ಬೆಳಗಾವಿ: ಶ್ರೀಲಂಕಾ ದೇಶದ ಕೋಲಂಬೋ ನಗರದಲ್ಲಿ ನಡೆದ ‘ಐರನ್ ಮ್ಯಾನ್ 70.3’ ಸ್ಪರ್ಧೆಯಲ್ಲಿ ಬೆಳಗಾವಿ ಮೀಸಲು ಪಡೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಗಮೇಶ ಅನಿ ‘ಐರನ್ ಮ್ಯಾನ್’ ಪ್ರಶಸ್ತಿ ಪಡೆದಿದ್ದಾರೆ.
ವಿಶ್ವದ ಅತ್ಯಂತ ಕಠಿಣ, ಬಹುಶಿಸ್ತೀಯ ಸಹಿಷ್ಣುತಾ ಸ್ಪರ್ಧೆಗಳಲ್ಲೊಂದಾದ ಇದು ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ ಹಾಗೂ ಪರಿಶ್ರಮದ ಪರೀಕ್ಷೆಯಾಗಿದೆ. ಸ್ಪರ್ಧೆಯನ್ನು ಸಂಗಮೇಶ 5.9 ಗಂಟೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಳೆಯ ಸವಾಲು ಮೀರಿ 90 ಕಿ.ಮೀ. ಸೈಕ್ಲಿಂಗ್ 2.51 ಗಂಟೆಯಲ್ಲಿ ಪೂರ್ಣಗೊಳಿಸಿದರು.
ಬಳಿಕ 21.1 ಕಿಲೋಮೀಟರ್ ಅರ್ಧ ಮ್ಯಾರಥಾನ್ ಓಟವನ್ನು 2.15 ಗಂಟೆಯಲ್ಲಿ ಮುಗಿಸಿದರು. ಸಂಗಮೇಶ ಅನಿ ಕ್ರೀಡಾ ಸಾಧನೆಗೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
Laxmi News 24×7