ಬೆಳಗಾವಿ: ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ್ ಬಾಕಿ ಬಿಲ್ ನೀಡದ ಇರುವ ಹಿನ್ನೆಲೆಯಲ್ಲಿ ರೈತನೊಬ್ಬ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
https://www.facebook.com/105350550949710/posts/202232631261501/?sfnsn=wiwspmo
ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದ ಶಿವಾನಂದ ಗೋಹಾರ್ ತನ್ನ ಸಮಾಧಿಯನ್ನು ತೋಡಿಕೊಂಡ ರೈತ ಎನ್ನಲಾಗುತ್ತಿದೆ.
ಮಲಪ್ರಭಾ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬಿನ, 85 ಸಾವಿರ ರೂಪಾಯಿ ಬಾಕಿ ಬಿಲ್ ಬರಬೇಕು . ಕಾರ್ಖಾನೆಗೆ ಈಗಾಗಲೇ 20 ಬಾರಿ ಅಲೆದಾಡಿದ್ದೇನೆ. ಆದರೆ ಏನು ಪ್ರಯೋಜನವಾಗಿಲ್ಲ. ಈಗಾಗಲೇ ಲಾಕ್ ಡೌನ್ ದಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿ ಇದ್ದೇವೆ. ನನಗೆ ಬಂದಿರುವ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕಣ್ಣಿರು ಇಟ್ಟಿದ್ದಾರೆ.
ಇತಂಹ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿಲ್ ಬಿಲ್ ನೀಡದಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿಯಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಎಂ.ಕೆ.ಹುಬ್ಬಳ್ಳಿಯ ಅನೇಕ ರೈತರ ಮೂರು ವರ್ಷದ ಕಬ್ಬಿನ ಬಾಕಿ ಬಿಲ್ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದೇವೆ. ತಕ್ಷಣ ಕಬ್ಬಿನ್ ಬಾಕಿ ಕಾರ್ಖಾನೆಯಿಂದ ಕೋಡಿಸುವಂತೆ ಮನವಿ ಮಾಡಿಕೊಂಡರು.