Breaking News

ರಾಷ್ಟ್ರೀಯ

ಚಾಕೊಲೇಟ್ ಕೊಡ್ತೀನೆಂದು ಪುಸಲಾಯಿಸಿ ರೇಪ್ & ಕಿಡ್ನಾಪ್; ಅಪರಾಧಿಗೆ 10 ವರ್ಷ ಜೈಲು

ಬೆಂಗಳೂರು: ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗು ಒಂದನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಆನೇಕಲ್ ತಾಲೂಕಿನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಅವರು 10 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದ್ದಾರೆ. ಲೋಕನಾಥ್ ಬಹದ್ದೂರ್ ಜೈಲು ಶಿಕ್ಷೆಗೆ ಒಳಗಾದ ಅಪರಾಧಿ. ಏನಿದು ಪ್ರಕರಣ..? ನೇಪಾಳಿ ಮೂಲದವನಾದ ಲೋಕನಾಥ್ ಬಹದ್ದೂರ್ 2017ರಲ್ಲಿ ಮಗುವನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿದ್ದ. ಅತ್ತಿಬೆಲೆಯಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡ್ತಿದ್ದ ಈತ, ಮನೆ ಎದುರು …

Read More »

ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು

ನವದೆಹಲಿ: ಇತ್ತೀಚೆಗೆ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿಗೂ ಸರ್ಕಾರ ಬುಲ್ಡೋಜರ್ ಶಾಕ್ ನೀಡಿದ್ದು, ದೆಹಲಿಯಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಒಡೆದು ಹಾಕಲು ನಗರ ಪಾಲಿಕೆ ಆದೇಶ ನೀಡಿದೆ. ಹನುಮ ಜಯಂತಿಯಂದು ದೆಹಲಿಯಲ್ಲಿ ನಡೆದ ಜಹಾಂಗೀರ್‌ಪುರಿ ಹಿಂಸಾಚಾರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಉತ್ತರ ಮಹಾನಗರ ಪಾಲಿಕೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮನವಿಯಲ್ಲಿ ಏ.20 ಮತ್ತು 21ರಂದು …

Read More »

ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ , ಕಿರುಕುಳ

ಮುಂಬೈ: ಅಣ್ಣ, ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ಅಜ್ಜ ಹಾಗೂ ಚಿಕ್ಕಪ್ಪ ಕಳೆದ 5 ವರ್ಷಗಳಿಂದ ಕಿರುಕುಳ ನೀಡಿದ ಘಟನೆ ಪುಣೆದಲ್ಲಿ ನಡೆದಿದೆ. 11 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಸಹೋದರ, ಸಂತ್ರಸ್ತೆಯ ತಂದೆ (45) ಪ್ರತ್ಯೇಕವಾಗಿ ಅತ್ಯಾಚಾರವೆಸಗಿದ್ದಾರೆ. ಇದರ ಜೊತೆಗೆ ಆಕೆಯ ಅಜ್ಜ(60) ಹಾಗೂ ಚಿಕ್ಕಪ್ಪ (25) ಕಳೆದ 5 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಮೂಲತಃ ಬಿಹಾರದವರಾಗಿದ್ದು, ಸದ್ಯ ಪುಣೆಯಲ್ಲಿ …

Read More »

ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ನೀವು ಸಿದ್ಧ ಇದ್ದೀರಾ? ‘

ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭಾದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ನಡುವೆ ಸರಣಿ ಟ್ವೀಟ್ ಸಮರ ಈಗ ತಾರಕಕ್ಕೇರಿದೆ.ಈಗ ಕುಮಾರಸ್ವಾಮಿ ಅವರ ಸರಣಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ ‘ನಿತ್ಯ ನನ್ನ ವಿರುದ್ಧ ನಿತ್ಯ ನನ್ನ ವಿರುದ್ದ ನಂಜುಕಾರುತ್ತಿರುವ ಹೆಚ್.ಡಿ. ಕುಮಾರಸ್ವಾಮಿಯವರೇ ನೀವೆಲ್ಲಿ ನಿಂತಿದ್ದೀರಿ? ಎಂದು ಮೊದಲು ಹೇಳಿ’ ಎಂದು ಪ್ರಶ್ನಿಸಿದ್ದಾರೆ. ‘ದೇಶದಲ್ಲಿ ಇಂದು ನಡೆಯುತ್ತಿರುವ ಜಾತ್ಯತೀತತೆ ಮತ್ತು ಕೋಮುವಾದದ ನಡುವಿನ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಜನತೆಗೆ …

Read More »

