Breaking News

ರಾಷ್ಟ್ರೀಯ

ಮೂಡಲಗಿ: ಕಲ್ಮೇಶ್ವರಬೋಧ ಸ್ವಾಮಿ ಜಯಂತಿ

ಮೂಡಲಗಿ: ಮೂಡಲಗಿಯ ಶಿವಬೋಧರಂಗ ಮಠದ ಪವಾಡ ಪುರುಷ, ವಾಕ್ಸಿದ್ಧಿಪುರುಷ ಕಲ್ಮೇಶ್ವರಬೋಧ ಸ್ವಾಮಿಗಳ 119ನೇ ಜಯಂತಿಯನ್ನು ಭಾನುವಾರ ಕಲ್ಮೇಶ್ವರ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸಂಭ್ರಮದಿಂದ ಆಚರಿಸಿದರು. ಕಲ್ಮೇಶ್ವರಬೋಧ ಸ್ವಾಮಿಗಳ ಅಶ್ವಾರೂಢ ಮೂರ್ತಿಗೆ ಶ್ರೀರಂಗ ಜೋಶಿ ಮತ್ತು ಪಂಚಯ್ಯ ಹಿರೇಮಠ ಅವರು ಪೂಜೆ ನೆರವೇರಿಸಿದರು. ಕಲ್ಮೇಶ್ವರ ವೃತ್ತವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗಾರಗೊಳಿಸಿದ್ದರು. ಕಲ್ಮೇಶ್ವರಬೋಧ ಸ್ವಾಮೀಜಿಯವರಿಗೆ ಸೇರಿದ ಅಪಾರ ಭಕ್ತವೃಂದವು ಒಕ್ಕೊರಲಿನಿಂದ ಜಯಘೋಷಗಳನ್ನು ಹಾಕಿದರು. ಪುರಸಭೆ ಸದಸ್ಯರು, ಮುಖಂಡರು, ಕಲ್ಮೇಶ್ವರಬೋಧ ಮೂರ್ತಿ ಪ್ರತಿಷ್ಠಾನ …

Read More »

ಅಜ್ಜನ ಜಾತ್ರೆ: ನಾಲ್ಕೂವರೆ ಲಕ್ಷ ಭಕ್ತರಿಗೆ ದಾಸೋಹದಲ್ಲಿ ಮಿರ್ಚಿ ಸೇವೆ

ಕೊಪ್ಪಳ: ಇಲ್ಲಿನ ಗವಿಮಠದ ಜಾತ್ರೆಯ ಮಹಾದಾಸೋಹದಲ್ಲಿ ಎರಡನೇ ದಿನವಾದ ಭಾನುವಾರ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಮಿರ್ಚಿ ಸೇವಾ ಬಳಗ ಆರಂಭಿಸಿದ್ದು ಈ ಬಾರಿ ಸೇವಾ ಕಾರ್ಯದಲ್ಲಿ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.   ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಮಿರ್ಚಿ ಉಣಬಡಿಸಿದರು. ಬೆಳಗಿನ ಜಾವವೇ ಆರಂಭವಾಗಿದ್ದು 400 ಬಾಣಸಿಗರು ಈ ಕಾರ್ಯದಲ್ಲಿ ಭಾಗಿಯಸದರು. ಮಿರ್ಚಿ ರುಚಿಗೆ ಮನಸೋತ …

Read More »

ಪಟಾಕಿ ಗೋಡೌನ್​​ನಲ್ಲಿ ಬ್ಲಾಸ್ಟ್; 3 ಸಾವು,

ಮಂಗಳೂರು: ಪಟಾಕಿ ಗೋಡೌನ್ ಬ್ಲಾಸ್ಟ್‌ ಆಗಿ ಮೂವರು ಮೃತಪಟ್ಟಿದ್ದಾರೆ. ಮಂಗಳೂರಿನ ಬೆಳ್ತಂಗಡಿ ತಾಲೂಕಿನ ವೇಣೂರಿನ ಗೋಳಿಯಂಗಡಿಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಸಾಲಿಡ್ ಫೈರ್‌ವರ್ಕ್ ಎಂಬ ಗೋಡೌನ್‌ನಲ್ಲಿ ಈ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಕೇರಳದ ಸ್ವಾಮಿ (55) , ಕೇರಳದ ವರ್ಗಿಸ್ (68), ಹಾಸದ ಅರಸಿಕೆರೆ ನಿವಾಸಿ ಚೇತನ್ (25) ಎಂದು ಗುರುತಿಸಲಾಗಿದೆ. ಸ್ಪೋಟದ ತೀವ್ರತೆಗೆ ಕಾರ್ಮಿಕರ ಮೃತದೇಹಗಳು ಛಿದ್ರ …

Read More »

