Breaking News

ಬೆಂಗಳೂರು

ಯತ್ನಾಳ್ ಹೇಳಿಕೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದಿಂದ ಅಮಾನತು ಇಲ್ಲವೇ ಉಚ್ಛಾಟನೆ

ಬೆಂಗಳೂರು,ಅ.22-ಪಕ್ಷದ ನಿಯುಮ ಉಲ್ಲಂಘಿಸಿ ನಾಯಕರ ವಿರುದ್ದ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಮುಜುಗರ ಉಂಟುಮಾಡುತ್ತಿರುವ ಮಾಜಿ ಸಚಿವ ಹಾಗೂ ವಿಜಪುರದ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಬಿಜೆಪಿ ಶಿಸ್ತು ಕ್ರಮ ಜರಗಿಸಲು ಮುಂದಾಗಿದೆ. ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉಳಿದಿರುವವರು ಇದೇ ಹಾದಿ ತುಳಿಯಬಹುದು ಎಂಬ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಘಟಕ, ಒಂದೆರೆಡು ದಿನದಲ್ಲಿ ಅವರ ಹೇಳಿಕೆ ಕುರಿತು ನೋಟಿಸ್ ಜಾರಿ ಮಾಡಲು …

Read More »

ಬೆಂಗಳೂರಿನಲ್ಲಿ ರಸ್ತೆಗಿಳಿದ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್

ಬೆಂಗಳೂರು, ಅಕ್ಟೋಬರ್, 22- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇಶಿಯ ನಿರ್ಮಿತ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇಂದು ಚಾಲನೆ ನೀಡಿದರು. ಬಿಎಂಟಿಸಿಯ ಕೇಂದ್ರ ಕಚೇರಿ ಆವರಣದಲ್ಲಿ ಈ ಬಸ್‍ಗೆ ಚಾಲನೆ ನೀಡಿದ ನಂತರ ವಿಧಾನಸೌಧದವರೆಗೂ ಅದೇ ಬಸ್‍ನಲ್ಲಿ ಪ್ರಯಾಣಿಸಿದರು. ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಎಲೆಕ್ಟ್ರಿಕ್ ಬಸ್‍ನ್ನು ವೀಕ್ಷಣೆ ಮಾಡಿ ನಂತರ ಉಪಮುಖ್ಯಮಂತ್ರಿಯವರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್ …

Read More »

ಪ್ರಸಕ್ತ  ಸಾಲಿನ ಪಿಯುಸಿ ಯ ಶೇ. 30 ರಷ್ಟು ಪಠ್ಯವನ್ನು ಕಡಿತಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ಪ್ರಸಕ್ತ  ಸಾಲಿನ ಪಿಯುಸಿ ಯ ಶೇ. 30 ರಷ್ಟು ಪಠ್ಯವನ್ನು ಕಡಿತಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ವಿಜ್ಞಾನ ವಿಷಯಗಳನ್ನು (ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ) ಹೊರತುಪಡಿಸಿ ಇತರೆ ವಿಷಯಗಳಲ್ಲಿ ಪಠ್ಯವನ್ನು ಕಡಿತಗೊಳಿಸಲು ಪಿಯು ಬೋರ್ಡ್ ನಿರ್ಧಾರ ಮಾಡಿದೆ. ಈ ಪಠ್ಯಕ್ರಮ 2020–21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ವಿಜ್ಞಾನ ವಿಷಯಗಳ ಪಠ್ಯವನ್ನು ಸಿಬಿಎಸ್‌ಇ ಶಿಕ್ಷಣ …

Read More »

ಪೋಕರಿ ಕಟೀಲ್ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಪ್ರತಿಯಾಗಿ ಸಿದ್ದರಾಮಯ್ಯ ಸರಣಿ ಟ್ವೀಟ್‍ಗಳ ಮೂಲಕ ತಿರುಗೇಟು ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಈ ನಳಿನ್ ಕುಮಾರ್ ಅವರಿಗೆ ಸ್ವಲ್ಪ ಬುದ್ಧಿ ಹೇಳಿ …

Read More »

ಹಸ್ತಾಕ್ಷರ ಚಳುವಳಿ (ಸಹಿ) ಅಭಿಯಾನಕ್ಕೆ ರೈತರು ಬೆಂಬಲಿಸಿ: ಶಾಸಕ ಸತೀಶ್ ಜಾರಕಿಹೊಳಿ

ಬೆಂಗಳೂರು : ರೈತ ವಿರೋಧಿ ಮಸೂದೆಯನ್ನು ಹಿಂಪಡೆಯುವಂತೆ ಕಾಂಗ್ರೆಸ್ ನಡೆಸುತ್ತಿರುವ ಹಸ್ತಾಕ್ಷರ ಚಳುವಳಿ (ಸಹಿ) ಅಭಿಯಾನಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನವಿ ಮಾಡಿಕೊಂಡರು. ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಇಂದು ರೈತರ ಹಸ್ತಾಕ್ಷರ ಚಳುವಳಿ (ಸಹಿ)ಅಭಿಯಾನಕ್ಕೆ ಬೆಂಬಲ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರದ 3 ಕೃಷಿ ಸುಗ್ರಿವಾಜ್ಞೆಗಳಾದ ಕೃಷಿ ವ್ಯಾಪಾರ ಮತ್ತು ವಾಣಿಜ್ಯ ಸುಗ್ರಿವಾಜ್ಞೆ, ರೈತರ ಬೆಲೆ ಭರವಸೆ ಮತ್ತು ಕೃಷಿ …

