ಕುಲಗೋಡ, ತಾ:ಮೂಡಲಗಿ : ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಪ್ರಸಿದ್ಧ ಬಲಭೀಮ ದೇವಸ್ಥಾನದ ದರ್ಶನ ಪಡೆದು ಮಾತನಾಡಿದ ಅವರು, ಎಲ್ಲ ಧರ್ಮ ಮತ್ತು ಜಾತಿಗಳನ್ನು ಒಗ್ಗೂಡಿಸಿ ಪರಸ್ಪರ ಸಹೋದರತ್ವವನ್ನು ಸಾರುತ್ತಿರುವ ಜಾತ್ಯಾತೀತ ದೇಶವಾಗಿದೆ ಎಂದು ಹೇಳಿದರು. ಕುಲಗೋಡ ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರದ ಹಲವಾರು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನ …
Read More »2ಡಿ ಮೀಸಲು ತಿರಸ್ಕರಿಸಿದ ಪಂಚಮಸಾಲಿಗಳು, 2ಎಗೆ ಪಟ್ಟು: ಸರ್ಕಾರಕ್ಕೆ 24 ಗಂಟೆಗಳ ಗಡುವು
ಬೆಳಗಾವಿ (ಜ.06): ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ 2ಡಿ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯ ತಿರಸ್ಕರಿಸಿದ್ದು, 2ಎ ಮೀಸಲಾತಿಗಾಗಿ ಮತ್ತೆ ಪಟ್ಟು ಹಿಡಿದಿದೆ. 2ಎ ಮೀಸಲಾತಿ ಘೋಷಿಸಲು ಸರ್ಕಾರಕ್ಕೆ 24 ಗಂಟೆಗಳ ಗಡುವನ್ನೂ ನೀಡಿರುವ ಸಮುದಾಯ, ಇಲ್ಲವಾದಲ್ಲಿ ಜ.13ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರ ಹಾವೇರಿಯ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ. ನಗರದ ಗಾಂಧಿಭವನದಲ್ಲಿ ಗುರುವಾರ 2ಡಿ ಪಂಚಮಸಾಲಿಗಳ ಹೋರಾಟಕ್ಕೆ ಸಿಕ್ಕ ನ್ಯಾಯವೋ? ಅನ್ಯಾಯವೋ? ಎಂಬ ಕುರಿತು ಚರ್ಚಿಸಲು ಕರೆಯಲಾಗಿದ್ದ …
Read More »ಸಿದ್ದರಾಮಯ್ಯ- ರಮೇಶ ಜಾರಕಿಹೊಳಿ ರಹಸ್ಯ ಸಭೆ: ಮೂಲ ಗೂಡಿಗೆ ಮರಳಲಿದ್ದಾರಾ ಪ್ರಭಾವಿ ಮುಖಂಡ?