ಕೇಂದ್ರದತ್ತ ಬೆರಳು ತೋರದೆ ಪರಿಹಾರ ಬಿಡುಗಡೆ ಮಾಡಲಿ: ಬಿ.ವೈ.ವಿಜಯೇಂದ್ರ

ರಾಯಚೂರು: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡದೆ ಮೊದಲು ರೈತರಿಗೆ ಬರ ಪರಿಹಾರ ನೀಡಲಿ. ಹಿಂದೆ ಬಿ.ಎಸ್.ಯಡಿಯೂರಪ್ಪ ಕೆಂದ್ರದ ಅನುದಾನಕ್ಕೆ ಕಾಯದೆ ಬರಪರಿಹಾರ ಕೊಟ್ಟಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ನವರು ಯಾಕೆ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. ನೀವು ಕೊಡಬೇಕಾದ ಪರಿಹಾರವನ್ನು ಮೊದಲು ಕೊಡಿ. ದೇಶದಲ್ಲಿ ಅನೇಕ ರಾಜ್ಯಗಳಿವೆ. ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಮಾಡಿ …

Read More »

ನಿತೀಶ್ ಕುಮಾರ್ ಮೈತ್ರಿ ತೊರೆಯುತ್ತಾರೆಂದು 5 ದಿನಗಳ ಹಿಂದೆಯೇ ಗೊತ್ತಾಗಿತ್ತು: ಖರ್ಗೆ

ಕಲಬುರಗಿ: ಬಿಹಾರದಲ್ಲಿ ಐದು ದಿನಗಳ ಹಿಂದೆಯೇ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದಿಂದ ಹೊರ ಬಂದು ಮೈತ್ರಿ ತೊರೆಯುತ್ತಾರೆಂದು ತಿಳಿದಿತ್ತು ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಇಲ್ಲಿಂದ ಡೆಹ್ರಾಡೂನ್ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರೇ ತಮಗೆ ಫೋನ್ ಮಾಡಿ ಮೈತ್ರಿ ತೊರೆಯುವ ಬಗ್ಗೆ ಮಾಹಿತಿ ತಿಳಿಸಿದ್ದರು. ಆಗ ಪಕ್ಷಗಳ ಬಲಾಬಲ ಬಗ್ಗೆ ಸ್ಪಷ್ಟ ಮಾಹಿತಿ …

Read More »

ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿಸಿದ್ದ ಮಗ, ಸೊಸೆ ಅರೆಸ್ಟ್

ಬಾಗಲಕೋಟೆ, ಜನವರಿ : ಆಸ್ತಿಗಾಗಿ (Property) ಸುಪಾರಿ ಕೊಟ್ಟು ಅಪ್ಪನನ್ನೇ ಮಗಕೊಲೆಮಾಡಿಸಿದ್ದಾನೆ. ಚೆನ್ನಪ್ಪ (66) ಕೊಲೆಯಾದ ತಂದೆ. ಚನ್ನಬಸಪ್ಪ ಕೊಲೆ‌ ಮಾಡಿಸಿದ‌ ಮಗ. ಮಾಂತೇಶ್ ಮರಡಿಮಠ ಕೊಲೆ‌ ಮಾಡಿದ ಆರೋಪಿ. ಚೆನ್ನಪ್ಪನ ಕುಟುಂಬ ಬಾಗಲಕೋಟೆ (Bagalkot) ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ವಾಸಿಸುತ್ತಿತ್ತು. 37 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಪದೆ ಪದೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚನ್ನಬಸಪ್ಪ, ಪತ್ನಿ ಶಿವಬಸವ್ವ ಮತ್ತು ಚನ್ನಬಸಪ್ಪನ ಆಪ್ತ …

Read More »

ಬಾರ್​​ನಲ್ಲಿ ಶುರುವಾದ ಗೆಳೆಯರ ಗಲಾಟೆ ಮನೆ ಮುಂದೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಜನವರಿ 28: ಸ್ನೇಹಿತರ ಮಧ್ಯೆ ಶುರುವಾದ ಗಲಾಟೆಕೊಲೆಯಲ್ಲಿ ಅಂತ್ಯ ಕಂಡಿದೆ. ದರ್ಶನ್ ಕೊಲೆಯಾದ ದುರ್ದೈವಿ. ಚಂದ್ರಶೇಖರ್ ಅಲಿಯಾಸ್​​ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಕೊಲೆ ಮಾಡಿದ ಆರೋಪಿಗಳು. ಸುಬ್ರಹ್ಮಣ್ಯಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗದರೆ ದರ್ಶನ್ ಕೊಲೆಗೆ ಕಾರಣ ಏನು? ಜನವರಿ 24 ರಂದು ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಕೊಡಲು 3 ಸಾವಿರ ಹಣವನ್ನು ದರ್ಶನಗೆ ನೀಡಿದ್ದಳು. ಇದೇ ಹಣವನ್ನು ತೆಗೊಂಡು …

