ಬೆಂಗಳೂರು: ನಿನ್ನೆ ರಾತ್ರಿ ಖಾಸಗಿ ಹೋಟೆಲ್‍ನಲ್ಲಿ ಪ್ರತ್ಯೇಕವಾಗಿ ನಡೆದ ಸಚಿವರು ಹಾಗೂ ಶಾಸಕರು ಸಭೆಗೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ‘ಈಗಲೂ ಕೂಡ ಅವರೆಲ್ಲರೂ ನನ್ನ ಸ್ನೇಹಿತರೆ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಮುಂದೆ ಈ ರೀತಿ ಸಭೆಗಳು ನಡೆಯಬಾರದು. ಪ್ರತ್ಯೇಕ ಸಭೆಗಳನ್ನು ನಡೆಸುವುದಕ್ಕೆ ಕಡಿವಾಣ ಹಾಕಬೇಕು. ಇದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಾನು ನಾಯಕ ಎಂದು ಎಲ್ಲಿಯೂ ಹೇಳಿಲ್ಲ. …
Read More »ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ಮಾರಾಟಕ್ಕೆ
ಬೆಂಗಳೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ಮಾರಾಟಕ್ಕೆ ಆಂಧ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಹಿಂದೂಪರ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ. ಮಂತ್ರಾಲಯದ ಒಟ್ಟು 208 ಎಕರೆ ಇನಾಮು ಭೂಮಿಯನ್ನು ಮಾರಾಟ ಮಾಡಲು ಸರ್ಕಾರ ಪ್ರಕಟಣೆ ಹೊರಡಿಸಿದೆ. ಮಠಕ್ಕೆ ಸಂಬಂಧಿಸಿದ ವಡ್ಡೆಪಲ್ಲೆ, ಮಲದಕಲ್, ಧರೂರು ಮಂಡಲ ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿಯಾಗಿದೆ ಎಂಬ ಕಾರಣಕ್ಕೆ ಮಾರಾಟ ಮಾಡಲು ಮಠವೇ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದ ಕಾರಣ ಸರ್ಕಾರ ಪ್ರಕಟಣೆ ಹೊರಡಿಸಿದೆ. …
Read More »ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,322 ಮಂದಿಗೆ ಕೊರೊನಾ ಪಾಸಿಟಿವ್…!
ನವದೆಹಲಿ,ನ.28-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೋಟಿಯತ್ತ ದಾಪುಗಾಲಿಡುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 93.51 ಲಕ್ಷಕ್ಕೆ ಏರಿಕೆಯಾಗಿದ್ದು, ಪ್ರತಿ ನಿತ್ಯ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 41,322 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ಹಲವಾರು ದಿನಗಳಿಂದ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೋಟಿ ದಾಟುವ ಸಾಧ್ಯತೆಗಳಿವೆ. ಅದಾಗ್ಯೂ ಚೇತರಿಕೆ ಪ್ರಮಾಣ ಶೇ.93.68ಕ್ಕೆ ಏರಿಕೆಯಾಗಿದೆ. ಇದುವರೆಗೂ 87,59,969 ಸೋಂಕಿತರು …
Read More »B.S.Y.ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿದ್ದೆ ಮಾತ್ರೆ ಸೇವಿಸಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದು, ರಾಮಯ್ಯ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂತೋಷ್ ಅವರನ್ನು ಭೇಟಿ ಮಾಡಲು ಸಿಎಂ ಯಡಿಯೂರಪ್ಪ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
Read More »ಖಾಸಗಿ ಶಾಲೆಗಳು ನಡೆಸುತ್ತಿರುವ ಆನ್‍ಲೈನ್ ಶಿಕ್ಷಣ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಅದು ಸ್ಥಗಿತಗೊಳ್ಳುವುದಿಲ್
ಬೆಂಗಳೂರು,ನ.27- ಖಾಸಗಿ ಶಾಲೆಗಳು ನಡೆಸುತ್ತಿರುವ ಆನ್‍ಲೈನ್ ಶಿಕ್ಷಣ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಅದು ಸ್ಥಗಿತಗೊಳ್ಳುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಭರವಸೆ ನೀಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಜತೆ ಇಂದು ಸಭೆ ನಡೆಸಿದ ಅವರು, ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಮುಚ್ಚಿದ್ದು, ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಬೋಧನೆ ಮಾಡುತ್ತಿವೆ. ಶುಲ್ಕ ಕಟ್ಟದೇ ಇರುವ ವಿದ್ಯಾರ್ಥಿಗಳಿಗೆ …
Read More »ಯಡಿಯೂರಪ್ಪ ಮತ್ತೊಂದು ಅಧಿವಗೆ ಸಿಎಂ ಆಗುವ ಆಸೆ ಹೊಂದಿಲ್ಲ: ಪರಮಶಿವಯ್ಯ
ಬೆಂಗಳೂರು, ನ.27- ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೊಂದು ಅಧಿವಗೆ ಸಿಎಂ ಆಗುವ ಆಸೆ ಹೊಂದಿಲ್ಲ. ಹಾಗಾಗಿ ಅವರು ಓಲೈಕೆ ರಾಜಕಾರಣ ಮಾಡುವ ಅಗತ್ಯ ಇಲ್ಲ ಎಂದು ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘ ಅವಯವರೆಗೂ ಯಡಿಯೂರಪ್ಪ ರಾಜಕೀಯದಲ್ಲಿದ್ದಾರೆ. ಅಧಿಕಾರದ ಕೊನೆಯ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಅವರದು. ಹಾಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಇದನ್ನು ಓಲೈಕೆ ರಾಜಕಾರಣ …
Read More »ಪೊಲೀಸ್ ಇಲಾಖೆ ಆಧುನಿಕರಣಕ್ಕೆ ಮುಂದಿನ ಬಜೆಟ್‍ನಲ್ಲಿ 100 ಕೋಟಿಗಳ ಅನುದಾನ:B.S.Y.