ಮನೆಯಲ್ಲಿದ್ದ ಕಪಾಟು ಒಡೆದು ಚಿನ್ನಾಭರಣ ಸಹಿತ ನಗದು ಹಣ ಕಳ್ಳತನ

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಮುರಿದು ಕಳ್ಳರು ನುಗ್ಗಿ ಮನೆಯಲ್ಲಿದ್ದ ಕಪಾಟು ಒಡೆದು ಚಿನ್ನಾಭರಣ ಸಹಿತ ನಗದು ಹಣ ಕಳ್ಳತನ ಮಾಡಿದ ಘಟನೆ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕಕ್ಕಿಂಜೆ ಸಮೀಪದ ಕತ್ತರಿಗುಡ್ಡೆಯಲ್ಲಿ ನಡೆದಿದೆ.   ಇಲ್ಲಿನ ನಿವಾಸಿ ಇಕ್ಬಾಲ್ ಎಂಬವರಿಗೆ ಸೇರಿದ ಮನೆಯಲ್ಲಿ ಅವರ ತಂಗಿ ಝರಿನಾ ಮತ್ತು ಇಬ್ಬರು ಮಕ್ಕಳು ಮಾತ್ರ ವಾಸವಾಗಿದ್ದು, ಗಂಡ ಇಸ್ಮಾಯಿಲ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಝರಿನಾ ಮತ್ತು ಮಕ್ಕಳು ಮೂರು …

Read More »

DK ಬ್ಯಾಟಿಂಗ್ ನೋಡಿದ್ರೆ, ನಾನು ಮತ್ತೆ ಕ್ರಿಕೆಟ್ ಆಡ್ಬೇಕು ಅನ್ನಿಸ್ತಿದೆ..! A.B.D.

ನಾನು ದಿನೇಶ್ ಕಾರ್ತಿಕ್ ಅವರನ್ನು ಕೊನೆಯ ಬಾರಿಗೆ ನೋಡಿದಾಗ ಯುಕೆಯಲ್ಲಿ ಕಾಮೆಂಟ್ರಿ ಮಾಡುತ್ತಿದ್ದರು. ಆಗ ನಾನು ಅವರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ ಎಂದು ಭಾವಿಸಿದ್ದೆ.IPL 2022: ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್​ಗೆ ಒಂದು ಜೋಕ್ ಹೇಳುವಂತೆ ಕೇಳಲಾಗಿತ್ತು…ಡಿಕೆ ಹೇಳಿದ ಜೋಕ್- ಎಬಿ ಡಿವಿಲಿಯರ್ಸ್ ಈ ಸಲ RCB ಯಲ್ಲಿ ಆಡ್ತಿಲ್ಲ. ಇದರಲ್ಲೇನು ತಮಾಷೆಯಿದೆ ಎಂದು ನೀವಂದುಕೊಂಡರೆ, ದಿನೇಶ್ ಕಾರ್ತಿಕ್ ಹಾಗೆ ಹೇಳಲು ಮುಖ್ಯ ಕಾರಣ, ಒಬ್ಬ ಆಟಗಾರ ಅತ್ಯುತ್ತಮವಾಗಿ ಆಡುತ್ತಿದ್ದರೂ …

Read More »

ಕೊರೊನಾ ನಾಲ್ಕನೇ ಭೀತಿಯಿಂದ ಖಾಸಗಿ ಶಾಲೆಗಳ ಪ್ರವೇಶಾತಿ 30%ರಷ್ಟು ಕುಸಿತ

ಬೆಂಗಳೂರು, ಏಪ್ರಿಲ್ 19 : ದೇಶದಲ್ಲಿ ಮತ್ತೆ ಕೊರೊನಾ ನಾಲ್ಕನೇ ಭೀತಿ ಶುರುವಾಗಿದ್ದು, ಈಗಾಗಲೇ ದೆಹಲಿ, ಉತ್ತರ ಪ್ರದೇಶ, ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲೂ ಕೊರೊನಾ ನಾಲ್ಕನೇ ಅಲೆ ಬರಬಹುದು ಎಂಬ ಭೀತಿ ಇರುವುದರಿಂದ ಪೋಷಕರು ಮಕ್ಕಳನ್ನ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನ ದಾಖಲಿಸಿಕೊಳ್ಳಲು ಖಾಸಗಿ ಶಾಲೆಗಳು ಹೆಣಗಾಡುತ್ತಿವೆ. ಸಾರ್ವಜನಿಕ ಶಿಕ್ಷಣ …

Read More »

