ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ(DGP) ಪ್ರವೀಣ್ ಸೂದ್‍ಗೆ ಇದೀಗ ಕೊರೊನಾ ಭೀತಿ ಎದುರಾಗಿದೆ. ಬಳ್ಳಾರಿಯ ಪೊಲೀಸ್ ಸಿಬ್ಬಂದಿಗೆ ಶನಿವಾರ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದರಿಂದಾಗಿ ಪ್ರವೀಣ್ ಸೂದ್ ಅವರಿಗೂ ಕೊರೊನಾ ಭೀತಿ ಎದುರಾಗಿದೆ. ಜಿಲ್ಲೆಯ ಹೊಸಪೇಟೆಯ ಮೂವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಪ್ರವೀಣ್ ಸೂದ್ ಬಳ್ಳಾರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. 40ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರ …
Read More »ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ನಿಧನಕ್ಕೆ ನಟಿ ರಮ್ಯಾ ಸಂತಾಪ….
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ನಿಧನಕ್ಕೆ ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಅವರು ಇಂದು ಹೃದಯಾಘತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿಯಿಂದ ಇಡೀ ಚಂದನವನಕ್ಕೆ ಸಿಡಿಲು ಬಡಿದಂತೆ ಆಗಿದೆ. 25ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಮುಂದೆ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದ ಚಿರು ಸಾವಿಗೆ ಹಲವಾರು ನಟರು ಸಂತಾಪ ಸೂಚಿಸಿದ್ದಾರೆ. ಚಿರಂಜೀವಿ ಸರ್ಜಾ ಅವರೊಂದಿಗಿನ ಫೋಟೋವನ್ನು …
Read More »ಕೆಎಸ್ಆರ್‌ಟಿಸಿ ನೌಕರರ ವರ್ಗಾವಣೆಗೆ ಆನ್‍ಲೈನ್ ವ್ಯವಸ್ಥೆ…………….
ಬೆಂಗಳೂರು, ಜೂ.7- ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸೋದರ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಆನ್‍ಲೈನ್ ವರ್ಗಾವಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸಂಚಾರ ಮತ್ತು ತಾಂತ್ರಿಕ ಇಲಾಖೆಯ ಅಂತರ ವಿಭಾಗ, ವಿಭಾಗ ಮಟ್ಟದ ದರ್ಜೆ-3, ಮೇಲ್ವಿಚಾರಕೇತರ ನೌಕರರ ವರ್ಗಾವಣೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನೌಕರರ ವರ್ಗಾವಣೆಯನ್ನು ಖಾಲಿ ಸ್ಥಾನಗಳ ಲಭ್ಯತೆ ಹಾಗೂ ನಿಗಮದ ಆವಶ್ಯಕತೆಗೆ ಅನುಗುಣವಾಗಿ ಸರಳಗೊಳಿಸುವ ಉದ್ದೇಶದಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನೌಕರರ ವರ್ಗಾವಣೆ ಮಾರ್ಗ …
Read More »ರಾಜ್ಯಸಭೆ ಚುನಾವಣೆಗೆ ನಾಳೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ..?
ಬೆಂಗಳೂರು, ಜೂ.7- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಈತನಕ ಯಾವುದೇ ಅಭ್ಯರ್ಥಿ ತನ್ನ ಉಮೇದುವಾರಿಕೆಯನ್ನು ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸಲು ಜೂ.9 ಕೊನೆಯ ದಿನವಾಗಿದ್ದು, ಬಹುತೇಕ ನಾಳೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಜೂ.19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹೊರತುಪಡಿಸಿ ಇತರೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇದುವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿರುವುದರಿಂದ ನಾಳೆ ಬಹುತೇಕ ಅಭ್ಯರ್ಥಿಗಳು …
Read More »ಚಿಕಿತ್ಸೆ ಪಡೆದು ಬಿಲ್ ಕಟ್ಟಡ ವೃದ್ಧನನ್ನು ಕಟ್ಟಿ ಹಾಕಿದ ಆಸ್ಪತ್ರೆ ಸಿಬ್ಬಂದಿ..!