ಬೆಂಗಳೂರು,ನ.27- ಪೊಲೀಸ್ ಇಲಾಖೆ ಆಧುನಿಕರಣಕ್ಕೆ ಮುಂದಿನ ಬಜೆಟ್‍ನಲ್ಲಿ 100 ಕೋಟಿಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ಸಮುದಾಯ ಭವನ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶಲಾಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪೊಲೀಸ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಅದನ್ನು ಇನ್ನಷ್ಟು ಶಸಕ್ತಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಪ್ರಯೋಗಾಲಯದ ಪ್ರಯೋಜನ ಸಮಾಜಕ್ಕೆ ದೊರೆಯಲಿ ಎಂದು ಆಶೀಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ …
Read More »2020ನೇ ಸಾಲಿನ ‘ವೀರ ಕನ್ನಡಿಗ ಪ್ರಶಸ್ತಿ’ಗೆ ಬೆಳಗಾವಿ ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ.
ಬೆಂಗಳೂರು : ಹೂ ಅಲ್ ಶಿಫಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್, ಹಾಗೂ ಕರ್ನಾಟಕದ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘರ್ಷ ಸಮಿತಿ ಸಹಯೋಗದಲ್ಲಿ 2020ನೇ ಸಾಲಿನ ‘ವೀರ ಕನ್ನಡಿಗ ಪ್ರಶಸ್ತಿ’ಗೆ ಬೆಳಗಾವಿ ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಗುರುಭವನ ಸಂಭಾಣಗದಲ್ಲಿ ಇದೇ 29ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 2020 ನೇ ಸಾಲಿನ ಪ್ರಶಸ್ತಿಗೆ ಹತ್ತು …
Read More »ರಮೇಶ್ ಜಾರಕಿಹೊಳಿ ಮತ್ತು ನಾನು 20 ವರ್ಷದ ಸ್ನೇಹಿತರು ಅವರು ನನ್ನ ಪರವಾಗಿ ಹೈಕಮಾಂಡ್ ನಾಯಕರ ಬಳಿ ಮಾತನಾಡುತ್ತಿದ್ದಾರೆ ಸಿ.ಪಿ.ಯೋಗೇಶ್ವರ್
ಬೆಂಗಳೂರು, ನ.27- ಸರ್ಕಾರ ರಚನೆ ವೇಳೆ ನನ್ನ ಪಾತ್ರ ಏನು ಎಂಬುದು ಹೈಕಮಾಂಡ್ ನಾಯಕರಿಗೆ ಗೊತ್ತಿದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ನವದೆಹಲಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಗಮನಿಸಿದ್ದೇನೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು. ಇಂದು ಬಿ.ಎಲ್.ಸಂತೋಷ್ ಅವರನ್ನು …
Read More »ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭ
ಬೆಂಗಳೂರು: ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭಿಸಿದೆ.ಆರ್ಥಿಕ ಸಂಕಷ್ಟದ ನಡುವೆ ಸಿಎಂ ಯಡಿಯೂರಪ್ಪ, 2021-22ನೇ ಸಾಲಿನ ಆಯವ್ಯಯ ಮಂಡಿಸಬೇಕಾಗಿದೆ. ತೆರಿಗೆ ಸಂಗ್ರಹದಲ್ಲಿನ ಕೊರತೆ, ಸೀಮಿತ ಆದಾಯ ಮೂಲ ಸರ್ಕಾರದ ಕೈಯನ್ನು ಕಟ್ಟಿ ಹಾಕಿದೆ. ಹೀಗಾಗಿ 2021-22ನೇ ಸಾಲಿನ ಆಯವ್ಯಯ ಸಿಎಂಗೆ ಕಬ್ಬಿಣದ ಕಡಲೆಯಾಗಿದೆ. ಒಂದೆಡೆ ಜನಪ್ರಿಯ ಯೋಜನೆಗಳು ಕೊಡುವ ಅಗತ್ಯವೂ ಇದೆ, ಇನ್ನೊಂದೆಡೆ ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತಗೊಳಿಸು ಹಾಗಿಲ್ಲ. ಈ …
Read More »
Laxmi News 24×7