ಬೆಂಗಳೂರು, : ರಾಜ್ಯ ರಾಜಕಾರಣವು ಹೊಸದೊಂದು ಸಂಚಲನಕ್ಕೆ ಅಣಿಯಾಗುತ್ತಿದೆ ಎಂಬ ಮಾತುಗಳು ಓಡಾಡುತ್ತಿವೆ. ಬೆಳಗಾವಿಯ ಪ್ರಭಾವಿ ರಾಜಕಾರಣಿ ರಮೇಶ ಜಾರಕಿಹೊಳಿ ತಮ್ಮ ಗುರು ಸಿದ್ದರಾಮಯ್ಯನವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು. ಆದರೆ, ಅವರಿಬ್ಬರ ನಡುವೆ ನಡೆದ ಮಾತುಕತೆಗಳೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲದ ಪ್ರಕಾರ, ರಮೇಶ ಜಾರಕಿಹೊಳಿ ಅವರು ಬಿಜೆಪಿಯ ನಾಯಕರೊಂದಿಗೆ ಮುನಿಸಿಕೊಂಡಿದ್ದಾರೆ. ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ ತಮಗೆ ಸಚಿವ ಸ್ಥಾನ ನೀಡಬೇಕೆಂದು …
Read More »2D ಮೀಸಲಾತಿ ತಿರಸ್ಕಾರ: ಸಿಎಂ ಬೊಮ್ಮಾಯಿಗೆ 24 ಗಂಟೆಗಳ ಅಂತಿಮ ಗಡುವು ನೀಡಿದ ಯತ್ನಾಳ್
ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರ ನೀಡಿರುವ 2D ಮೀಸಲಾತಿಯನ್ನು ತಿರಸ್ಕರಿಸಿರುವ ಪಂಚಮಸಾಲಿ ಸಮುದಾಯದ ನಾಯಕರು ತಮಗೆ 2A ಮೀಸಲಾತಿಯೇ ಬೇಕು ಎಂದು ಮತ್ತೊಮ್ಮೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಗುರುವಾರ ನಡೆದ ಸಮುದಾಯದ ನಾಯಕರ ಮಹತ್ವದ ಸಭೆ ನಡೆಸಿ ಚರ್ಚಿಸಿದರು. 2ಅ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ. ‘ಬಸವರಾಜ ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಈವರೆಗೂ ಹಾದಿ ತಪ್ಪಿಸುವ …
Read More »ಮನ್ನಿಕೇರಿ ಗ್ರಾಮದಲ್ಲಿ 2.15 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನೆರವೇರಿಸಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
*ಗೋಕಾಕ* : ಮನ್ನಿಕೇರಿ ಭಾಗದ ಪ್ರಸಿದ್ಧ ಆರಾಧ್ಯ ದೈವ ಮಹಾಂತಲಿಂಗೇಶ್ವರ ಮಠದಲ್ಲಿ ಸುಸಜ್ಜಿತವಾದ ಸಭಾ ಭವನವನ್ನು ನಿರ್ಮಿಸಲಾಗಿದ್ದು, ಮನ್ನಿಕೇರಿ ಮತ್ತು ಸುತ್ತಲಿನ ಸದ್ಭಕ್ತರು ಈ ಸಭಾ ಭವನವನ್ನು ಮದುವೆ ಹಾಗೂ ಇನ್ನೀತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಮಹಾಂತಲಿಂಗೇಶ್ವರ ಮಠದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಮಹಾಂತಲಿಂಗೇಶ್ವರ ಸಭಾ …
Read More »ಕೆಪಿಟಿಸಿಎಲ್ ಅಕ್ರಮ: ಮತ್ತೆ ಮೂವರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಬುಧವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈವರೆಗೆ ಬಂಧಿತರಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಗೋಕಾಕ ತಾಲ್ಲೂಕಿನ ಮಲ್ಲಾಪುರ ಪಿ.ಜಿ. ಗ್ರಾಮದ ಅಣ್ಣಪ್ಪ ಕೆಂಪಣ್ಣ ಮಾರವಾಡಿ(31), ಶಿವಾಪುರದ ಜಾನ್‌ರಾಬರ್ಟ್ ಯಶವಂತ ಬಂಗೆನ್ನವರ(26), ಮೂಡಲಗಿ ತಾಲ್ಲೂಕಿನ ರಾಜಾಪುರದ ಚಿದಾನಂದ ಚಿನ್ನಪ್ಪ ಮಾಡಲಗಿ(27) ಬಂಧಿತರು. ‘ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಬಳಸಿ, ಮೂವರು ಆರೋಪಿಗಳು ಪರೀಕ್ಷೆ ಬರೆದಿದ್ದರು. ಅವರಿಂದ ಅಕ್ರಮಕ್ಕೆ …
Read More »ಪಲ್ಸ ಪೊಲಿಯೋ ಮಾದರಿಯಲ್ಲಿ ಲಸಿಕಾ ಅಭಿಯಾನ ಯಶಸ್ಸಿಗೆ ಸೂಚನೆ:
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ ಜಿಲ್ಲೆಯಾದ್ಯಂತ ದಿನಾಂಕ: 05-01-2023 ರಿಂದ 31-01-2023ರವರೆಗೆ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಪಲ್ಸ್ ಪೋಲಿಯೋ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವಿ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಜ.4) ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು …
Read More »ಖಾನಾಪುರ ಗೊವಾ ಸಂಪಕ೯ ಕಲ್ಪಿಸುವ ರಸ್ತೆಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಆಕ್ರೋಶ
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಿಂದ ಪಾರಿಶ್ವಾಡ ಖಾನಾಪುರ ಗೊವಾ ಸಂಪಕ೯ ಕಲ್ಪಿಸುವ ಲೊಕೂಪಯೂಗಿ ಇಲಾಖೆಗೆ ಬರುವ ರಸ್ತೆ ಮಂಜೂರಾಗಿದ್ದು ಎಂಜಿನಿಯರ್ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಯಾವುದೇ ಮುನ್ಸೂಚನೆ ಫಲಕ ಇಲ್ಲದೆ ತುಂಬಾ ತಗ್ಗು ಗುಂಡಿಗಳಿಂದ ತುಂಬಿದ್ದು ವಾಹನ ಸವಾರರು ಹಾಗೂ ರೈತರು ಕಾಖಾ೯ನೆಗೆ ಕಬ್ಬು ತುಂಬಿದ ವಾಹನಗಳನ್ನು ಸಾಗಿಸಲು ಕೈಯಲ್ಲಿ ಜೀವ ಹಿಡಿದು ಹರ ಸಾಹಸ ಪಡಬೇಕಾಗಿದೆ. ವಾಹನ ಸವಾರರು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ …
Read More »ಶ್ರೀಗಳ ಆರೋಗ್ಯ ಕ್ಷೇಮ ವಿಚಾರ ತಿಳಿಯಲು ಸಿಎಂ ಸಿದ್ದರಾಮಯ್ಯ ಭೇಟಿ
ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಭೇಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಶ್ರೀಗಳಿರುವ ಕೊಠಡಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಇವರು ಶ್ರೀಗಳ ಆರೋಗ್ಯ ಕ್ಷೇಮ ವಿಚಾರ ತಿಳಿಯಲು ವೈದ್ಯರ ಭೇಟಿ ಮಾಡಿದರು. ಬಳಿಕ ಮಾತನಾಡಿ ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ, ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ, ಅವರು ಮಹಾಸಂತರು ಧಾರ್ಮಿಕವಾಗಿ ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ ಎಂದರು. ಪ್ರವಚನದ ಮೂಲಕ ಧಾರ್ಮಿಕ ಭಾವನೆ ಮೂಡಿಸಿದ್ದಾರೆ, …
Read More »ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಡೆದುಕೊಂಡು ಹೋಗುವಾಗ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗೆ ವ್ಯಾಪಕ ಟೀಕೆ
ಕಿತ್ತೂರು ತಾಲೂಕಿನ ಶಿವನೂರು ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಡೆದುಕೊಂಡು ಹೋಗುವಾಗ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೃತ ವಿದ್ಯಾರ್ಥಿನಿ ಅಕ್ಷತಾ ಹೂಲಿಕಟ್ಟಿ ಮೃತದೇಹ ಶಿವನೂರು ತಲುಪುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರಕ್ಕೆ ಹಿಡಿಶಾಪ ಹಾಕಿ ನೂರಾರು ಮಹಿಳೆಯರು ಕಣ್ಣೀರುಡುತ್ತಿರುವ ದೃಶ್ಯ ಎಲ್ಲರು ಕರುಳು ಚುರ್ ಎನ್ನುವಂತಿತ್ತು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಹಾಗೂ ಶಿವನೂರು ಗ್ರಾಮಕ್ಕೆ …
Read More »