Read More »

ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಬೆಂಗಳೂರು: ಅಕಾಲಿಕ ಮೃತ್ಯವಿಗೀಡಾದ ಸ್ಯಾಂಡಲ್​ವುಡ್​ ನಾಯಕ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಂದು ನಗರದ KR ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.  ಚಿಕ್ಕಪ್ಪನ ತೋಳಿನಲ್ಲಿ ಕಂದಾ ನಾನು.. ಇನ್ನು ಇತ್ತ ಸರ್ಜಾ ಕುಟುಂಬದಲ್ಲಿ ಸಂತೋಷ ಸಂಭ್ರಮ ರಾರಾಜಿಸುತ್ತಿದೆ. ಅಣ್ಣ ಚಿರಂಜೀವಿ ಸರ್ಜಾ.. ಜೂನಿಯರ್ …

Read More »

ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಬೆಂಗಳೂರು: ಅಕಾಲಿಕ ಮೃತ್ಯವಿಗೀಡಾದ ಸ್ಯಾಂಡಲ್​ವುಡ್​ ನಾಯಕ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಂದು ನಗರದ KR ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಇತ್ತ ಸರ್ಜಾ ಕುಟುಂಬದಲ್ಲಿ ಸಂತೋಷ ಸಂಭ್ರಮ ರಾರಾಜಿಸುತ್ತಿದೆ. ಅಣ್ಣ ಚಿರಂಜೀವಿ ಸರ್ಜಾ.. ಜೂನಿಯರ್ ಚಿರು ರೂಪದಲ್ಲಿ ಬಂದೇಬರುತ್ತಾನೆ ಎಂದು …

Read More »

ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರಿಬ್ಬರು ಮಾರಮಾರಿ

ಬೆಂಗಳೂರು: ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರಿಬ್ಬರು ಮಾರಮಾರಿ ಬಡಿದಾಡಿಕೊಂಡಿರುವ ಘಟನೆ ಜೆಪಿ ನಗರದ ಎಸ್.ವಿ ಇನ್‍ಫ್ರಾ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ. ಒಂದೇ ಅಪಾರ್ಟ್‍ಮೆಂಟ್‍ನಲ್ಲಿ ಬೇರೆ ಬೇರೆ ಫ್ಲಾಟ್‍ಗಳಲ್ಲಿ ವಾಸವಿರೋ ಕುಮಾರಿ ಹಾಗೂ ವರಲಕ್ಷ್ಮಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಕಳೆದ 14ರಂದು ಚಪ್ಪಲಿ ಸ್ಟಾಂಡ್ ವಿಚಾರಕ್ಕೆ ವರಲಕ್ಷ್ಮಿ ಹಾಗೂ ಕುಮಾರಿ ನಡುವೆ ಗಲಾಟೆ ಶುರುವಾಗಿತ್ತು. ಕುಮಾರಿ ಅವರ ಚಪ್ಪಲಿ ಸ್ಟ್ಯಾಂಡ್ ಅನ್ನು ವರಲಕ್ಷ್ಮಿ ಡ್ಯಾಮೇಜ್ ಮಾಡಿದ್ದರು. ಹೂವಿನ ಫಾಟ್‍ನಿಂದ ಚಪ್ಪಲಿ ಸ್ಟ್ಯಾಂಡ್‍ಗೆ ಹೊಡೆದು ವರಲಕ್ಷ್ಮಿ …

Read More »

ಕಾಂಗ್ರೆಸ್‌ ಮುಖಂಡರತ್ತ ಸಂಬರಗಿ ಮಾತು

ಬೆಂಗಳೂರು : ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್‌ ಧರ್ಮದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿ ಎಲ್ಲ ವಿದ್ಯಾವಂತರಿಗೆ ಮಾಡಿರುವ ಅವಮಾನ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಟೀಕಿಸಿದ್ದಾರೆ. ಈ ಸಂಬಂಧ ಅಭ್ಯರ್ಥಿಗಳ ಪಟ್ಟಿಸಮೇತ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪ್ರಕಾಶ್‌ ಸಂಬರಗಿ ಅವರು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಕುಮಾರ್‌ ಅವರು ಪೀಟರ್‌ ಆಗಿದ್ದಾರೆ. ಇದನ್ನೇ ಅರ್ಹತೆಯಾಗಿ ಪರಿಗಣಿಸಿ …

Read More »

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ನವೆಂಬರ್ 2 ರೊಳಗೆ ಚುನಾವಣೆ ಪೂರ್ಣಗೊಳಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನ ತೆರವುಗೊಳಿಸಿದೆ. ನಿಯಮದಂತೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನೀಡಲಾಗಿದೆ. ಚುನಾವಣೆ ಘೋಷಣೆ ನಂತರ ತಡೆಯಾಜ್ಞೆ ಸೂಕ್ತವಲ್ಲ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ …

Read More »