ಭೂಪಾಲ್, ಜೂ.7- ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಹಣ ಪಾವತಿಸಲು ವಿಳಂಬ ಮಾಡಿದ ಬಡ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್‍ಗೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ನಡೆದಿದೆ. ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆದ ವೃದ್ಧರೊಬ್ಬರು 11 ಸಾವಿರ ರೂ.ಗಳನ್ನು ಶಾಜಿಪುರದಲ್ಲಿ ಖಾಸಗಿ ಆಸ್ಪತ್ರೆಗೆ ಪಾವತಿಸಬೇಕಿತ್ತು. ಹಣವಿಲ್ಲದ ಕಾರಣ ಪಾವತಿ ವಿಳಂಬವಾಯಿತು. ಆದರೆ, ಆಸ್ಪತ್ರೆ …
Read More »ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿ,ಬೆಳಗಾವಿ 38 ಜನರಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24ಗಂಟೆಯಲ್ಲಿ 239 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5,452ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕಲಬುರಗಿ 39, ಯಾದಗಿರಿ 39, ಬೆಳಗಾವಿ 38, ಬೆಂಗಳೂರು ನಗರ 24, ದಕ್ಷಿಣ ಕನ್ನಡ 17, ದಾವಣಗೆರೆ 17, ಉಡುಪಿ 13, ಶಿವಮೊಗ್ಗ 12, ವಿಜಯಪುರ 9, ಬೀದರ್ 7, ಬಳ್ಳಾರಿ …
Read More »ನಾಳೆಯಿಂದ ಹೋಟೆಲ್-ರೆಸಾರ್ಟ್ ಓಪನ್, ವ್ಯಾಪಾರ-ವಹಿವಾಟು ಸಹಜ ಸ್ಥಿತಿಯತ್ತ ……….
ಬೆಂಗಳೂರು, ಜೂ.7- ಒಂದೆಡೆ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ,ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ಶಾಪಿಂಗ್ ಮಾಲï, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ನಾಳೆಯಿಂದ ಪುನರಾರಂಭಗೊಳ್ಳುತ್ತಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳು ಆರಂಭವಾಗಲಿವೆ. ಇದರಿಂದ ಕರ್ನಾಟಕ ಮತ್ತೆ ಸಹಜ ಸ್ಥಿತಿಯತ್ತ ಮರಳಲಿದ್ದು, ವ್ಯಾಪಾರ ವಹಿವಾಟು ಇಲ್ಲದೆ ಕೆಂಗೆಟ್ಟಿದ್ದ ಹೊಟೇಲ್ ಮಾಲೀಕರು, ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ದಿಮೆದಾರರು ಸೇರಿದಂತೆ ಮತ್ತಿತರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಆದರೆ, ಇಲ್ಲಿಯೂ ಕೆಲವು ಮಾರ್ಗಸೂಚಿಗಳನ್ನು …
Read More »ನಂಬೋದಕ್ಕೆ ಆಗ್ತಿಲ್ಲ, ಬಿಟ್ಟು ಹೋದ್ರು: ಸರ್ಜಾ ಕುಟುಂಬದ ಆಪ್ತ
ಬೆಂಗಳೂರು: ಚಿರಂಜೀವಿ ಸಾವು ನಂಬೋದಕ್ಕೆ ಆಗುತ್ತಿಲ್ಲ. 25 ನಿಮಿಷದ ಹಿಂದೆ ನಮ್ಮನ್ನು ಬಿಟ್ಟು ಹೋದ್ರು ಅಂತಾ ಸರ್ಜಾ ಕುಟುಂಬದ ಆಪ್ತ ಅನಿರಿಚ್ ಶನಿವಾರ ರಾತ್ರಿ ತಲೆಸುತ್ತು ಬಂದಿತ್ತು. ಕೂಡಲೇ ತಮ್ಮ ದೃವ ಸರ್ಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಇಂದು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. 39 ವರ್ಷದ ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆ ನಟಿ ಮೇಘನಾ ರಾಜ್ ಅವರನ್ನ ಮದ್ವೆಯಾಗಿದ್ದರು. ಇಂದು ಬೆಂಗಳೂರಿನ ಅಪೋಲೋ …
Read More »ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ………….
ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಜ್ ಕುಮಾರ್ ಖಟ್ರಿ ಅವರನ್ನು ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ ಕುಮಾರ್ ಖಟ್ರಿ ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೃಷಿ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆಗೆ ವರ್ಗಾಯಿಸಲಾಗಿದೆ. ಗಂಗಾ ರಾಮ್ ಬದರಿಯಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ …
Read More »ಫಾರ್ಮ್ ಹೌಸ್‍ನಲ್ಲಿ ಕುದುರೆಗಳಿಗೆ ದಚ್ಚು ಮಾಲಿಶ್…………….
ಬೆಂಗಳೂರು: ಸ್ಯಾಂಡಲ್‍ವುಡ್‍ನ ಜಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಸ್ಟ್ರಿಯಲ್ಲಿ ಓಡುವ ಕುದುರೆ ಅಂತಾನೇ ಕರೆಸಿಕೊಳ್ಳುವ ನಟ. ಸದ್ಯ ದರ್ಶನ್ ಸಿನಿಮಾ ಕೆಲಸಗಳಿಲ್ಲದೆ ಏನ್ ಮಾಡುತ್ತಿದ್ದಾರೆ ಎನ್ನುವ ಲಕ್ಷಾಂತ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ಕುದುರೆ, ಗೋವು ಸೇರಿದಂತೆ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ದಚ್ಚು ಆಗಾಗ ಫಾರ್ಮ್‍ಗೆ ಹೋಗಿ ಅವುಗಳೊಂದಿಗೆ ಕಾಲ ಕಳೆಯುತ್ತಾರೆ. …
Read More »