Read More »

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಮಿರ್ಚಿ ದಾಸೋಹ- ಸಿದ್ದವಾಗುತ್ತಿವೆ ಲಕ್ಷ ಲಕ್ಷ ಮಿರ್ಚಿ

ಕೊಪ್ಪಳ, ಜನವರಿ 28: ಉತ್ತರ ಕರ್ನಾಟಕ (North Karnataka) ಭಾಗದ ಸುಪ್ರಸಿದ್ಧ ತಿನಿಸು ಅಂದರೇ ಅದು ಮಿರ್ಚಿ. ಮುಂಜಾನೆ ಉಪಹಾರವಿರಲಿ, ಮಧ್ಯಾಹ್ನ ಊಟವಿರಲಿ ಮಿರ್ಚಿ (Mirchi) ನೀಡಿದರೇ ಯಾರು ಬೇಡ ಅನ್ನುವುದಿಲ್ಲ. ಜಾತ್ರೆಗೆ (Fair) ಬಂದ ಲಕ್ಷಾಂತರ ಮಂದಿಗೆ ಇಂದು (ಜ.28) ಇಡೀ ದಿನ ಊಟದಲ್ಲಿ ಬೇಕಾದಷ್ಟು ಮಿರ್ಚಿ ನೀಡಲಾಗುತ್ತದೆ. ಇಂತಹದೊಂದು ಮಿರ್ಚಿ ಜಾತ್ರೆ ನಡೆಯುವುದು ಕೊಪ್ಪಳದಗವಿಮಠದಲ್ಲಿ (Koppal Gavimath Fair) . ಹೌದು ಗವಿಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, …

Read More »

ಪೋಷಕರ ಜೀವ ಬೆದರಿಕೆ ಆರೋಪ ,ರಕ್ಷಣೆ ಕೋರಿ ರಕ್ಷಣೆ ಕೋರಿ ಬಳ್ಳಾರಿ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಅವರಿಗೆ ಮನವಿ

ಬಳ್ಳಾರಿ, ಜನವರಿ 28: ಪ್ರೀತಿಸಿ ಮದುವೆಯಾಗಿದಕ್ಕೆ ನವ ಜೋಡಿಗಳಿಗೆ ವಧುವಿನ ಪೋಷಕರು ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಪೋಷಕರು ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನವಜೋಡಿರಕ್ಷಣೆ ಕೋರಿ ಬಳ್ಳಾರಿ (Bellary) ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ (SP) ಅವರಿಗೆ ಮನವಿ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಗೋನಾಳ ಗ್ರಾಮದ ನಾರಾಯಣ, ಸಿರಗುಪ್ಪ ತಾಲೂಕಿನ ಊಳೂರು ಗ್ರಾಮದ ಶಿಲ್ಪಾ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದಾರೆ. ಶಿಲ್ಪಾ ಬಳ್ಳಾರಿಯಲ್ಲಿ ದೊಡ್ಡಮ್ಮನ ಮನೆಯಲ್ಲಿದ್ದುಗೊಂಡು, ಹೈಸ್ಕೂಲ್ ಓದುವ ವೇಳೆ ನಾರಾಯಣನನ್ನು …

Read More »

ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ;

ಹುಬ್ಬಳ್ಳಿ, ಜ.28: ವಾಣಿಜ್ಯ ನಗರಿ ಹುಬ್ಬಳ್ಳಿ ಅದ್ಧೂರಿ ಸಾಂಸ್ಕ್ರತಿಕ ಮಹೋತ್ಸವ ಮತ್ತು ಕ್ರೀಡೋತ್ಸವಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಪ್ರತಿವರ್ಷದಂತೆ ‘ಸಂಸದ ಸಾಂಸ್ಕೃತಿಕ ಮಹೋತ್ಸವ-24’ ಅಂಗವಾಗಿ 5ನೇ ಸಾಲಿನ ಹುಬ್ಬಳ್ಳಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ (Kite Festival) ಹಾಗೂ ಸಾಂಸ್ಕೃತಿಕ ಮಹೋತ್ಸವವನ್ನು ಏರ್ಪಡಿಸಿದ್ದು ನಿನ್ನೆ ಅದ್ದೂರಿ ಚಾಲನೆ ಸಿಕ್ಕಿದೆ. ಚೋಟಾ ಮುಂಬೈಯಲ್ಲಿ ಐತಿಹಾಸಿಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಕಲರವ ಹರಡಿದೆ. ಹುಬ್ಬಳ್ಳಿ ಶಹರದಲ್ಲಿ ಸಂಸದ ಸಾಂಸ್ಕ್ರತಿಕ …

Read More »