Breaking News

ದಾವಣಗೆರೆ

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​​ನಿಂದ ಮನೆಗೆ ಹೊತ್ತಿಕೊಂಡ ಬೆಂಕಿ

ದಾವಣಗೆರೆ: ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿ ತಾಯಿ‌ – ಮಗ ಮೃತಪಟ್ಟಿರುವ ದಾರುಣ ಘಟನೆ ನಗರದ ಕಾಯಿಪೇಟೆಯಲ್ಲಿ ನಡೆದಿದೆ. ಬೆಂಕಿಯಿಂದ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ವಿಮಲಾ (75) ಮತ್ತು ಅವರ ಪುತ್ರ ಕುಮಾರ್ (35) ಪ್ರಾಣ ಕಳೆದುಕೊಂಡ ದುರ್ದೈವಿಗಳು. ಮೃತರು ಬಿಜೆಪಿ ಮುಖಂಡ‌ ರುದ್ರಮುನಿಸ್ವಾಮಿ ಅವರ ಸಂಬಂಧಿಗಳಾಗಿದ್ದಾರೆ. ತಡರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿವೆ. ಇದರಿಂದ ದಟ್ಟ ಹೊಗೆ ಆವರಿಸಿದೆ. ಮನೆಯಲ್ಲಿದ್ದ 6 ಮಂದಿಯ …

Read More »

ಸಿಸೇರಿಯನ್ ಹೆರಿಗೆಯಾದ ಎರಡೇ ದಿನಕ್ಕೆ ಬಾಣಂತಿ ಸಾವು

ದಾವಣಗೆರೆ: ಸಿಸೇರಿಯನ್​ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ದುರ್ಗಮ್ಮ (21) ಎಂಬವರೇ ಮೃತ ಬಾಣಂತಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣ ಹತ್ತಿರದ ಹರಪನಹಳ್ಳಿ …

Read More »

ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ ಖದಿಮರು ಪೊಲೀಸರ ವಶಕ್ಕೆ.

ದಾವಣಗೆರೆ: ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬವರ ಹಣಕಾಸಿನ ಸಮಸ್ಯೆ ಅರಿತು ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೋಗಿದ್ದರು. ಸಂಜೆ 4 ರಿಂದ 6 ಗಂಟೆ ವೇಳೆಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಪೂಜೆ ವೇಳೆ ಚಿನ್ನಾಭರಣ ಹಾಗೂ ನಗದು ಇಡುವಂತೆ ಹೇಳಿದ್ದರು. ಅವರು ಹೇಳಿದಂತೆ ಶಶಿಕಲಾ ಹಾಗೂ ಆಕೆಯ ಕುಟುಂಬಸ್ಥರು ಪೂಜೆ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಿದ್ದರು. ಈ ವೇಳೆ …

Read More »

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಗಳಿಗಿಲ್ಲ ಉದ್ಘಾಟನೆ ‘ಭಾಗ್ಯ’

ದಾವಣಗೆರೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗ ಹಾಗೂ ತುರ್ತು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಅಂದಾಜು ₹ 35 ಕೋಟಿ ವೆಚ್ಚದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿ 2021ರಲ್ಲಿ ಆರಂಭವಾಗಿತ್ತು. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ …

Read More »

ಳ್ಳರಿಂದ ತರಕಾರಿ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತ‌!

ದಾವಣಗೆರೆ: ಇದೀಗ ಟೊಮೆಟೊ ತರಕಾರಿಗಳಲ್ಲೇ ರಾಜ ಎನ್ನಿಸಿಕೊಳ್ಳುವ ಪರಿಸ್ಥಿತಿ ಇದೆ. ಏಕೆಂದರೆ ಬೆಲೆ ಗಗನಕ್ಕೇರಿದೆ. ಇನ್ನೊಂದೆಡೆ, ರೈತರು ಬೆಳೆ ಬೆಳೆಯುತ್ತಿರುವ ಜಮೀನುಗಳಲ್ಲೇ ಮೊಕ್ಕಾಂ ಹೂಡುವಂತಾಗಿದೆ. ಕಳ್ಳರ ಕಾಟದಿಂದ ಬೇಸತ್ತಿರುವ ಅವರಿಗೆ ಟೊಮೆಟೊ ರಕ್ಷಣೆ ಮಾಡುವುದು ತಲೆನೋವಾಗಿ ಪರಿಣಮಿಸಿದೆ. ದಾವಣಗೆರೆಯ ರೈತರು ಎರಡು ನಾಯಿಗಳೊಂದಿಗೆ ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ. ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯುತ್ತಾರೆ. ಸುತ್ತಮುತ್ತಲ ಗ್ರಾಮದ‌ ಜಮೀನುಗಳಲ್ಲಿ ಬೆಳೆಯುವ ತರಕಾರಿ ವಿದೇಶಗಳಿಗೂ ರಫ್ತಾಗುತ್ತದೆ. ಈಗಂತೂ ಟೊಮೆಟೊಗೆ ಬೆಲೆ ಕೇಳುವಂತಿಲ್ಲ. ಪ್ರತಿ …

Read More »

ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ.:ರೇಣುಕಾಚಾರ್ಯ

ದಾವಣಗೆರೆ : ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನೋಟಿಸ್​ಗೆ ನಾನು ಉತ್ತರ ಕೊಡಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಹಮ್ಮಿಕೊಂಡಿದ್ದ ಸಂಸದ ಜಿಎಂ ಸಿದ್ದೇಶ್ವರ್​ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಶಿಸ್ತು ಸಮಿತಿಯಿಂದ ನೀಡಿರುವ ನೋಟಿಸ್​​ಗೆ ಯಾವುದೇ ಉತ್ತರ ಕೊಡಲ್ಲ. ನೋಟಿಸ್​​ಗೆ ನಾನೇಕೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು. ನಾನು ಏನು ಹೇಳಬೇಕೋ ಅದನ್ನೇ ಹೇಳಿದ್ದೇನೆ. …

Read More »

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ: ಮದ್ಯಪಾನ ವ್ಯಸನಿಯಾಗಿದ್ದ ಪತಿರಾಯನೊಬ್ಬ ತನ್ನ ಪತ್ನಿ ಲೈಂಗಿಕ ಕ್ರಿಯೆಗೆ ಸಹಕಾರ ಮಾಡಿಲ್ಲ ಎಂದು ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.   19/02/20ರಂದು ದಾವಣಗೆರೆ ಜಿಲ್ಲೆಯ ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಮರಿಯಪ್ಪ(54) ಶಿಕ್ಷೆಗೊಳಗಾದ ಆರೋಪಿ. ಸೌಭಾಗ್ಯಮ್ಮ ಕೊಲೆಯಾದ ಪತ್ನಿ. ಆರೋಪಿ ಮರಿಯಪ್ಪ ಕುಡಿದು ಬಂದು ಮನೆಯಲ್ಲಿ ಹೆಂಡತಿ ಸೌಭಾಗ್ಯಮ್ಮ ಜೊತೆ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊದಲಿಗೆ ಕ್ಯಾತೆ …

Read More »

ಲಂಚ ಪಡೆಯುತ್ತಿದ್ದ ಹರಿಹರ ನಗರಸಭೆ ಸದಸ್ಯೆ ಲೋಕಾಯುಕ್ತ ಬಲೆಗೆ

ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ನಗರಸಭೆ ಸದಸ್ಯೆ ನಾಗರತ್ನ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.   ದಾವಣಗೆರೆ ಜಿಲ್ಲೆಯ ಹರಹರ ನಗರಸಭೆ ಕಾಂಗ್ರೆಸ್ ಸದಸ್ಯೆ ನಾಗರತ್ನ ಜತೆಗೆ ಅವರ ಪತಿ ಮಂಜುನಾಥ, ಪುತ್ರ ರೇವಂತ ಸೇರಿ ಗುತ್ತಿಗೆದಾರ ಮಜೀದ್ ಎಂಬುವರಿಂದ ಲಂಚ ಸ್ವೀಕರಿಸುವ ವೇಳೆ ದಾವಣಗೆರೆ ಲೋಕಾಯುಕ್ತ ಎಸ್​ಪಿ ಎಂ.ಎಸ್ ಕೌಲಾಪುರೆ …

Read More »

ನ್ಯಾಯಾಲಯದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ

ದಾವಣಗೆರೆ: ಪೋಕ್ಸೋ ಕೇಸ್ ಆರೋಪಿಯಿಂದ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಮಕ್ಕಳ ಸ್ನೇಹಿ ನ್ಯಾಯಾಲಯದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರೇಖಾ ಕೋಟೆಗೌಡರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಮಕ್ಕಳ ಸ್ನೇಹಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ. ಕೌಟುಂಬಿಕ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿದ್ದ ರೇಖಾ ಕೋಟೆಗೌಡರ್ ಪೋಕ್ಸೋ ಪ್ರಕರಣದ ಆರೋಪಿಯಿಂದ ಲಂಚ ಪಡೆಯುತ್ತಿದ್ದರು. ಮಧುಸೂಧನ್ ಕಿತ್ತೂರ್ ಎಂಬುವವರು ನೀಡಿದ ದೂರಿನ …

Read More »

ಮರಾಠಿಗರಿಗೆ ಒಂದಂಗುಲ ನೆಲ ಬಿಟ್ಟುಕೊಡುವುದಿಲ್ಲ; ಇದು ಕನ್ನಡಿಗರ ಶಪಥ: ಡಾ.ದೊಡ್ಡರಂಗೇಗೌಡ

ದಾವಣಗೆರೆ (ಜ.6) : ಕನ್ನಡ ಮಧುರ ಹಾಗೂ ಕನ್ನಡ ಮಾನವೀಯ ನೆಲೆಯುಳ್ಳ ಭಾಷೆ. ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರವನ್ನು ಕನ್ನಡದಲ್ಲಿ ಹೇಳಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ತಿಳಿಸಿದರು.   ಹಾವೇರಿ(Haveri)ಯಲ್ಲಿ ಆರಂಭವಾಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahitya sammelana)ದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಹಾವೇರಿಗೆ ಹೋಗುವ ಮಾರ್ಗದಲ್ಲಿ ದಾವಣಗೆರೆಯ ಕುವೆಂಪು ಕನ್ನಡ ಭವನ(Kuvempu kannada Bhavana)ಕ್ಕೆ ಗುರುವಾರ ಆಗಮಿಸಿ ಜಿಲ್ಲಾ ಕನ್ನಡ …

Read More »