ವೇಗವೂ ಇಲ್ಲ, ಸಮಯಪಾಲನೆಯೂ ಇಲ್ಲ…

ಭಾರತೀಯ ರೈಲ್ವೆಯು 15 ನಿಮಿಷಗಳ ಸಮಯ ಪಾಲನೆ ಮಾನದಂಡವನ್ನು ಹೊಂದಿದೆ. ಅಂದರೆ ರೈಲು ತನ್ನ ಗಮ್ಯ ಸ್ಥಳವನ್ನು ನಿಗದಿತ ಸಮಯಕ್ಕಿಂತ 15 ನಿಮಿಷ ವಿಳಂಬವಾಗಿ ತಲುಪಿದರೂ ಅದು ಸರಿಯಾದ ಸಮಯಕ್ಕೆ ಆಗಮಿಸಿದೆ ಎಂದು ಪರಿಗಣಿಸಲಾಗುತ್ತದೆ. ಹೀಗಿದ್ದರೂ ಕೇವಲ ಶೇ.69.23ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ತಮ್ಮ ಗಮ್ಯವನ್ನು ತಲುಪಿವೆ ಮತ್ತು ಈ ಪ್ರವೃತ್ತಿಯು ಕುಸಿಯುತ್ತಲೇ ಇದೆ. 2008-09ರಲ್ಲಿ ಸರಾಸರಿ ಸುಮಾರು ಶೇ.69ರಷ್ಟು ಎಕ್ಸ್‌ಪ್ರೆಸ್ ರೈಲುಗಳು ಸಮಯ ಪಾಲನೆಯನ್ನು ಹೊಂದಿದ್ದು,2013-14ರಲ್ಲಿ ಅದು ಶೇ.83ಕ್ಕೆ …

Read More »

ಸಂತ್ರಸ್ತರಿಗೆ ಕೆಎಸ್​ಆರ್​ಟಿಸಿ ಸಂಸ್ಥೆ ಪರಿಹಾರ ನೀಡಿ, ಸೀಜ್ ಆಗಿದ್ದ ಬಸ್​ ಮರಳಿ ವಶಕ್ಕೆ ಪಡೆದುಕೊಂಡಿದೆ.

ಸಾಂಗ್ಲಿ (ಮಹಾರಾಷ್ಟ್ರ): 2015ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಬಸ್​​ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಸಂಸ್ಥೆ ಬಸ್​​ ಜಪ್ತಿ ಮಾಡಿ, ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಬಸ್ ಹಸ್ತಾಂತರ ಮಾಡಲಾಗಿತ್ತು. ಆದ್ರೆ ಸಂತ್ರಸ್ತರಿಗೆ ಇಂದು ಕೆಎಸ್​ಆರ್​ಟಿಸಿ ಪರಿಹಾರ ನೀಡಿ ಮರಳಿ ಬಸ್ ಪಡೆದುಕೊಂಡಿದೆ. ಪ್ರಕರಣದ ವಿವರ: 2015ರಲ್ಲಿ ಮೀರಜ್​​ನಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ ಡಿಕ್ಕಿ ಹೊಡೆದು ಭಾನುದಾಸ್ ಬೋಸಲೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತಮಗೆ ಪರಿಹಾರ ನೀಡುವಂತೆ ಬೋಸಲೆ ಕುಟುಂಬ ಸಾಂಗ್ಲಿ ನ್ಯಾಯಾಲಯದಲ್ಲಿ ದಾವೆ …

Read More »

ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಸುಲಭ.

ಕರೊನಾ ಕಾರಣಕ್ಕೆ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿತ್ತು. ಈ ವರ್ಷ ಪರೀಕ್ಷೆ ನಡೆಸುತ್ತಿದ್ದರೂ ಉತ್ತೀರ್ಣರಾಗುವುದು ಅಷ್ಟೇನು ಕಷ್ಟವಲ್ಲ. ಏಕೆಂದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸುಲಭ ಮಾದರಿಯಲ್ಲಿ ಪೂರ್ವಶಿಕ್ಷಣ ಇಲಾಖೆ ಪ್ರಶ್ನೆಗಳನ್ನು ರೂಪಿಸುತ್ತಿದೆ. ಕೋವಿಡ್​ನಿಂದಾಗಿ ಈ ಬಾರಿ ಕಡಿಮೆ ಶೈಕ್ಷಣಿಕ ದಿನಗಳು ಲಭ್ಯವಾದ ಹಿನ್ನೆಲೆಯಲ್ಲಿ ಹಾಗೂ ಕಳೆದ ವರ್ಷ ಪಿಯು ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಸುಲಭ ವಿಧಾನದಲ್ಲಿ ಪಾಸ್ ಆಗುವ …

Read More »