಚಾರಕ್ಕೆ ಸಂಬಂಧಸಿದಂತೆ ನಣದಿವಾಡಿ ಗ್ರಾಮದ ಯಕ್ಸಂಬಿ ಕುಟುಂಬವು ತಕರಾರು ತಗೆದಿತ್ತು. ಅಷ್ಟೇ ಅಲ್ಲದೇ ರುದ್ರಭೂಮಿಗೆ …
Read More »