Breaking News

ಇವತ್ತು ದೇವಸ್ಥಾನಕ್ಕೂ ಹೋಗಿಲ್ಲ, ಪೂಜೆನೂ ಮಾಡ್ಸಿಲ್ಲ’ ಮಗಳ ಹುಟ್ಟುಹಬ್ಬ ಆಚರಿಸಲಾಗದೆ ರೇಷ್ಮಾ ಗಲ್ರಾನಿ ಬೇಸರ

Spread the love

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂದು ಅವರ ಜನುಮದಿನವಾಗಿದ್ದು ಅಬ್ಬರದ ಪಾರ್ಟಿಗಳಿಂದ ದೂರ ಇದ್ದಾರೆ. ಈ ಬಗ್ಗೆ ಸಂಜನಾ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.

ಅಬ್ಬರದ ಪಾರ್ಟಿಗಳಿಲ್ಲ, ಕೇಕ್ ಕಟಿಂಗ್​ಗಳಿಲ್ಲ.. ವಿಷ್ ಗಳಿಲ್ಲ.. ಸ್ಟಾರ್ ನಟಿ ಸಂಜನಾ ತನ್ನ ಬರ್ತ್ ಡೇಯನ್ನು ಸ್ಟಾರ್ ಹೋಟೆಲ್​ಗಳಲ್ಲಿ, ನಗರದ ಹೊರವಲಯದ ರೆಸಾರ್ಟ್​ನಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು.

ಆದರೆ ಈ ಬಾರಿ ಪರಪ್ಪನ ಅಗ್ರಹಾರ ಜೈಲಲ್ಲಿ ಸಂಜನಾ ಗಲ್ರಾನಿ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಗಿದೆ. ಜೈಲಿನಲ್ಲಿರುವ ಸಂಜನಾ ತಮ್ಮ ಬರ್ತ್ ಡೇ ದಿನವಾದ ಇಂದು ಯಾರ ಸಂಪರ್ಕಕ್ಕೂ ಸಿಗದೆ ಇರಲು ಬಯಸಿದ್ದಾರೆ. ಕೇವಲ ಅಮ್ಮ-ಅಪ್ಪ ಕೊಟ್ಟ ಬಟ್ಟೆಯನ್ನು ತೊಟ್ಟು ಬರ್ತ್ ಡೇ ಆಚರಣೆ ಮಾಡಲಿದ್ದಾರೆ. ಸಂಜನಾಳಿಗೆ ಜೈಲಿನಲ್ಲಿ ಕೊಡೋ ರಾಗಿ ಮುದ್ದೆಯೇ ಇವತ್ತು ಟ್ರೀಟ್​ ಆಗಿದೆ. ಕನಸು ಮನಸಲ್ಲೂ ಊಹಿಸದ ಬರ್ತ್ ಡೇ ದಿನ ಇಂದು ಸಂಜನಾಳಿಗೆ ಸಿಕ್ಕಿದೆ.

ಪ್ರತಿ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನ ಆಚರಿಸುತ್ತಿದ್ದೆವು:
ಮಗಳನ್ನ ಭೇಟಿ ಮಾಡಲು ಅನುಮತಿ ಇಲ್ಲ. ಪ್ರತಿ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನ ಆಚರಿಸಲಾಗುತ್ತಿತ್ತು. ಆದ್ರೆ ಈ ಬಾರಿ ಅವಳ ಹೆಸರಲ್ಲಿ ಪೂಜೆ ಸಹ ಮಾಡಿಸಿಲ್ಲ. ದೇವಸ್ಥಾನಕ್ಕೂ ಹೋಗಿಲ್ಲ. ಏನೂ ಮಾಡಿಲ್ಲ ಎಂದು ಸಂಜನಾ ತಾಯಿ ರೇಷ್ಮಾ ಗಲ್ರಾನಿ ಬೇಸರ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ನಟ ದರ್ಶನ್ ಕೇಸ್: ಬೃಹತ್ ಪ್ರತಿಭಟನೆಗೆ ಕರೆ ನೀಡಿದ ಕನ್ನಡ ಒಕ್ಕೂಟ

Spread the loveನಟ ದರ್ಶನ್‌ ಮತ್ತೊಮ್ಮೆ ಪರಪ್ಪನ ಅಗ್ರಹಾರದ ಪಾಲಾಗಿ 187 ದಿನಗಳಾಗಿವೆ. ಕೊರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